Ukraine War: ಉಕ್ರೇನ್ ಜೊತೆ ಅಮೆರಿಕದ ಮಹತ್ವದ ಒಪ್ಪಂದ, ಅದಿರು ವ್ಯಾಪಾರ ಒಪ್ಪಂದಕ್ಕೆ ಮುದ್ರೆ!
ಅಮೆರಿಕ & ಉಕ್ರೇನ್ ನಡುವೆ ಹಲವು ಒಪ್ಪಂದಗಳು ಏರ್ಪಡುತ್ತಿದ್ದು, ರಷ್ಯಾ ವಿರುದ್ಧ ಈಗ ಹೋರಾಟ ಮಾಡಲು ಉಕ್ರೇನ್ ಸೇನೆಗೆ ಹೊಸ ಬಲ ಸಿಕ್ಕಂತಾಗಿದೆ. ಅಮೆರಿಕ ಕಡೆಯಿಂದ, ಅದರಲ್ಲೂ ಡೊನಾಲ್ಡ್ ಟ್ರಂಪ್ ಸರ್ಕಾರದ ಕಡೆಯಿಂದ ಏನಾದರೂ ಮಾಡಿ ಭರ್ಜರಿ ಹಣ ಪಡೆಯಲು ಉಕ್ರೇನ್ ಪರದಾಡುತ್ತಿದೆ. ಇಂತಹ ಸಂದರ್ಭದಲ್ಲೇ ಉಕ್ರೇನ್ ನೆಲದಲ್ಲಿ ಇರುವ ಅದಿರು ಪಡೆಯಲು ಗಣಿಗಾರಿಕೆ ನಡೆಸಲು ಅಮೆರಿಕ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
ಉಕ್ರೇನ್ ವಿರುದ್ಧ ರಷ್ಯಾ ಸೇನೆಯು ಯುದ್ಧ ಸಾರಿ, ಹಲವು ವರ್ಷಗಳೇ ಕಳೆದು ಹೋಗಿವೆ. ರಷ್ಯಾ & ಉಕ್ರೇನ್ ನಡುವೆ ಫೈಟಿಂಗ್ ಶುರುವಾಗಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 1200 ದಿನಗಳೇ ಕಂಪ್ಲೀಟ್ ಆಗಲಿದೆ. ಇಬ್ಬರ ನಡುವೆ ಬೆಂಕಿ ಹೊತ್ತಿಕೊಂಡ ನಂತರ ಕೇವಲ ಒಂದೆರಡೆ ದಿನದಲ್ಲಿ ಯುದ್ಧ ನಿಲ್ಲಲಿದೆ ಅಂತಾನೆ ಎಲ್ಲರೂ ಅಂದುಕೊಂಡಿದ್ದರು. ಆದರೆ ಯುದ್ಧ ನೋಡ ನೋಡುತ್ತಲೇ ಬರೋಬ್ಬರಿ 1200 ದಿನ ಪೂರೈಸಿದ್ದು, ಇನ್ನೇನು 4ನೇ ವರ್ಷವನ್ನೂ ಮುಗಿಸುವ ಸಾಧ್ಯತೆ ಇದೆ.

ಉಕ್ರೇನ್ ಕೂಡ ಕಳೆದ 4 ವರ್ಷಗಳಿಂದಲೂ ಬಡಿದಾಡಿ ಖಾಲಿ ಕೈಯಲ್ಲಿ ಇದೀಗ ನರಳುತ್ತಿದೆ. ಇದೇ ಕಾರಣಕ್ಕೆ ತನ್ನ ನೆಲದಲ್ಲಿ ಇರುವ ಅತ್ಯಂತ ಅಮೂಲ್ಯವಾದ ಸಂಪನ್ಮೂಲ ಮಾರಾಟ ಮಾಡಲು ಅಮೆರಿಕ ಜೊತೆ ಒಪ್ಪಂದಕ್ಕೆ ಬಂದಿದೆ. ಹಾಗಾದ್ರೆ ಇದೀಗ ಅಮೆರಿಕ ಜೊತೆಯಲ್ಲಿ ಉಕ್ರೇನ್ ಮಾಡಿಕೊಂಡಿರುವ ಒಪ್ಪಂದ ಏನು? ಮುಂದೆ ಓದಿ.
ಟ್ರಂಪ್ ಸರ್ಕಾರಕ್ಕೆ ಲಾಟರಿ ಗ್ಯಾರಂಟಿ?
ಉಕ್ರೇನ್ ದೇಶದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಅದಿರುಗಳು ಇದ್ದು, ಇಡೀ ಜಗತ್ತಿನಲ್ಲೇ ಸಿಗದ ಅಮೂಲ್ಯವಾದ ಸಂಪನ್ಮೂಲ ಉಕ್ರೇನ್ ನೆಲದಲ್ಲಿ ಇದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಸಾಕಷ್ಟು ಯೋಚನೆ ಮಾಡಿ ಮಹತ್ವದ ಒಪ್ಪಂದಕ್ಕೆ ಬೇಡಿಕೆ ಇಟ್ಟಿದ್ದರು. ಆ ಮೂಲಕ ಅಮೆರಿಕ ಸಹಾಯ ಮಾಡಬೇಕು ಅಂದ್ರೆ ನೀವು ಅದಿರುಗಳನ್ನ ನೀಡಬೇಕು ಎಂಬ ಡಿಮ್ಯಾಂಡ್ ಮಾಡಿದ್ದರು. ಇದೀಗ ಟ್ರಂಪ್ ಬೇಡಿಕೆಯಂತೆ ಉಕ್ರೇನ್ ಒಪ್ಪಿಗೆ ಸೂಚಿಸಿದ್ದು, ಮೊದಲ ಹಂತದ ಮಾತುಕತೆಗೆ ಮುದ್ರೆ ಬಿದ್ದಿದೆ.
ದಾಳಿ ನಿಲ್ಲಿಸದ ರಷ್ಯಾ ಮಿಲಿಟರಿ!
ಇದೀಗ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿಯ ದಿಕ್ಕನ್ನೇ ಬದಲಾವಣೆ ಮಾಡುತ್ತಾ, ಉಕ್ರೇನ್ ಮಿಲಿಟರಿಗೆ ಆಘಾತ ನೀಡುತ್ತಿದೆ. ಗಡಿ ಭಾಗದಲ್ಲಿ ಸೇನೆಯನ್ನ ನುಗ್ಗಿಸಿ, ಬಹುತೇಕ ಪ್ರದೇಶಗಳನ್ನು ರಷ್ಯಾ ತನ್ನ ವಶಕ್ಕೆ ಪಡೆದಿದೆ. ಹಾಗೇ ಈಶಾನ್ಯ ಉಕ್ರೇನ್‌ನ ಹಾರ್ಕಿವ್ ಮತ್ತು ಸುಮಿ ಪ್ರದೇಶದ ಮೇಲೆ ಮಿಸೈಲ್ ಅಂದ್ರೆ ಕ್ಷಿಪಣಿ ಹಾಗೂ ವೈಮಾನಿಕ ದಾಳಿಯನ್ನ ನಡೆಸಿ ಶಾಕ್ ಕೊಟ್ಟಿದೆ. ರಾತ್ರಿಯಿಂದ ಶುರುವಾಗಿದ್ದ ದಾಳಿ ಇಂದು ಕೂಡ ಮುಂದುವರಿದಿದ್ದು, ಆ ಪರಿಣಾಮ 27 ಜನ ಗಾಯಗೊಂಡಿದ್ದಾರೆ ಹಾಗೂ ಇಬ್ಬರು ಮೃತಪಟ್ಟಿದ್ದಾರೆ ಎಂದು ದಾಳಿ ಬಗ್ಗೆ ಉಕ್ರೇನ್ ಮಾಹಿತಿ ನೀಡಿದೆ.












Click it and Unblock the Notifications