SSLC Exam: ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆ: ತನಿಖೆಗೆ ಕರ್ನಾಟಕ ಸರ್ಕಾರ ಆದೇಶ
ಬೆಂಗಳೂರು, ಮಾರ್ಚ್ 05: ಕರ್ನಾಟಕ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಪರೀಕ್ಷೆಗಳು ಕಳೆದ ತಿಂಗಳು ಫೆಬ್ರವರಿ 26ರಿಂದ ಆರಂಭವಾಗಿವೆ. ಪರೀಕ್ಷೆಯ ಕೊನೆಯ ದಿನವಾಗಿದ್ದ ಮಂಗಳವಾರ ಮಾರ್ಚ್ 04ರಂದು ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಪರೀಕ್ಷೆ ಆರಂಭವಾದಾಗಿನಿಂತ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿವೆ ಎಂಬ ಆರೋಪ ಅಲ್ಲಲ್ಲಿ ಕೇಳಿ ಬಂದಿದ್ದವು. ಕೆಲವು ವದಂತಿಗಳು ಪ್ರಶ್ನೆ ಪತ್ರಿಕೆ ಸಮೇತ ಆನೈಲ್‌ನಲ್ಲಿ ಹರಿದಾಡಿದವು. ಆದರೆ ಇದರ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ವದಂತಿಗಳನ್ನು ತಿರಸ್ಕರಿಸಿದ್ದರು.

ಇದೀಗ ಕಲುಬರಿಯಗಲ್ಲಿ ಕೊನೆಯ ದಿವಸ 10 ನೇ ತರಗತಿಯ ವಿದ್ಯಾರ್ಥಿಗಳ ಮಾಜ ವಿಜ್ಞಾನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋಕೆ ಆಗಿದೆ ಎಂಬ ಆರೋಪ ಪುನಃ ಕೇಳಿ ಬಂದಿದೆ. ಈ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಆನ್‌ಲೈನ್‌ನಲ್ಲಿ ಪ್ರತ್ಯಕ್ಷವಾಗಿದೆ. ಹೀಗಾಗಿ ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬೆನ್ನಲ್ಲೆ ರಾಜ್ಯ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ.
ಪರೀಕ್ಷೆ ಶುರುವಾದ ಬಳಿಕ ಕೇಳಿ ಬಂದು ಸೋರಿಕೆಯ ಕೆಲವು ಆರೋಪಗಳಲ್ಲಿ ಹುರುಳಿಲ್ಲ. ಸದ್ಯ ಮಂಗಳವಾರ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆ ನಿರ್ದಿಷ್ಟ ಪ್ರಕರಣ ಎಂದು ಭಾಸವಾಗುತ್ತಿದೆ. ಈ ಸಂಬಂಧ ತನಿಖೆ ನಡೆಯಲಿದೆ. ಇದನ್ನು ಇಲಾಖೆ ಪರಿಶೀಲಿಸಲಿದೆ ಎಂದು ಸಾರ್ವಜನಿಕ ಶಿಕ್ಷಣ ಆಯುಕ್ತ ತ್ರಿಲೋಕ್ ಚಂದ್ರ ಕೆ.ವಿ ಅವರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರಿಂದ (ACPI) ಸಮಗ್ರ ವರದಿ ಕೇಳಿದ್ದೇವೆ. ಅದು ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತ್ರಿಲೋಕ್ ಚಂದ್ರ ಅವರು ಪ್ರಶ್ನೆ ಪತ್ರಿಕೆ ಬಗ್ಗೆ ದೃಢಪಡಿಸಿದರು. ಈ ಆರೋಪ ಕೇಳಿ ಬರುತ್ತಿದ್ದಂತೆ ರಾಜ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ (KAMS) ಅಸೋಸಿಯೇಟೆಡ್ ಆಡಳಿತ ಮಂಡಳಿಗಳು ಅಸುರಕ್ಷಿತ ಪರೀಕ್ಷೆ ಕುರಿತು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಮೇಲೆ ದೂರಿವೆ. ಸದ್ಯ ತನಿಖೆ ಹಂತ ನಡೆದು ತಿಳಿದು ಬರುವವರೆಗೂ ಕಾಯಬೇಕಿದೆ.
ಹತ್ತನೇ ತರಗತಿಗಳ ಪರೀಕ್ಷೆಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೆ ₹50 ಶುಲ್ಕ ವಿಧಿಸಲಾಗುತ್ತದೆ. ಹೀಗಿದ್ದರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಪಾರದರ್ಶಕ ಮತ್ತು ಸುರಕ್ಷಿತವಾಗಿ ನಡೆಸುವಲ್ಲಿ ವಿಫಲವಾಗುತ್ತಿದೆ. ಖಾಸಗಿ ಶಾಲೆಗಳು ಪರೀಕ್ಷೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸುತ್ತಿವೆ ಎಂದು ರಾಜ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ (KAMS) ಅಧ್ಯಕ್ಷರು ಟೀಕಿಸಿದ್ದಾರೆ.
ಶಿಕ್ಷಣ ವ್ಯವಸ್ಥೆಯು ಸುಸೂತ್ರವಾಗಿದ್ದರೆ ಭವಿಷ್ಯ ಸುರಕ್ಷಿತವಾಗಿರುತ್ತದೆ. ಶಿಕ್ಷಕರೇ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬು. ಈ ಆರೋಪ ವಿಚಾರದಲ್ಲಿ ಅವರೇ ಮೌನವಾಗಿದ್ದಾರೆ ಎಂದರೆ ಏನರ್ಥ. ಈ ವ್ಯವಸ್ಥೆ ಸರಿಪಡಿಸುವುದು ಅವರ ಅದ್ಯ ಕರ್ತವ್ಯ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications