Doddaballapur - Hoskote: ಎಸ್‌ಟಿಆರ್‌ಆರ್ ಯೋಜನೆಯ ದೊಡ್ಡಬಳ್ಳಾಪುರ- ಹೊಸಕೋಟೆ ಹೆದ್ದಾರಿ ಪೂರ್ಣ

ಬೆಂಗಳೂರು, ಆಗಸ್ಟ್. 03: ಸ್ಯಾಟಲೈಟ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಯೋಜನೆಯ ಮೊದಲ ಹಂತವು ಬಹುತೇಕ ಪೂರ್ಣಗೊಂಡಿದೆ. ಈ ಮೊದಲ ಹಂತದಲ್ಲಿ ದೊಡ್ಡಬಳ್ಳಾಪುರದಿಂದ ಹೊಸಕೋಟೆ ನಡುವಿನ 80 ಕಿಮೀ ಅಳತೆಯ ಎರಡು ಪ್ಯಾಕೇಜ್‌ಗಳ ಕಾಮಗಾರಿ ಮುಗಿದಿದೆ. ಈ ಹೆದ್ದಾರಿಯಿಂದಾಗಿ ಬೆಂಗಳೂರಿನ ಸಮಪರ್ಕವಿಲ್ಲದೇ ನೇರವಾಗಿ ಚೆನ್ನೈ ತಲುಪಬಹುದು.

ಸ್ಯಾಟಲೈಟ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳನ್ನು ಬೆಸೆಯುವ ಹೆದ್ದಾರಿ ಯೋಜನೆಯಾಗಿದೆ. ಬೆಂಗಳೂರಿನ ಸುತ್ತಲಿನ ಎಸ್‌ಟಿಆರ್‌ಆರ್‌ ಒಟ್ಟು 288 ಕಿಮೀ ಉದ್ದವಿದ್ದು, NH 648, NE 7 , NH 648 (101 ಕಿಮೀ) ಮತ್ತು NH 948A ಅನ್ನು ಒಳಗೊಂಡಿದೆ. ಇದರಲ್ಲಿನ ಮೂರು ಪ್ಯಾಕೇಜ್‌ಗಳ ಪೈಕಿ, ದೊಡ್ಡಬಳ್ಳಾಪುರದಿಂದ ಹೊಸಕೋಟೆ ನಡುವಿನ 80 ಕಿಮೀ ಅಳತೆಯ ಎರಡು ಪ್ಯಾಕೇಜ್‌ಗಳ ಕಾಮಗಾರಿಯೂ ಸೇರಿತ್ತು.

80 km between Doddaballapur - Hoskote highway first phase completed

ಇದು ಪೂರ್ಣಗೊಂಡಿದ್ದು, ದಾಬಸ್‌ಪೇಟೆ - ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648 ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ನೇರ ಸಂಪರ್ಕ ಪಡೆಯುತ್ತಿದೆ. ಈಗಾಗಿ ರಾಜಧಾನಿ ಬೆಂಗಳೂರಿನ ಸಂಪರ್ಕವಿಲ್ಲದೆ ರಾಜ್ಯದ ಇತರೆ ಜಿಲ್ಲೆಗಳು ನೇರವಾಗಿ ಚೆನ್ನೈ ಹೆದ್ದಾರಿಗೆ ತಲುಪಬಹುದು. ಹೊರವಲಯದ ರಸ್ತೆಯಾಗಿರುವ ಕಾರಣ ಟ್ರಾಫಿಕ್ ಸಮಸ್ಯೆಯಿರುವುದಿಲ್ಲ. ಜೊತೆಗೆ ಟ್ರಾಫಿಕ್ ಜಂಕ್ಷನ್ ಕೂಡ ಇಲ್ಲಿ ನಿರ್ಮಾಣವಾಗುತ್ತಿದೆ.

ಕಳೆದ ವರ್ಷ ಈ ಸ್ಯಾಟಲೈಟ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ, ದೊಡ್ಡಬಳ್ಳಾಪುರದಿಂದ ಹೊಸಕೋಟೆ ನಡುವೆ 80 ಕಿಮೀ ಅಳತೆಯ ಎರಡು ಪ್ಯಾಕೇಜ್‌ಗಳ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು 2023 ರ ವೇಳೆಗೆ ಪೂರ್ಣಗೊಳ್ಳಬೇಕು ಎಂದು ಹೇಳಿದ್ದರು.

ಬೆಂಗಳೂರಿನ ಸಂಚಾರ ದಟ್ಟಣೆಯಿಂದಾಗಿ ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಬೆಂಗಳೂರು ರಿಂಗ್ ರಸ್ತೆ (ಬೆಂಗಳೂರು ನಗರಕ್ಕೆ ಸ್ಯಾಟಲೈಟ್ ರಿಂಗ್ ರಸ್ತೆ) ಅಭಿವೃದ್ಧಿಯನ್ನು ಸರ್ಕಾರ ಹಂತ ಹಂತವಾಗಿ ಕೈಗೆತ್ತಿಕೊಂಡಿದೆ ಎಂದು ನಿತಿನ್ ಗಡ್ಕರಿ ವಿವರಿಸಿದ್ದರು.

80 km between Doddaballapur - Hoskote highway first phase completed

ಇನ್ನು, ರಾಷ್ಟ್ರೀಯ ಹೆದ್ದಾರಿ-648 ವ್ಯಾಪ್ತಿಯ ಮತ್ತೊಂದು ವಿಶೇಷವೆಂದರೆ ಇಲ್ಲಿ ವಿನೂತನ ಟೋಲ್ ವ್ಯವಸ್ಥೆ ಜಾರಿಯಾಗುತ್ತಿದೆ. ಸಿಬ್ಬಂದಿ ರಹಿತ ಸಂಪೂರ್ಣ ಫಾಸ್ಟ್ಯಾಗ್ ಡಿಜಿಟಲ್‌ ವ್ಯವಸ್ಥೆಯುಳ್ಳ ಟೋಲ್‌ ಪ್ಲಾಜಾಗಳನ್ನು ನಿರ್ಮಿಸಲಾಗಿದೆ. ದಾಬಸ್‌ಪೇಟೆ ದೊಡ್ಡಬಳ್ಳಾಪುರ ನಡುವಿನ ಹುಲಿಕುಂಟೆ ಬಳಿ ಒಂದು ಟೋಲ್, ದೇವನಹಳ್ಳಿ ಮತ್ತು ಹೊಸಕೋಟೆ ನಡುವೆ ನಲ್ಲೂರಿನ ಸಮೀಪ ಮತ್ತೊಂದು ಟೋಲ್‌ ಪ್ಲಾಜಾ ನಿರ್ಮಾಣ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+