ಆನ್‌ಲೈನ್ ಗೇಮಿಂಗ್‌ಗಾಗಿ 28 ಪ್ರತಿಶತ ಜಿಎಸ್‌ಟಿ: ರಾಜ್ಯಪಾಲರ ಒಪ್ಪಿಗೆ

ಬೆಂಗಳೂರು, ಸೆಪ್ಟೆಂಬರ್‌ 30: ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ರೇಸ್‌ಕೋರ್ಸ್‌ಗಳ ಮೇಲೆ ಶೇಕಡಾ 28 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲು ಸೇವಾ ತೆರಿಗೆ ಕಾಯಿದೆಗೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಗೆ ಕರ್ನಾಟಕ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಒಪ್ಪಿಗೆ ನೀಡಿದ್ದಾರೆ.

ಅಕ್ಟೋಬರ್ 1 ರಂದು ಕೇಂದ್ರ ಸರ್ಕಾರವು ಆನ್‌ಲೈನ್ ಗೇಮಿಂಗ್‌ಗಾಗಿ 28 ಪ್ರತಿಶತ ಜಿಎಸ್‌ಟಿ ಹೊಸ ತೆರಿಗೆ ಅನುಷ್ಠಾನಕ್ಕೆ ಮುಂಚಿತವಾಗಿ ಕರ್ನಾಟಕ ಸರ್ಕಾರದಿಂದ ಈ ಸುಗ್ರೀವಾಜ್ಞೆಯನ್ನು ಜಾರಿ ಮಾಡಲಾಗಿದೆ. ವಿಧಾನಸಭೆ ಅಧಿವೇಶನ ನಡೆಯದ ಕಾರಣ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಭೆ ಕರೆಯುವ ಸಾಧ್ಯತೆ ಇಲ್ಲದಿರುವುದರಿಂದ ಈ ನಿರ್ಧಾರ ಮಾಡಲಾಗಿದೆ.

28 percent GST for online gaming: Governor nods to Karnataka government ordinance

ಆನ್‌ಲೈನ್ ಆಟಗಳ ಮೇಲಿನ ಹೊಸ ಜಿಎಸ್‌ಟಿ ತೆರಿಗೆಯಿಂದ ರಾಜ್ಯವು 1,500 ಕೋಟಿ ರೂಪಾಯಿ ಹೆಚ್ಚುವರಿ ಆದಾಯವನ್ನು ನಿರೀಕ್ಷಿಸುತ್ತಿದೆ. ಆನ್‌ಲೈನ್ ಗೇಮ್‌ಗಳು, ಹಾರ್ಸ್‌ ರೈಡಿಂಗ್‌ ಮತ್ತು ಲಾಟರಿಯನ್ನು ನಿಷೇಧಿಸುವ ಹಿಂದಿನ ಕಾನೂನುಗಳನ್ನು ಈ ಸುಗ್ರೀವಾಜ್ಞೆಯು ಬದಲಾಯಿಸುವುದಿಲ್ಲ. ಹೆಚ್ಚಿನ ತೆರಿಗೆಯನ್ನು ವಿಧಿಸುವುದರಿಂದ ಆನ್‌ಲೈನ್‌ ಚಟುವಟಿಕೆಗಳನ್ನು ಕಾನೂನುಬದ್ಧಗೊಳಿಸುವುದು ಎಂದರ್ಥವಲ್ಲ ಎಂದು ಅದು ಹೇಳುತ್ತದೆ.

ಅಕ್ಟೋಬರ್ 1 ರಿಂದ ಕೇಂದ್ರ ಸರ್ಕಾರದಿಂದ ಜಾರಿ:

ಕೇಂದ್ರ ಸರ್ಕಾರವು ಅಕ್ಟೋಬರ್ 1 ರಿಂದ ಆನ್‌ಲೈನ್ ಗೇಮಿಂಗ್‌ಗೆ 28% ಜಿಎಸ್‌ಟಿ ಜಾರಿಗೊಳಿಸಲು ಸಜ್ಜಾಗಿದೆ. ಇದಕ್ಕಾಗಿ ಸೆಪ್ಟೆಂಬರ್ 30 ರೊಳಗೆ ರಾಜ್ಯ ವಿಧಾನಸಭೆಗಳು ಮಸೂದೆಯನ್ನು ಅಂಗೀಕರಿಸಬೇಕು, ಇಲ್ಲವೇ ಸುಗ್ರೀವಾಜ್ಞೆಯನ್ನು ಪರಿಚಯಿಸಬೇಕು ಎಂದು ಕೇಂದ್ರ ಹೇಳಿತ್ತು. ಇದುವರೆಗೆ ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ಸುಗ್ರಿವಾಜ್ಞೆಯನ್ನು ಜಾರಿ ಮಾಡಿವೆ.

ಕಳೆದ ಆಗಸ್ಟ್‌ನಲ್ಲಿ ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸ್ ಕ್ಲಬ್‌ಗಳ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸಲು ಕೇಂದ್ರ ಮತ್ತು ಸಮಗ್ರ ಜಿಎಸ್‌ಟಿ ಕಾನೂನುಗಳಿಗೆ ತಿದ್ದುಪಡಿ ಮಸೂದೆಯನ್ನು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರು ಮಂಡಿಸಿದ್ದರು. ಬಳಿಕ ಅದು ಅಂಗೀಕಾರವೂ ಆಗಿತ್ತು.

ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2023, ಮತ್ತು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2023, ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಧ್ವನಿ ಮತದ ಮೂಕ ಅಂಗೀಕರಿಸಲ್ಪಟ್ಟಿತ್ತು. ನಂತರ ರಾಜ್ಯಗಳ ವಿಧಾನಸಭೆಗಳಲ್ಲಿ ರಾಜ್ಯ ಜಿಎಸ್‌ಟಿ ಕಾನೂನುಗಳಲ್ಲಿ ಅಂಗೀಕರಿಸಿದ ತಿದ್ದುಪಡಿಗಳನ್ನು ಪಡೆಯಬೇಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+