Get Updates
Get notified of breaking news, exclusive insights, and must-see stories!

Belagavi south Constituency: ಬಿಜೆಪಿ ಶಾಸಕ ಅಭಯ್‌ ಪಾಟೀಲ್‌ಗೆ ಟಕ್ಕರ್‌ ನೀಡುವುದೇ ಕಾಂಗ್ರೆಸ್‌?

ಬೆಳಗಾವಿ, ಮಾರ್ಚ್‌ 23: ಬೆಳಗಾವಿಯು ಕರ್ನಾಟಕದ ಎರಡನೇ ರಾಜಧಾನಿ ಎಂದೇ ಖ್ಯಾತವಾಗಿದೆ. ಹೀಗಾಗಿ, ರಾಜ್ಯದ ಪ್ರತಿಷ್ಠಿತ ವಿಧಾನಸಭೆ ಕ್ಷೇತ್ರಗಳಲ್ಲಿ 'ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರ'ವೂ ಒಂದು. ಈ ಕ್ಷೇತ್ರವು 2008 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಕ್ಷೇತ್ರವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ಹೆಸರು ವಾಸಿಯಾಗಿದೆ.

ಮರಾಠಿ ಭಾಷಿಗರು ಅಧಿಕವಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಎಂಇಎಸ್‌ ಪಕ್ಷಗಳು ಗೆಲುವು ಸಾಧಿಸಿವೆ. 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭಯ್‌ ಪಾಟೀಲ್‌ ಅವರು ಶಾಸಕರಾಗಿ ಆಯ್ಕೆಯಾದರು. 2013ರಲ್ಲಿ ಎಂಇಎಸ್‌ನ ಸಂಭಾಜಿ ಲಕ್ಷ್ಮಣ ಪಾಟೀಲ್‌ ಅವರು ಶಾಸಕರಾಗಿ ಆಯ್ಕೆಯಾದರು. 2018ರಲ್ಲಿ ಬಿಜೆಪಿಯಿಂದ ಮತ್ತೆ ಅಭಯ ಪಾಟೀಲ್‌ ಅವರ ಜಯಭೇರಿ ಭಾರಿಸಿದರು.

Belagavi south Assembly Constituency Analysis | ಬಿಜೆಪಿ ಶಾಸಕ ಅಭಯ್‌ ಪಾಟೀಲ್‌ಗೆ ಟಕ್ಕರ್‌ ನೀಡುವುದೇ ಕಾಂಗ್ರೆಸ್‌?

ಈ ಕ್ಷೇತ್ರದಲ್ಲಿ ನಡೆದ ಮೂರು ವಿಧಾನಸಭೆ ಚುನಾವಣೆಗಳಲ್ಲಿ ಎರಡರಲ್ಲಿ ಬಿಜೆಪಿಯ ಅಭಯ್ ಪಾಟೀಲ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಭಯ್‌ ಪಾಟೀಲ್‌ ಅವರು 2004 ರಿಂದ 2008 ರ ವರೆಗೆ ಭಾರತೀಯ ಜನತಾ ಪಕ್ಷದ ಶಾಸಕರಾಗಿದ್ದರು. ಅವರು ಬಾಗೇವಾಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2008 ರಿಂದ 2013ರ ವರೆಗೆ ಅವರು ಬೆಳಗಾವಿ ದಕ್ಷಿಣದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 35 ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದರು. ಅವರು ಭಾರತದ ಕಿರಿಯ ಹಾಗೂ ಮೊದಲ ತಲೆಮಾರಿನ ಶಾಸಕರಲ್ಲಿ ಒಬ್ಬರಾಗಿದ್ದಾರೆ.

2008 ರಲ್ಲಿ ನಡೆದ ಬೆಳಗಾವಿ ದಕ್ಷಿಣ ವಿಧಾನಸಭಾ ಚುನಾವಣೆಯಲ್ಲಿ 12,990 ಮತಗಳ ಮುನ್ನಡೆಯೊಂದಿಗೆ ಗೆಲುವು ಸಾಧಿಸಿದರು. 2013ರಲ್ಲಿ ಬಿಜೆಪಿ ಪಕ್ಷದಲ್ಲಿನ ಒಡಕಿನಿಂದಾಗಿ ಅಭಯ್‌ ಪಾಟೀಲ್‌ ಸೋತರು ಎಂಬ ಅಭಿಪ್ರಾಯಗಳು ಕೇಳಿಬಂದಿವೆ. 2013ರಲ್ಲಿ ಸಂಭಾಜಿ ಲಕ್ಷ್ಮಣ ಪಾಟೀಲ್‌ ಅವರು 54,426 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಬಿಜೆಪಿಗೆ 48,116 ಮತಗಳು ಬಂದವು. ಕಾಂಗ್ರೆಸ್‌ನ ಅನಿಲ್‌ ಎಂ ಪೋತದಾರ್‌ ಅವರು ಕೇವಲ 20,536 ಮತಗಳನ್ನು ಪಡೆಯುವಲ್ಲಿ ಸಫಲರಾದರು.

Belagavi south Assembly Constituency Analysis | ಬಿಜೆಪಿ ಶಾಸಕ ಅಭಯ್‌ ಪಾಟೀಲ್‌ಗೆ ಟಕ್ಕರ್‌ ನೀಡುವುದೇ ಕಾಂಗ್ರೆಸ್‌?

2018ರ ಚುನಾವಣೆಯಲ್ಲಿ ಮತ್ತೆ ಅಭಯ್‌ ಪಾಟೀಲ್‌ ಅವರು ಈ ಕ್ಷೇತ್ರದಿಂದ ಆಯ್ಕೆಯಾದರು. ಅವರು 84,498 ಮತಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿ ಆದರು. ಕಾಂಗ್ರಸ್‌ ಎಂಡಿ ಲಕ್ಷ್ಮಿನಾರಾಯಣ ಅವರಿಗೆ 25,806 ಮತಗಳು ದೊರೆತವು. ಎಂಇಎಸ್‌ನ ಪ್ರಕಾಶ್‌ ಅಪ್ಪಾಜಿ ಮರಗಲೆ ಅವರಿಗೆ 21,537 ಮತಗಳು ದೊರೆತವು.

ಬೆಳಗಾವಿ ದಕ್ಷಿಣ ಕ್ಷೇತ್ರದ ಆಕಾಂಕ್ಷಿಗಳು

ಈ ಬಾರಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್‌ ಪಡೆಯಲು ಅಭಯ್‌ ಪಾಟೀಲ್‌ ಹಾಗೂ ಕಿರಣ್‌ ಜಾದವ್‌ ಯುತ್ನ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ರಮೇಶ್‌ ಕುಡಚಿ ಹಾಗೂ ಸರಳಾ ಸಾತಪುತೆ ಅವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಎಂಇಎಸ್‌ನಿಂದ ಶುಭಂ ಸೆಳಕೆ ಹಾಗೂ ರಮಾಕಾಂತ್‌ ಕಂಡೂಸ್ಕರ್‌ ಅವರು ಟಿಕೆಟ್‌ಗಾಗಿ ಯತ್ನ ನಡೆಸಿದ್ದಾರೆ.

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 14, 000 ಲಿಂಗಾಯತ ಮತಗಳಿಗೆ. 70, 000 ಮರಾಠಿ ಸಮುದಾಯದ ಮತಗಳಿವೆ. 40, 000 ನೇಕಾರ ಸಮುದಾಯದ ಮತಗಳಿವೆ. 15, 000 ಜೈನ್‌ ಸಮುದಾಯದ ಮತಗಳಿವೆ. ಹತ್ತು ಸಾವಿರಕ್ಕೂ ಅಧಿಕ ಹಿಂದೂಳಿದ ವರ್ಗಕ್ಕೆ ಸೇರಿದ ಮತಗಳಿವೆ. ಎರಡು ಭಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಅಭಯ್‌ ಪಾಟೀಲ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+