Get Updates
Get notified of breaking news, exclusive insights, and must-see stories!

ಕರ್ನಾಟಕದ ಪ್ರಮುಖ ನಗರ ಪ್ರದೇಶಕ್ಕೆ 46 ಗ್ರಾಮಗಳ ಸೇರ್ಪಡೆ: ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ!

ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಹಾದಿಯಲ್ಲಿದೆ. ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಾಗಲೇ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದೀಗ ಬೆಂಗಳೂರು ಮಾತ್ರವಲ್ಲದೆ ಬೆಂಗಳೂರಿನ ಹೊರ ವಲಯ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲೂ ಭೂಮಿಗೆ ಒಳ್ಳೆಯ ಬೆಲೆ ಬರುತ್ತಿದೆ. ಇದೀಗ ಕರ್ನಾಟಕದ ಪ್ರಮುಖ ನಗರ ಪ್ರದೇಶಕ್ಕೆ ಬರೋಬ್ಬರಿ 46 ಗ್ರಾಮಗಳ ಪ್ರದೇಶ ಸೇರಲಿವೆ. ಹೀಗಾಗಿ, ಈ ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಮೂಡಿದೆ.

ಬೆಂಗಳೂರಿನಲ್ಲಿ ಹೊಸ ಐದು ಪಾಲಿಕೆಗಳ ರಚನೆ ಆಗುತ್ತಿರುವುದು ಹಾಗೂ ಐದು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಹೊಸ ಪ್ರದೇಶಗಳು ಸೇರ್ಪಡೆ ಆಗಲಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಇದೀಗ ಕರ್ನಾಟಕದ ಮತ್ತೊಂದು ನಗರದಲ್ಲಿ 40ಕ್ಕೂ ಹೆಚ್ಚು ಗ್ರಾಮಗಳ ಸೇರ್ಪಡೆಯ ಬಗ್ಗೆ ಅಪ್ಡೇಟ್ಸ್‌ ಬಂದಿದೆ. ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ವ್ಯಾಪ್ತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಈಗ ಇರುವ ತನ್ನ ವ್ಯಾಪ್ತಿಯ ಗಡಿಗೆ ಹೊಂದಿಕೊಂಡಿರುವಂತಹ 46 ಗ್ರಾಮಗಳನ್ನು ಸಂಪೂರ್ಣವಾಗಿ ಹುಡಾ ವ್ಯಾಪ್ತಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

46 villages to be included in Karnataka s major urban area Land expected to fetch gold price

ಹುಬ್ಬಳ್ಳಿ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ ಎಂದು ಈ ಹಿಂದೆ ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದರು. ಹುಬ್ಬಳ್ಳಿ - ಧಾರವಾಡದೊಂದಿಗೆ ಬೆಳಗಾವಿಯಲ್ಲೂ ವಿಮಾನ ನಿಲ್ದಾಣ (ಎರಡರಲ್ಲಿ ಒಂದು ಪ್ರದೇಶದಲ್ಲಿ) ನಿರ್ಮಾಣವಾಗುವ ಪ್ರಸ್ತಾವನೆ ಇದೆ ಎಂದಿದ್ದರು. ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾದಾಗ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಕೂಗು ಎದ್ದಿತ್ತು. ಆಗ ಈ ಪ್ರಸ್ತಾವನೆ ಬಂದಿದ್ದು. ಇದಾದ ಮೇಲೆ ಈ ಭಾಗದ ಹಲವು ಪ್ರದೇಶದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬರುತ್ತಿದೆ. ಈ ರೀತಿ ಇರುವಾಗಲೇ ಗ್ರಾಮಗಳ ಸೇರ್ಪಡೆಯ ಪ್ರಸ್ತಾವನೆ ಬಂದಿದೆ.

ಇದರಿಂದ ಹುಬ್ಬಳ್ಳಿ - ಧಾರವಾಡ ಅವಳಿ ನಗರ ಅಭಿವೃದ್ಧಿ ಆಗಲಿದೆ ಎಂದು ನಿರೀಕ್ಷೆ ಮೂಡಿದೆ. ಇದೀಗ ಹುಡಾ 408 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. 46 ಗ್ರಾಮಗಳ ಸೇರ್ಪಡೆ ಆದ ಮೇಲೆ ಒಟ್ಟು 712 ಚದರ ಕಿ.ಮೀ ಆಗಲಿದೆ ಎಂದು ಅಂದಾಜಿಸಲಾಗಿದೆ.

ಹೊಸ ಪ್ರದೇಶಗಳ ವಿವರ: ಇನ್ನು ಹುಡಾ ವ್ಯಾಪ್ತಿಗೆ ಸೇರಲಿರುವ ಹೊಸ ಗ್ರಾಮಗಳ ಪ್ರದೇಶದ ವಿವರ ಇಲ್ಲಿದೆ.

ಧಾರವಾಡ ತಾಲ್ಲೂಕು: ಬೆನಕನಕಟ್ಟಿ, ಮನಗುಂಡಿ, ನಾಯಿಕನಹುಳಿಕಟ್ಟೆ, ಶಿವಳ್ಳಿ, ಮಾರಡಗಿ, ನವಲೂರ ಥಡಧಬೀಲಾ, ಅಲ್ಲಾಪುರ (ಸೋಮಾಪುರ), ಘೋಂಗಡಿಕೊಪ್ಪ, ಗೋವನಕೊಪ್ಪ, ದಂಡಿಕೊಪ್ಪ, ಕಮಲಾಪುರ, ದಾಸನಕೊಪ್ಪ, ಕೊಟೂರ, ಅಗಸನಹಳ್ಳಿ, ಶಿಂಗನಹಳ್ಳಿ, ಹೆಗ್ಗೇರಿ, ವರವನಗಲವಿ, ಚಿಕ್ಕಮಲ್ಲಿಗವಾಡ, ದಡ್ಡಿಕಮಲಾಪುರ, ಮಂಡಿಹಾಳ, ಮುಗದ, ಕ್ಯಾರಕೊಪ್ಪ, ಜುಂಜಲಕಟ್ಟಿ, ಬಾಡ, ದೇವಗಿರಿ ಎಂ. ನರೇಂದ್ರ, ಗೋವನಕೊಪ್ಪ ಎಂ. ನರೇಂದ್ರ ಹಾಗೂ ನೀರಲಕಟ್ಟಿ

ಹುಬ್ಬಳ್ಳಿ ತಾಲ್ಲೂಕು: ಮಾವನೂರ, ಬುಡರಸಿಂಗಿ, ಸಿದ್ದಾಪುರ, ಮುರಾರಿಹಳ್ಳಿ, ಅದರಗುಂಚಿ, ಹಲ್ಯಾಳ, ರೇವಡಿಹಾಳ, ದೇವರಗುಡಿಹಾಳ, ಪರಸಾಪುರ, ಬಡನಾಳ, ಶಹರವೀರಾಪುರ, ಕುಸುಗಲ್ಲ ಹಾಗೂ ಸುಳ್ಳ

ಕಲಘಟಗಿ ತಾಲ್ಲೂಕು: ಕುರನಕೊಪ್ಪ, ದೇವಲಿಂಗಿಕೊಪ್ಪ, ದಾಸನೂರ, ಧುಮ್ಮವಾಡ, ಕಡನಕೊಪ್ಪ ಹಾಗೂ ಚಲಮತ್ತಿ ಪ್ರದೇಶಗಳು ಸೇರಿವೆ.

ಬೇಡಿಕೆ ಹೆಚ್ಚಳ: ಹುಬ್ಬಳ್ಳಿ - ಧಾರವಾಡ ಸೇರಿದಂತೆ ವಿವಿಧ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿ ಇನ್ಫೋಸಿಸ್‌ ಕಾರ್ಯಾಚರಣೆ ಪ್ರಾರಂಭಿಸಿರುವುದು ಹಾಗೂ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ಹೊಸ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗಳೂ ಸೇರಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+