ಭಾರತ ಮನಸ್ಸು ಮಾಡಿದ್ರೆ ಯುದ್ಧ ನಿಲ್ಲಿಸಬಹುದು ಎಂದ ಅಮೆರಿಕ: ಕಾರಣವೇನು?
ಭಾರತದ ಪ್ರಧಾನಿ ಯಾವುದೇ ದೇಶಕ್ಕೆ ಭೇಟಿ ನೀಡಿದರು ವಿಶ್ವ ನಾಯಕರ ಕಣ್ಣು ನೆಟ್ಟಿರುತ್ತದೆ. ಈ ಬಾರಿಯೂ ಮೋದಿ ಭಾರತದ ಚುಕ್ಕಾಣಿ ಹಿಡಿದ ಬಳಿಕ ರಷ್ಯಾ ಭೇಟಿ ನೀಡಿದ್ದಾರೆ. ಉಭಯ ದೇಶಗಳ ನಡುವಣ ಸಂಬಂಧದ ಬಗ್ಗೆ ಈ ವೇಳೆ ಮಾತುಕತೆ ನಡೆಸಲಾಗಿದೆ. ಪ್ರಧಾನಿ ಮೋದಿ ವಿಶ್ವ ಮಟ್ಟದಲ್ಲಿ ತಮ್ಮ ಛಾಪು ದಿನೇ ದಿನೇ ಪಸರಿಸುತ್ತಿದ್ದಾರೆ ಎಂದು ಈಗ ಅಮೆರಿಕ ನೀಡಿರುವ ಆ ಒಂದು ಹೇಳಿಕೆಯಿಂದ ಅರ್ಥವಾಗುತ್ತದೆ.
ಸೋಮವಾರ ಎರಡು ದಿನಗಳ ರಷ್ಯಾ ಭೇಟಿಗೆ ತೆರಳಿರುವ ಮೋದಿ ಯಾವೆಲ್ಲಾ, ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿರುವಾಗಲೇ, ಅಮೆರಿಕ ನೀಡಿರುವ ಆ ಒಂದು ಹೇಳಿಕೆ ನಿಜಕ್ಕೂ ವಿಶ್ವದ ಗಮನ ಸೆಳೆದಿದೆ. ಭಾರತ ಬಯಸಿದರೆ, ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ವಿನಂತಿಸುವ ಮೂಲಕ ಉಕ್ರೇನ್ ಯುದ್ಧವನ್ನು ನಿಲ್ಲಿಸಬಹುದು ಎಂದು ಅಮೆರಿಕ ನಂಬುತ್ತದೆ ಎಂದು ತಿಳಿಸಿದೆ.

ಅಮೆರಿಕ ಹೇಳಿದ್ದೇನು?
ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಸಾಮರ್ಥ್ಯ ಭಾರತಕ್ಕಿದೆ. ಶ್ವೇತಭವನದ ವಕ್ತಾರ ಕರೀನ್ ಜೀನ್-ಪಿಯರ್ ಮಂಗಳವಾರ, ರಷ್ಯಾದೊಂದಿಗಿನ ಭಾರತದ ಸಂಬಂಧಗಳು ಉಕ್ರೇನ್‌ನೊಂದಿಗಿನ ಯುದ್ಧವನ್ನು ನಿಲ್ಲಿಸುವಂತೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಒತ್ತಾಯಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ನಡುವೆ ಉತ್ತಮ ಸ್ನೇಹವಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿಯವರು ಬಯಸಿದರೆ ಉಕ್ರೇನ್ ಯುದ್ಧವನ್ನು ನಿಲ್ಲಿಸಬಹುದು ಎಂದಿದ್ದಾರೆ.
ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿರುವ ಮಕ್ಕಳ ಆಸ್ಪತ್ರೆಯ ಮೇಲೆ ಮಾರಣಾಂತಿಕ ದಾಳಿ ನಡೆದ ಒಂದು ದಿನದ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಗ್ಧ ಮಕ್ಕಳ ಸಾವು ನೋವು ಭಯಾನಕವಾಗಿದೆ ಎಂದು ಪುಟಿನ್‌ಗೆ ಹೇಳಿದ್ದರು. ಪ್ರಧಾನಿ ಮೋದಿಯವರ ಈ ಹೇಳಿಕೆಯ ನಂತರ, ಶ್ವೇತಭವನದ ವಕ್ತಾರ ಜೀನ್-ಪಿಯರ್ ಈ ಹೇಳಿಕೆ ನೀಡಿದ್ದಾರೆ.

ಆಸ್ಟ್ರಿಯಾಗೆ ಭೇಟಿ
ಭಾರತ ಹಾಗೂ ಆಸ್ಟ್ರಿಯಾ ಸಂಬಂಧ 75 ಪೂರೈಸಿದ ಹಿನ್ನೆಲೆಯಲ್ಲಿ, ಭಾರತದ ಪ್ರಧಾನಿ 40 ವರ್ಷಗಳ ಬಳಿಕ ಈ ದೇಶಕ್ಕೆ ಭೇಟಿ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಂದು ಪ್ರಧಾನಿ ಮೋದಿ ಮತ್ತು ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ನಡುವಿನ ಭೇಟಿ ಅತ್ಯಂತ ಐತಿಹಾಸಿಕವಾಗಿತ್ತು. 75 ವರ್ಷ ಹಳೆಯದಾದ ಎರಡು ಸೌಹಾರ್ದ ರಾಷ್ಟ್ರಗಳ ಒಕ್ಕೂಟದ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಉಭಯ ನಾಯಕರು ಬುಧವಾರ ವಿಯೆನ್ನಾದಲ್ಲಿ ಅಧಿಕೃತ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈ ವೇಳೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದು ತಿಳಿದು ಬಂದಿದೆ. 40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ಹಿಂದೆ 1983ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಈ ದೇಶಕ್ಕೆ ಭೇಟಿ ನೀಡಿದ್ದರು. ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶೆಲೆನ್‌ಬರ್ಗ್ ಅವರು ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.












Click it and Unblock the Notifications