• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ ಭಾರತದ ವೆಬ್ ತಾಣಗಳು ಲಾಕ್ಡೌನ್ ಏಕೆ?

|
Google Oneindia Kannada News

ಬೀಜಿಂಗ್, ಜೂನ್ 30: ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷದ ನಡುವೆ ವ್ಯಾಪಾರ- ವಹಿವಾಟಿನ ನಿರ್ಬಂಧ, ನಿಷೇಧದ ಆರ್ಥಿಕ ಸಮರ ಜಾರಿಯಲ್ಲಿದೆ. ಭಾರತದಿಂದ 59ಕ್ಕೂ ಅಧಿಕ ಆಪ್ ಮೇಲೆ ನಿಷೇಧ ಹೇರಿದ ಸಂದರ್ಭದಲ್ಲೇ ಚೀನಾದಲ್ಲೂ ಇಂಥದ್ದೊಂದು ಬೆಳವಣಿಗೆ ನಡೆದಿದೆ.

ಚೀನಾದಲ್ಲಿ ಭಾರತೀಯ ಮೂಲದ ಸುದ್ದಿ ಪತ್ರಿಕೆ, ವೆಬ್ ತಾಣಗಳನ್ನು ಓಪನ್ ಮಾಡಲು ಆಗುತ್ತಿಲ್ಲ. ಸಾಧಾರಣವಾಗಿ ಈ ತಾಣಗಳನ್ನು ಓದಲು ವರ್ಚ್ಯುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಅಗತ್ಯವಿತ್ತು. ಬೀಜಿಂಗ್ ನಲ್ಲಿ ಬಳಕೆಯಲ್ಲಿದ್ದ ಎಕ್ಸ್ ಪ್ರೆಸ್ ವಿಪಿಎನ್ ಕಳೆದ ಎರಡು ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಸದ್ಯಕ್ಕೆ ಭಾರತ ಮೂಲದ ಸುದ್ದಿ ವಾಹಿನಿಗಳನ್ನು ಐಪಿ ಟಿವಿ ಮೂಲಕ ನೋಡಬಹುದಾಗಿದೆ.

ಚೀನಾ ಹಾದಿಯಲ್ಲಿ ಭಾರತ, ಪೋರ್ನ್ ಸೈಟ್ಸ್ ಬಂದ್ಚೀನಾ ಹಾದಿಯಲ್ಲಿ ಭಾರತ, ಪೋರ್ನ್ ಸೈಟ್ಸ್ ಬಂದ್

ಚೀನಾದಲ್ಲಿ ಈ ರೀತಿ ಲಾಕ್ಡೌನ್, ಬ್ಲಾಕೌಟ್, ಸೆನ್ಸಾರ್ ಮಾಮೂಲಿ, ಉದಾಹರಣೆಗೆ ಸಿಎನ್ಎನ್ ಅಥವಾ ಬಿಬಿಸಿ ವಾಹಿನಿಯಲ್ಲಿ ಹಾಂಗ್ ಕಾಂಗ್ ನಲ್ಲಿ ಚೀನಾ ವಿರುದ್ಧದ ಪ್ರತಿಭಟನೆ ಬಗ್ಗೆ ಸುದ್ದಿ ಬಂದರೆ, ಸ್ಕ್ರೀನ್ ಬ್ಲಾಂಕ್ ಆಗಿ ಬಿಡುತ್ತದೆ. ಚೀನಾ ವಿರುದ್ಧ ಸುದ್ದಿ ಪ್ರಸಾರವಾಗದಂತೆ ಕ್ಸಿ ಜಿನ್ ಪಿಂಗ್ ಸರ್ಕಾರ ಹೈಟೆಕ್ ಸೆನ್ಸಾರ್ ಶಿಪ್ ಜಾರಿಗೊಳಿಸಿದೆ.

ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ಸಾರ್ವಜನಿಕ ಹಿತಾ ಸಕ್ತಿ, ದೇಶದ ಭದ್ರತೆ ದೃಷ್ಟಿಯಿಂದ ಟಿಕ್ ಟಾಕ್, ಯುಸಿ ಬ್ರೌಸರ್, ಶೇರ್ ಇಟ್ ಸೇರಿದಂತೆ 59 ಆಪ್ ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

English summary
Indian newspapers and websites cannot be accessed in Beijing now without the Virtual Private Network (VPN) server. While the ExpressVPN has not been working in China for the past two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X