ಶಾಂತಿ ಮಾತುಕತೆ ವಿಫಲ ಎಂದ ಉಕ್ರೇನ್ ಅಧ್ಯಕ್ಷ, ಯುದ್ಧಕ್ಕೆ ಬ್ರೇಕ್ ಬೀಳುವುದೇ ಅನುಮಾನ | Ukraine And Russia
ಸ್ವಿಝರ್ಲ್ಯಾಂಡ್‌ನ ಜಿನೆವಾದಲ್ಲಿ ಇತ್ತೀಚೆಗೆ ರಷ್ಯಾ ಮತ್ತು ಉಕ್ರೇನ್ ಶಾಂತಿ ಒಪ್ಪಂದಕ್ಕಾಗಿ ಮಾತುಕತೆ ನಡೆಸಿದ್ದವು. ಶಾಂತಿ ಮಾತುಕತೆ ಮೂಲಕ ಯುದ್ಧ ನಿಲ್ಲಿಸಲು ರಷ್ಯಾ ಮತ್ತು ಉಕ್ರೇನ್ ಅಧಿಕಾರಿಗಳ ಜೊತೆಗೆ ಅಮೆರಿಕದ ಅಧಿಕಾರಿಗಳು ಕೂಡ ಊಟ ಹಾಗೂ ನಿದ್ದೆ ಬಿಟ್ಟು ಒದ್ದಾಡಿದ್ದರು. ಹೀಗೆ ಗಂಟೆ ಗಂಟೆ ಚರ್ಚೆ ಮಾಡಿ, ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂದು ಪ್ರಯತ್ನ ಮಾಡಿದ್ದರೂ ಅದು ಫ್ಲಾಪ್ ಷೋ ಆಗಿದೆ. ಖುದ್ದು ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದೀಗ ನೀಡಿರುವ ಹೇಳಿಕೆ ಈ ಯುದ್ಧ ಇನ್ನಷ್ಟು ವರ್ಷ ಮುಂದುವರಿಯುವ ಮುನ್ಸೂಚನೆ ನೀಡಿದೆ. ಅಲ್ಲದೆ ಶಾಂತಿ ಮಾತುಕತೆ ವಿಫಲ ಎಂದು ಬಹಿರಂಗವಾಗಿ ಉಕ್ರೇನ್ ಅಧ್ಯಕ್ಷರೇ ಹೇಳಿರುವುದು ಚರ್ಚೆಗೆ ಕೂಡ ಗ್ರಾಸವಾಗಿದೆ.
ಜಿನೆವಾದಲ್ಲಿ ರಾಜತಾಂತ್ರಿಕ ಮಾತುಕತೆಗೆ ಪರದಾಡಿದ ನಂತರ ಕೂಡ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಶಾಂತಿ ಮೂಡುತ್ತಿಲ್ಲ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ತಾಳ್ಮೆ ಕೆಡಿಸುತ್ತಿರುವ ಸಮಯದಲ್ಲೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿಕೆ ಮತ್ತಷ್ಟು ತಲ್ಲಣ ಸೃಷ್ಟಿ ಮಾಡಿದೆ. ಮಿಲಿಟರಿಯ ವಿಷಯಗಳ ಬಗ್ಗೆ ಗಂಭೀರವಾಗಿ & ಗಣನೀಯವಾಗಿ ಚರ್ಚಿಸಿದ್ರೂ ರಷ್ಯಾ ಜೊತೆಗಿನ ಅಮೆರಿಕ ಮಧ್ಯಸ್ಥಿಕೆ ಇದ್ದ ಇತ್ತೀಚಿನ ಮಾತುಕತೆ ತೃಪ್ತಿ ನೀಡಿಲ್ಲ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಸದ್ಯಕ್ಕೆ ನಿಲ್ಲುವುದಿಲ್ಲವಾ? ಎನ್ನುವ ಪ್ರಶ್ನೆ ಕೂಡ ಮೂಡುವಂತೆ ಮಾಡಿದೆ.

ರೊಚ್ಚಿಗೆದ್ದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಯುರೋಪ್ ನೆಲ ಜಿನೆವಾ ಒಂದು ರೀತಿಯಲ್ಲಿ ಯುದ್ಧಗಳನ್ನು ನಿಲ್ಲಿಸುವ ಸಂಧಾನದ ನೆಲವಾಗಿದ್ದು, ಇಲ್ಲಿ ಕಳೆದ ಕೆಲವು ತಿಂಗಳಿಂದ ಸಾಲು ಸಾಲು ಶಾಂತಿ ಮಾತುಕತೆಗಳು ನಡೆಯುತ್ತಿವೆ. ಇದೇ ರೀತಿ, ಅಮೆರಿಕ ಮಧ್ಯಸ್ಥಿಕೆಯಲ್ಲಿ ಉಕ್ರೇನ್ ಹಾಗೂ ರಷ್ಯಾ ನಡುವೆ ನಡೆದ ಮಾತುಕತೆ ಸಕ್ಸಸ್ ಆಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಜಿನೆವಾದಲ್ಲಿ ನಡೆದ ಮಾತುಕತೆ ಮಾತ್ರ ಈ ಯುದ್ಧ ನಿಲ್ಲಿಸಲು ಸಾಕಾಗುವುದಿಲ್ಲ ಎಂದಿದ್ದಾರೆ. ಆ ಮೂಲಕ ಜಿನೆವಾದಲ್ಲಿ ಅಮೆರಿಕದ ನೇತೃತ್ವದಲ್ಲಿ ನಡೆದ ಮಾತುಕತೆ ಸಕ್ಸಸ್ ಆಗಿಲ್ವಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ.
ಸೂಕ್ಷ್ಮ ರಾಜಕೀಯ ವಿಷಯ, ಸಂಧಾನಕ್ಕೆ ಎದುರಾಗಿರುವ ಸಮಸ್ಯೆಗಳು ಹಾಗೂ ನಾಯಕರ ನೇತೃತ್ವದ ಸಭೆಗಳು ಸವಾಲು ಸರಿ ಮಾಡಲು ಆಗಿಲ್ಲ. ನಾವು ಮುಂದಿನ ಸಭೆಯನ್ನ ನಿರೀಕ್ಷಿಸುತ್ತಿದ್ದು, ಫೆಬ್ರವರಿ ತಿಂಗಳಲ್ಲೇ ಮುಂದಿನ ಸಭೆ ನಡೆಯುವ ನಿರೀಕ್ಷೆ ಇದೆ ಎಂದಿದ್ದಾರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ. ಈ ಮೂಲಕ ಹೊಸ ಚರ್ಚೆ ಶುರುವಾಗಿದ್ದು, ರಷ್ಯಾ ಇಟ್ಟಿರುವ ಬೇಡಿಕೆಗಳಿಗೆ ಉಕ್ರೇನ್ ಪರೋಕ್ಷವಾಗಿ ಈಗ ಇಲ್ಲ ಎಂದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅಕಸ್ಮಾತ್ ಇದು ಅದೇ ರೀತಿ ಆಗಿದ್ದರೆ ಯುದ್ಧ ನಿಲ್ಲುವುದು ಕನಸಿನ ಮಾತೇ ಆಗಲಿದೆ, ಏಕೆಂದರೆ ರಷ್ಯಾ ತನ್ನ ಬೇಡಿಕೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ಈಗಾಗಲೇ ಹೇಳಿದೆ.
ಆಹಾರಕ್ಕೂ ಪರದಾಡುತ್ತಿರುವ ಉಕ್ರೇನ್ ಜನರು
ರಷ್ಯಾ ದಾಳಿಯ ಪರಿಣಾಮ ಈಗಾಗಲೇ ಉಕ್ರೇನ್ ದೇಶದ ವಿದ್ಯುತ್ ಘಟಕಗಳು ಹಾಳಾಗಿ ಹೋಗಿವೆ. ಇದರಿಂದ ಚಳಿಗಾಲದ ಸಮಯದಲ್ಲಿ ಏನು ಮಾಡಬೇಕು ಎಂಬುದೇ ಪ್ರಜೆಗಳಿಗೆ ತಿಳಿಯುತ್ತಿಲ್ಲ. ಅತ್ತ ಬೇರೆ ಜಾಗಕ್ಕೆ ಹೋಗಲು ಅವಕಾಶ ಇಲ್ಲ, ಮತ್ತೊಂದು ಕಡೆ ತಾವು ಇರುವ ಜಾಗದಲ್ಲಿ ಕೂಡ ಅವರಿಗೆ ನೆಮ್ಮದಿ ಇಲ್ಲ. ಹೀಗಿದ್ದಾಗ ಅನ್ನ & ಆಹಾರಕ್ಕೆ ಕೂಡ ಸಮಸ್ಯೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ಬ್ರೇಕ್ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದೆ. ಹೀಗಿದ್ದರೂ ಅದನ್ನು ರಷ್ಯಾ ಸೇನೆಯು ಮಾತ್ರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆಕ್ರೋಶ ಉಕ್ರೇನ್ ಸ್ನೇಹಿತ ರಾಷ್ಟ್ರಗಳಿಂದ ಮೊಳಗಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications