Kiccha Sudeep: ಜಾಮೀನು ಸಿಗುತ್ತಿದ್ದಂತೆ ದರ್ಶನ್‌ ಬಗ್ಗೆ ಮೌನ ಮುರಿದ ಕಿಚ್ಚ ಸುದೀಪ್‌

ಬೆಂಗಳೂರು, ಡಿಸೆಂಬರ್‌ 17: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಸೇರಿದ್ದ ದರ್ಶನ್​ಗೆ ರೆಗ್ಯೂಲರ್​ ಜಾಮೀನು ನಿಟ್ಟುಸಿರು ಬಿಡುವಂತೆ ಮಾಡಿದೆ. ನಟ ದರ್ಶನ್‌ ಗೆ ಜಾಮೀನು ಸಿಕ್ಕ ಬೆನ್ನಲ್ಲೇ ಅಭಿಮಾನಿಗಳು ಸಂತಸಗೊಂಡಿದ್ದು, ನಟ ದರ್ಶನ್‌ ಕುರಿತು ನಟ ಕಿಚ್ಚ ಸುದೀಪ್‌ ಕೊನೆಗೂ ಮೌನ ಮುತಿದಿದ್ದಾರೆ.

ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ನಟ ಸುದೀಪ್ ಅವರು ನಟ ದರ್ಶನ್‌ ಅವರಿಗೆ ಜಾಮೀನು ಸಿಕ್ಕ ವಿಚಾರವಾಗಿ ಮಾತನಾಡಿ, ನಾನು ಅವತ್ತು ಹೇಳಿದ್ದೆ, ಇವತ್ತು ಹೇಳ್ತಿದಿನಿ. ನಾವು ಕಾನೂನು ಅಲ್ಲ. ಕಾನೂನಿಗೆ ಅದರದ್ದೆ ಆದ ರೀತಿ ನೀತಿ ಇದೆ. ಅವತ್ತು ನಾವು ಪ್ರಶ್ನೆ ಮಾಡೋಕೆ ಆಗ್ಲಿಲ್ಲ. ಇವತ್ತು ನಾವು ಪ್ರಶ್ನೆ ಮಾಡಬಾರದು. ಅವರ ಜೀವನದಲ್ಲಿ ನಾವು ಭಾಗಿಯೇ ಆಗಿಲ್ಲ, ಏನು ನಡೀತು ನನಗೆ ಗೊತ್ತಿಲ್ಲ. ವತ್ತು ನಾನು ಒಂದು ಮಾತು ಹೇಳಿದ್ದೆ. ಜವಾಬ್ದಾರಿಗಳು ಅಂತ ಬಂದಾಗ ಎಲ್ಲಿ ಏನೇನ್‌ ನಡೆಯಬೇಕೋ ಅದು ನಡೆಯಲೇ ಬೇಕು.

Actor Sudeep s Reaction On Darshan s bail

ನಾನು ಅವತ್ತೆ ಹೇಳಿದ್ದೆ. ಫ್ಯಾನ್ಸ್‌ ಕೂಗಾಡೂವಾಗ ಬೈಬೇಡಿ ಅವರಿಗೆ ಏನ್‌ ಮಾತ್ನಾಡ್ಬೇಕೋ ಅಂತ ಗೊತ್ತಾಗುತ್ತಿಲ್ಲ. ಅದಕ್ಕಾಗಿ ಕೂಗಾಡ್ತಿದ್ದಾರೆ. ನಾವ್ಯಾರು ಕಾನೂನು ಅಲ್ಲ. ಸಂಕರ್ಪದಲ್ಲಿ ಇದ್ವಿ ಎಲ್ಲಾ ಗೊತ್ತಿದೆ ಅಂದ್ರೆ ಬೇರೆ ವಿಚಾರ. ಸಂಪರ್ಕ ತಪ್ಪಿ ತುಂಬಾ ಟೈಮ್‌ ಆಗಿದೆ.

ಯಾರು ನಮ್ಮ ಕಲಾವಿದರು ಒಳಗೋಗಿ ಒದ್ದಾಡುತ್ತಿದ್ದಾರೆ ಅಂದ್ರೆ. ತಪ್ಪು ಸರಿ ಸೆಕೆಂಡ್ರಿ. ಆದರೆ, ಖುಷಿ ಪಡುವವರು ನಾವಲ್ಲ.ಈಗ ಜಾಮೀನು ಸಿಕ್ಕು ಹೊರಗಡೆ ಬಂದ್ರು ಅಂತ ಅಯ್ಯೋ ಯಾಕೆ ಅಂತ ಕೇಳುವವರು ನಾವಲ್ಲ. ನನ್ನ ಜೀವನದ ಬಗ್ಗೆ,ನನ್ನ ತಾಯಿ ಬಗ್ಗೆ ನಾನು ಮಾತನಾಡಬಲ್ಲೆ.

ಯಾಕೆಂದ್ರೆ ಆ ವಿಚಾರ ನನಗೆ ಎಲ್ಲಾ ಗೊತ್ತು. ನಾನು ಅಲ್ಲಿ ಇದಿನಿ, ನನಗೆ ಬೇರೆ ಎಲ್ಲಾ ನಿಮ್ಮಿಂದಲೇ ಗೊತ್ತಾಗುತ್ತಿರುವುದು. ಒಂದು ಚಾನೆಲ್‌ ಒಂದೊಂದ್‌ ತರ ಹೇಳುತ್ತೆ. ಇದರಿಂದ ಗೊಂದಲ ಆಗುತ್ತೆ. ಇದು ಮಾತನಾಡುವುದು ತಪ್ಪು. ಮೊನ್ನೆ ಗೊತ್ತಾಯ್ತು ಬೇಲ್‌ ಸಿಕ್ತು ಅಂತ. ಗುಡ್‌ ಸರ್‌ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ದರ್ಶನ್​ ಸೇರಿ 7 ಆರೋಪಿಗಳಿಗೆ ಜಾಮೀನು

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ ಅವರಿಗೆ ಆರೋಗ್ಯ ಸಮಸ್ಯೆಯಿಂದಾಗಿ ಮಧ್ಯಂತರ ಜಾಮೀನು ಸಿಕ್ಕಿತ್ತು. ಇದೀಗ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ದರ್ಶನ್​ರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ವಜೀತ್ ಶೆಟ್ಟಿ ದರ್ಶನ್, ಪವಿತ್ರಾ ಗೌಡ, ಪ್ರದೋಶ್, ಅನುಕುಮಾರ್, ನಾಗರಾಜು, ಲಕ್ಷ್ಮಣ್, ಜಗದೀಶ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜುಲೈ 11 ರಂದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಪ್ರಸ್ತುತ ಅವರು ಅನಾರೋಗ್ಯದ ಕಾರಣ ನೀಡಿ ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದಿದ್ದಾರೆ. ಈಗ ಅವರಿಗೆ ಜಾಮೀನು ಮಂಜೂರಾಗಿದ್ದು, ತಾತ್ಕಾಲಿಕ ನಿರಾಳತೆ ದೊರಕಿದೆ ಎಂದು ಹೇಳಲಾಗಿದೆ. ದರ್ಶನ್ ಪರ ವಾದ ಮಂಡಿಸಿದ್ದ ಸಿವಿ ನಾಗೇಶ್ ಅವರು, ದರ್ಶನ್ ಅವರದ್ದು ರೇಣುಕಾ ಸ್ವಾಮಿ ಕೊಲೆಯಲ್ಲಿ ಪಾತ್ರವಿಲ್ಲ ಎಂದು ವಾದಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+