ʼರಾಮನಗರ, ಚನ್ನಪಟ್ಟಣ ಯುವ ಪೀಳಿಗೆಗೆ 25 ಸಾವಿರ ಉದ್ಯೋಗ ಸೃಷ್ಟಿʼ

ರಾಮನಗರ, ನವೆಂಬರ್‌ 11: ನಿರುದ್ಯೋಗ ಸಮಸ್ಯೆಯಿಂದ ಸಾಕಷ್ಟು ಯುವಕರು ವಂಚಿತರಾಗಿದ್ದಾರೆ. ಕುಮಾರಣ್ಣನ ಪರವಾಗಿ ಯುವ ಸಮುದಾಯದ ಒಬ್ಬ ಯುವಕನಾಗಿ ನಿಮಗೆ ಮಾತು ಕೊಡುತ್ತಿದ್ದೇನೆ, ಯುವಕರ ದ್ವನಿಯಾಗಿ ನಾನು ಕೆಲಸ ಮಾಡುತೇನೆ, ಜಿಲ್ಲೆಯಲ್ಲಿ ಕನಿಷ್ಠ 25 ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವಂತ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಯುವ ಪೀಳಿಗೆಗೆ ನಿಖಿಲ್ ಅವರು ಭರವಸೆ ನೀಡಿದರು.

ಚನ್ನಪಟ್ಟಣ ನಗರ ವ್ಯಾಪ್ತಿಯ ಹಲವಾರು ವಾರ್ಡ್ಗಳಿಗೆ ಭೇಟಿ ನೀಡಿ ನಿಖಿಲ್ ಕುಮಾರಸ್ವಾಮಿ ಅವರು ಮತ ಯಾಚನೆ ಮಾಡಿದ, ನಂತರ ಪ್ರಚಾರ ಸಭೆಯಲ್ಲಿ ಮಾತನಾಡಿದ ನಿಖಿಲ್ ಅವರು ಯುವ ಪೀಳಿಗೆಗೆ ಉದ್ಯೋಗ ಸೃಷ್ಟಿ ಕೊಡಿಸುವ ಭರವಸೆ ನೀಡಿದರು.

25 000 Jobs for the Youth of Ramanagara and Channapatna Says Nikhil Kumaraswamy

ಇವತ್ತು ಕುಮಾರಸ್ವಾಮಿ ಅವರು ಕೆಂದ್ರದ ಬೃಹತ್ ಸಚಿವರಾಗಿದ್ದಾರೆ. ಅದಕ್ಕೆ ನೀವು ಕಾರಣ, ಈಗ ನಿಮ್ಮ ಋಣವನ್ನ ತೀರಿಸುವ ಕೆಲಸ ಮಾಡುತೀನಿ ಎಂದರು.ಕುಮಾರಣ್ಣ ರೈತರ ಪರವಾಗಿ ಮಾತು ಕೊಟ್ಟು, ಕೊಟ್ಟ ಮಾತಿನಂತೆ ರೈತರ ಸಾಲ ಮನ್ನ ಮಾಡಿದ್ದರೋ ಅದೇ ರೀತಿ ರಾಮನಗರ ಮತ್ತು ಚನ್ನಪಟ್ಟಣ ಜನತೆಗೆ ಉದ್ಯೋಗ ಕಲ್ಪಿಸಿಕೊಡಿಸುತ್ತೇನೆ ಎಂಬ ಸವಾಲು ಸ್ಪೀಕರ ಮಾಡಿದ್ದಾರೆ ಕುಮಾರಣ್ಣ ಅವರು ಎಂದರು.

ಕುಮಾರಣ್ಣ ಈಗಾಗಲೇ ದೆಹಲಿಯಲ್ಲಿ ನಾಲ್ಕುವರೆ ತಿಂಗಳಿಂದ ಸರಣಿ ಸಭೆ ಮಾಡುತ್ತಿದ್ದಾರೆ. ಅನೇಕ ಬೃಹತ್ ಕೈಗಾರಿಕಾ ಕಾರ್ಖಾನೆಯನ್ನ ರಾಮನಗರ ಜಿಲ್ಲೆಯಲ್ಲಿ ಸ್ಥಾಪನೆ ಮಾಡವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ಇವತ್ತು ಎಲ್ಲಾ ತಾಯಂದಿರಿಗೂ ಹಾಗೂ ಯುವಕರಿಗೆ ಬೇಕಾಗಿರುವುದು ಸ್ವಾಭಿಮಾನದ ಬದುಕು, ಸ್ವಂತ ಕಾಲಿನ ಮೇಲೆ ನಿಂತು ದುಡಿಯುವಂತ ಉದ್ಯೋಗ ಬೇಕಾಗಿದೆ. ಇವೆಲ್ಲಾವನ್ನು ಕುಮಾರಣ್ಣ ಅವರ ಜತೆಯಲ್ಲಿ ನಿಂತು ಮಾಡಿಸಿಕೊಡುತ್ತೇನೆ. ನಿಮ್ಮನ್ನ ನಂಬಿ ಬಂದಿದ್ದೇನೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ನಾನು ಎರಡು ಬಾರಿ ಸೋಲು ಕಂಡರು , ನನ್ನಲ್ಲಿ ಹೋರಾಟದ ಕಿಚ್ಚು ಕಡಿಮೆ ಆಗಿಲ್ಲ ದೇವೇಗೌಡರ, ಕುಮಾರಸ್ವಾಮಿ ಅವರ ದೀರ್ಘ ಕಾಲದ ರಾಜಕಾರಣದಲ್ಲಿ ಬಡವರ ಪರವಾಗಿ ಇದ್ದವರು ಹಾಗೆಯೇ ನಾನುನು, ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಬಹಿರಂಗ ಪ್ರಚಾರಕ್ಕೆ ಇನ್ನೊಂದು ದಿನ ಬಾಕಿ ಇದೆ. ಚನ್ನಪಟ್ಟಣ ತಾಲೂಕಿನಲ್ಲಿ ಕುಮಾರಸ್ವಾಮಿ ಆರೂವರೆ ವರ್ಷದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.ಅನೇಕ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ.ಒಬ್ಬ ಯುವಕ ಸಮಾಜಮುಖಿಯಾಗಿ ಕೆಲಸ ಮಾಡ್ತಾನೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೀರಾ. ನಾನು ಕೊನೆ ಹಂತದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ನಾನು ಅಭ್ಯರ್ಥಿ ಆಗಿದ್ದೇನೆ.ಮೂರೂವರೆ ವರ್ಷ ಕಾಲಾವಧಿ ಬಾಕಿ ಇದೆ ಇದು ಅನಿರೀಕ್ಷಿತ ಚುನಾವಣೆ, ನಿಮ್ಮನ್ನ ನಂಬಿ ಮುಂದೆ ಬಂದಿದ್ದೇನೆ ಎಂದರು.

ಕಳೆದ ಎರಡು ಸಲ ಕುತಂತ್ರದಿಂದ ನನ್ನ ಸೋಲಿಸಿದ್ದಾರೆ. ಜನ ಹಿಂದೆ ಕೂಡಾ ನನ್ನ ಮೇಲೆ ಪ್ರೀತಿ ಇಟ್ಟಿದ್ದರು. ಕುಮಾರಸ್ವಾಮಿ ಅವರನ್ನು ಎರಡನೇ ಸಲ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಿದ್ದ ಕೀರ್ತಿ ನಿಮಗೆ ಸಲ್ಲಬೇಕು.

ಕುಮಾರಣ್ಣ ಅವರು ಯುಜಿಡಿ ಕಾಮಗಾರಿಗೆ 97 ಕೋಟಿ ಅನುದಾನ ಕೊಟ್ಟಿದ್ದರು. ಆದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯುಜಿಡಿ ಯೋಜನೆಯನ್ನ ತಡೆಹಿಡಿದರು. ಮಹಿಳೆಯರ ಡಿಗ್ರಿ ಕಾಲೇಜು, ಬಾಲಕರ ಕಾಲೇಜು, ರಸ್ತೆ ಅಭಿವೃದ್ಧಿ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಮಾಡಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+