3.50 ಕೋಟಿ ಕದ್ದ ಜಿಪಂ ಮಾಜಿ ಸದಸ್ಯ ಸೇರಿ ಮೂವರನ್ನು 24 ಗಂಟೆಯಲ್ಲೇ ಹಿಡಿದ ಪೊಲೀಸರು!
ಬೀದರ್, ನವೆಂಬರ್ 30: ಉದ್ಯಮಿಯೊಬ್ಬರಿಂದ ಕಳ್ಳತನ ಮಾಡಿದ ಮೂವರು ಕಳ್ಳರನ್ನು 24 ಗಂಟೆಗಳಲ್ಲಿ ಬೀದರ್ ಪೊಲೀಸರು ಹಿಡಿದ್ದಿದ್ದಾರೆ. ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಬೀದರ್‌ನ ಬಸವಕಲ್ಯಾಣ ತಾಲೂಕಿನ ಹನುಮಂತವಾಡಿ ಗ್ರಾಮದ ಬಳಿ ಬುಧವಾರ ಆರೋಪಿಗಳು ಬಂದೂಕು ತೋರಿಸಿ ಉದ್ಯಮಿಯೊಬ್ಬರಿಂದ 3.50 ಕೋಟಿ ರೂ. ಕಳ್ಳತನ ಮಾಡಿದ್ದರು. ಈ ಸಂಬಂಧ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಮಾಶಕರ್ ಎಂಬ ಉದ್ಯಮಿಯೊಬ್ಬರು ತಮ್ಮ ಕಾರಿನಲ್ಲಿ ಮಹಾರಾಷ್ಟ್ರದ ಪಂಢರಪುರಕ್ಕೆ ತೆರಳುತ್ತಿದ್ದಾಗ ಬುಧವಾರ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿದಾಗ ನಾಲ್ವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳಲ್ಲೊಬ್ಬ ಬಂದೂಕನ್ನು ಹೊರತೆಗೆದು ಉಮಾಶಂಕರ್‌ಗೆ ತೋರಿಸಿದನು. ಆಗ ಅವರು ವಿರೋಧಿಸಿದಾಗ ಗಾಳಿಯಲ್ಲಿ ಕೆಲವು ಸುತ್ತಿನ ಗುಂಡುಗಳನ್ನು ಹಾರಿಸಲಾಯಿತು. ಆರೋಪಿಗಳು ಕಾರನ್ನು ಶೋಧಿಸಿ 3.50 ಕೋಟಿ ರೂ.ಗಳಿದ್ದ ಬ್ಯಾಗ್‌ನೊಂದಿಗೆ ಪರಾರಿಯಾಗಿದರು.
ಉಮಾಶಂಕರ್ ತಕ್ಷಣ ಪೊಲೀಸರನ್ನು ಸಂಪರ್ಕಿಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಯಿತು. ದೂರುದಾರರು ನೀಡಿದ ವಿವರದ ಆಧಾರದ ಮೇಲೆ ಪೊಲೀಸರು ಜಿಲ್ಲೆಯ ಎಲ್ಲಾ ಘಟಕಗಳಿಗೆ ಮಾಹಿತಿ ರವಾನಿಸಿದ್ದು, ಹಲವು ವಾಹನಗಳನ್ನು ಶೋಧಿಸಿದರು.
ಬಳಿಕ ಗುರುವಾರ ಬೆಳ್ಳಂಬೆಳಗ್ಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಬೀದರ್ ಪೊಲೀಸರು ಮೂವರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಬಂಧಿತರನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗುಂಡು ರೆಡ್ಡಿ, ವಿಜಯ್ ರೆಡ್ಡಿ ಮತ್ತು ಸಂಜಯ್ ರೆಡ್ಡಿ ಎಂದು ಗುರುತಿಸಲಾಗಿದೆ.
3.5 ಕೋಟಿಯಲ್ಲಿ 2.62 ಕೋಟಿ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಉಳಿದ ನಗದನ್ನು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಉಮಾಶಂಕರ್ ಅವರು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ನಗದು ಮೂಲದ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications