ಕಾಂಗ್ರೆಸ್ ಸಂಸದರ ಮನೆಗೆ ಐಟಿ ದಾಳಿ: 156 ಚೀಲಗಳಲ್ಲಿ ಬರೋಬ್ಬರಿ 225 ಕೋಟಿ ಪತ್ತೆ: ವಿಜಯೇಂದ್ರ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 07: ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಏಜೆಂಟರ ಮೇಲೆ ಐಟಿ ದಾಳಿ ನಡೆದಷ್ಟೂ, ಜನರಿಂದ ಲೂಟಿ ಹೊಡೆದ ಅಕ್ರಮ ಕಪ್ಪುಹಣ ಪತ್ತೆಯಾಗುತ್ತಲೇ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸದ್ಯ ನಡೆದಿರುವ ಐಟಿ ದಾಳಿಯಲ್ಲಿ ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಬಳಿ ಸರಿ ಸುಮಾರು 156 ಚೀಲಗಳಲ್ಲಿ ಬರೋಬ್ಬರಿ 225 ಕೋಟಿ ನಗದು ಪತ್ತೆ ಪ್ರಕರಣ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕರಾಳ ಮುಖ ದರ್ಶನ ಮಾಡಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗುತ್ತಿಲ್ಲ, ಅದರಲ್ಲಿ ಮುಸ್ಲಿಂಮರಿಗೆ ಪಾಲು ಸಿಗುತ್ತಿಲ್ಲ ಎಂದು ಮೊನ್ನೆಯಷ್ಟೇ ಮುಸ್ಲಿಂ ಓಲೈಕೆ ಭಾಷಣ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ಈ ದೇಶದ ಜನರ ಸಂಪತ್ತು ಯಾರ ಬಳಿ ಇದೆ ? ಎಂದು ಪ್ರಶ್ನಿಸಿದ್ದಾರೆ.
ಈ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗುತ್ತಿಲ್ಲ, ಅದರಲ್ಲಿ ಮುಸ್ಲಿಂಮರಿಗೆ ಪಾಲು ಸಿಗುತ್ತಿಲ್ಲ ಎಂದು ಮೊನ್ನೆಯಷ್ಟೇ ಮುಸ್ಲಿಂ ಓಲೈಕೆ ಭಾಷಣ ಮಾಡಿದ್ದ ಮುಖ್ಯಮಂತ್ರಿ @siddaramaiah ನವರೇ, ಈ ದೇಶದ ಜನರ ಸಂಪತ್ತು ಯಾರ ಬಳಿ ಇದೆ ? ಲೂಟಿಹೊಡೆದವರಾರು? ಎಂಬ ನಿಮ್ಮ ಆವೇಶಭರಿತ ಪ್ರಶ್ನೆಗಳಿಗೆ
— Vijayendra Yediyurappa (@BYVijayendra) December 9, 2023
ಐಟಿ ಅಧಿಕಾರಿಗಳು ಇದೀಗ ಉತ್ತರ… pic.twitter.com/RkPHayYOXf
ದೇಶವನ್ನು ಲೂಟಿಹೊಡೆದವರಾರು? ಎಂಬ ನಿಮ್ಮ ಆವೇಶಭರಿತ ಪ್ರಶ್ನೆಗಳಿಗೆ ಐಟಿ ಅಧಿಕಾರಿಗಳು ಇದೀಗ ಉತ್ತರ ದೊರಕಿಸಿಕೊಟ್ಟಿದ್ದಾರೆ ಎಂದು ಈ ವಿಚಾರವನ್ನು ಉಲ್ಲೇಖ ಮಾಡಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಏಜೆಂಟರ ಮೇಲೆ ಐಟಿ ದಾಳಿ ನಡೆದಷ್ಟೂ, ಜನರಿಂದ ಲೂಟಿ ಹೊಡೆದ ಅಕ್ರಮ ಕಪ್ಪುಹಣ ಪತ್ತೆಯಾಗುತ್ತಲೇ ಇದೆ. ಸದ್ಯ ನಡೆದಿರುವ ಐಟಿ ದಾಳಿಯಲ್ಲಿ ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಬಳಿ ಸರಿ ಸುಮಾರು 156 ಚೀಲಗಳಲ್ಲಿ ಬರೋಬ್ಬರಿ 225 ಕೋಟಿ ನಗದು ಪತ್ತೆ ಪ್ರಕರಣ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕರಾಳ ಮುಖ ದರ್ಶನ ಮಾಡಿಸಿದೆ ಎಂದಿದ್ದಾರೆ.

ಸುದೀರ್ಘ ಕಾಲ ಕಾಂಗ್ರೆಸ್ ಲೂಟಿ ಹೊಡೆದಿರುವ ಈ ದೇಶದ ಸಂಪತ್ತು ಎಲ್ಲೆಲ್ಲಿವೇ ಎಂಬುದನ್ನು ಐಟಿ ಇಲಾಖೆ ಪತ್ತೆ ಹಚ್ಚುವ ಮುನ್ನ ನೀವೇ ಹೊರತಂದು ಸಕ್ರಮ ಮಾರ್ಗದಲ್ಲಿ ಜನರಿಗೆ ಹಂಚಿಬಿಡಿ. ಈ ದೇಶದ ಸಂಪತ್ತು ಶತಮಾನಗಳಿಂದಲೂ ಲೂಟಿಯಾಗುತ್ತಲೇ ಇದೆ ಎಂಬುದಕ್ಕೆ ಇತಿಹಾಸವೇ ಇದೆ ಎಂದು ಆರೋಪಿಸಿದ್ದಾರೆ. ಮೊದಲಿಗೆ ಮೊಘಲರು, ನಂತರ ಬ್ರಿಟೀಷರು, ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ಸಿಗರು ಎಂಬುದು ಅಸಲೀ ಸತ್ಯ ಎಂಬುದಕ್ಕೆ ಇಂದಿಗೂ ಪುರಾವೆಗಳು ಸಿಗುತ್ತಲೇ ಇವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications