'ನಮಗೆ ನಮ್ಮ ಹಣ ನೀಡಿಬಿಡಿ': ತಾಲಿಬಾನ್ ಒತ್ತಾಯ
ಕಾಬೂಲ್, ಅಕ್ಟೋಬರ್ 29: ಅಫ್ಘಾನಿಸ್ತಾನಕ್ಕೆ ದಾಳಿ ನಡೆಸಿದ ತಾಲಿಬಾನ್ ದೇಶವನ್ನು ತನ್ನ ವಶಕ್ಕೆ ಪಡೆದುಕೊಂಡು ಸರ್ಕಾರವನ್ನು ರಚನೆ ಮಾಡಿದೆ. ಆದರೆ ಈಗ ತಾಲಿಬಾನ್‌ಗೆ ಸರ್ಕಾರ ನಡೆಸಲು ಆರ್ಥಿಕ ಸಮಸ್ಯೆ ಕಾಣಿಸಿಕೊಂಡಿದೆ. ಬರಪೀಡಿತ ರಾಷ್ಟ್ರವಾದ ಅಫ್ಘಾನಿಸ್ತಾನ ಈಗ ಆರ್ಥಿಕ ಸಮಸ್ಯೆ, ಬಡತನ ಮೊದಲಾದ ಸಮಸ್ಯೆಯನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರಿಯ ಸೆಂಟ್ರಲ್ ಬ್ಯಾಂಕ್ ಶತಕೋಟಿ ಡಾಲರ್‌ನಷ್ಟು ಹಣವನ್ನು ಬಿಡುಗಡೆ ಮಾಡಬೇಕು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಆಗ್ರಹ ಮಾಡಿದೆ.
ಯು.ಎಸ್. ಫೆಡರಲ್ ರಿಸರ್ವ್ ಮತ್ತು ಯುರೋಪ್‌ನಲ್ಲಿರುವ ಇತರೆ ಹಲವಾರು ಕೇಂದ್ರ ಬ್ಯಾಂಕುಗಳಲ್ಲಿ ಅಫ್ಘಾನಿಸ್ತಾನವು ಶತಕೋಟಿ ಡಾಲರ್ ಹಣವನ್ನು ಇರಿಸಿದೆ. ಆದರೆ ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ಈ ಅಂತಾರಾಷ್ಟ್ರೀಯ ಬ್ಯಾಂಕುಗಳು ಹಣವನ್ನು ತಡೆ ಹಿಡಿದಿದೆ. ತಾಲಿಬಾನ್ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನ್ ಸರ್ಕಾರವನ್ನು ಸ್ವೀಕಾರ ಮಾಡಿಲ್ಲ ಈ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ನಡೆಸುವುದು ಇನ್ನಷ್ಟು ಕಷ್ಟವಾಗುತ್ತಲೇ ಇರುವ ಹಿನ್ನೆಲೆ ತಾಲಿಬಾನ್ ಸರ್ಕಾರದ ಹಣಕಾಸುವ ಸಚಿವಾಲಯದ ವಕ್ತಾರ ಅಹ್ಮದ್ ವಾಲಿ ಹಕ್ಮಲ್ ಮಾತನಾಡಿ, "ಸರ್ಕಾರವು ಮಹಿಳೆಯರ ಶಿಕ್ಷಣ ಸೇರಿದಂತೆ ಮಾನವ ಹಕ್ಕುಗಳನ್ನು ಗೌರವಿಸುತ್ತದೆ. ಏಕೆಂದರೆ ನಾವು ಮಾನವೀಯ ನೆಲೆಗಟ್ಟಿನಲ್ಲಿ ಸಹಾಯವನ್ನು ಕೋರುತ್ತಿದ್ದೇವೆ," ಎಂದಿದ್ದಾರೆ.

1996-2001 ರಲ್ಲಿ ತಾಲಿಬಾನ್ ಸರ್ಕಾರವನ್ನು ರಚನೆ ಮಾಡಿದಾಗ, ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ಮಹಿಳೆಯರು ಶಿಕ್ಷಣ ಪಡೆಯಲು ಹಾಗೂ ಉದ್ಯೋಗವನ್ನು ಪಡೆಯಲು ಅನುಮತಿ ಇರಲಿಲ್ಲ. ಮಹಿಳೆಯರು ಕಡ್ಡಾಯವಾಗಿ ಮುಖವನ್ನು ಮುಚ್ಚಬೇಕಾಗಿತ್ತು. ಮನೆಯಿಂದ ಹೊರಗೆ ಹೋಗಬೇಕಾದರೂ ಪುರುಷರ ಜೊತೆಯಲ್ಲೇ ಹೋಗಬೇಕಿತ್ತು.
ನಮಗೆ ನಮ್ಮ ಹಣ ನೀಡಿ, ಇಲ್ಲವಾದರೆ ನಿಮಗೆಯೇ ತೊಂದರೆ
"ಆ ಹಣವು ಅಫ್ಘಾನ್ ದೇಶಕ್ಕೆ ಸೇರಿದ ಹಣ. ನಮಗೆ ನಮ್ಮ ಹಣವನ್ನು ನೀಡಿ. ಹಣವನ್ನು ಹೀಗೆ ತಡೆದು ಹಿಡಿಯುವುದು ಅನೈತಿಕ ಹಾಗೂ ಇದು ಕಾನೂನು, ಮೌಲ್ಯಕ್ಕೆ ವಿರುದ್ಧವಾದುದು," ಎಂದು ತಾಲಿಬಾನ್ ಸರ್ಕಾರದ ಹಣಕಾಸುವ ಸಚಿವಾಲಯದ ವಕ್ತಾರ ಅಹ್ಮದ್ ವಾಲಿ ಹಕ್ಮಲ್ ಆಗ್ರಹಿಸಿದ್ದಾರೆ. ಯುರೋಪ್‌ನ ಕಡೆಗೆ ಸಾಮೂಹಿಕ ವಲಸೆ, ಬಿಕ್ಕಟ್ಟನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ಆರ್ಥಿಕ ಕುಸಿತವನ್ನು ತಪ್ಪಿಸಲು ಜರ್ಮನಿ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳಿಗೆ ತಮ್ಮ ಪಾಲನ್ನು ಬಿಡುಗಡೆ ಮಾಡಲು ಕೇಂದ್ರ ಬ್ಯಾಂಕ್‌ನ ಉನ್ನತ ಅಧಿಕಾರಿ ಶಾ ಮೆಹ್ರಾಬಿ ಕರೆ ನೀಡಿದರು.
"ಪರಿಸ್ಥಿತಿ ತೀರಾ ಹತಾಶವಾಗಿದೆ ಹಾಗೂ ಹಣದ ಪ್ರಮಾಣ ತೀರಾ ಕಡಿಮೆ ಆಗುತ್ತಿದೆ," ಎಂದು ಅಫ್ಘಾನ್ ಸೆಂಟ್ರಲ್ ಬ್ಯಾಂಕ್‌ನ ಮಂಡಳಿಯ ಸದಸ್ಯ ಶಾ ಮೆಹ್ರಾಬಿ ರಾಯಿಟರ್ಸ್‌ಗೆ ತಿಳಿಸಿದರು. "ಅಫ್ಘಾನಿಸ್ತಾನಕ್ಕೆ ತನ್ನ ಹಣವು ಲಭಿಸದಿದ್ದರೆ ಇದರಿಂದಾಗಿ ಯುರೋಪ್ ದೇಶಗಳ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ. ಜನರಿಗೆ ಆಹಾರವಿಲ್ಲದೆ ಭಾರೀ ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ದೇಶ ತೊರೆದು ಯುರೋಪ್‌ಗೆ ಹೋಗುತ್ತಿದ್ದಾರೆ," ಎಂಬ ಎಚ್ಚರಿಕೆಯನ್ನು ಕೂಡಾ ಶಾ ಮೆಹ್ರಾಬಿ ನೀಡಿದ್ದಾರೆ. ಸರಿಸುಮಾರು 400 ಮಿಲಿಯನ್ ಆಫ್ಘಾನಿಗಳ ದೈನಂದಿನ ತೆರಿಗೆಯನ್ನು ಹೊಂದಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಬೇರೆ ರಾಷ್ಟ್ರಗಳು ಅಫ್ಘಾನಿಸ್ತಾನದಲ್ಲಿ ಆಗುವ ಈ ಮಾನವೀಯ ವಿಪತ್ತನ್ನು ಪರಿಹರಿಸಲು ಸಹಾಯವನ್ನು ಮಾಡಲು ಬಯಸಿದೆ. ಆದರೆ ಈ ಸಂದರ್ಭದಲ್ಲೇ ತಾಲಿಬಾನ್ ಸರ್ಕಾರವನ್ನು ಗುರುತಿಸಲು ನಿರಾಕರಿಸಿದೆ.
ಎಲ್‌ಜಿಬಿಟಿ, ನಮ್ಮ ಷರಿಯಾಗೆ ವಿರುದ್ಧ ಎಂದ ತಾಲಿಬಾನ್ ವಕ್ತಾರ
ಇನ್ನು ಈ ಸಂದರ್ಭದಲ್ಲಿ ತಾಲಿಬಾನ್ ಸರ್ಕಾರದ ಹಣಕಾಸುವ ಸಚಿವಾಲಯದ ವಕ್ತಾರ ಅಹ್ಮದ್ ವಾಲಿ ಹಕ್ಮಲ್ ಮಾನವ ಹಕ್ಕುಗಳ ಬಗ್ಗೆ ಮಾತನಾಡಿದ್ದಾರೆ. "ಅಫ್ಘಾನಿಸ್ತಾನವು ಮಹಿಳೆಯರು ಶಿಕ್ಷಣವನ್ನು ಪಡೆಯಲು ಅನುಮತಿ ನೀಡುತ್ತದೆ. ಆದರೆ ಪುರುಷರೊಂದಿಗೆ ಒಂದೇ ತರಗತಿಯಲ್ಲಿ ಶಿಕ್ಷಣವನ್ನು ನೀಡಲು ಆಗದು. ನಾವು ಮಾನವ ಹಕ್ಕುಗಳನ್ನು ಗೌರವಿಸುತ್ತೇವೆ. ಆದರೆ ಇಸ್ಲಾಮ್ ಕಾನೂನಿನ ಪ್ರಕಾರ ಮಾನವ ಹಕ್ಕುಗಳನ್ನು ನಾವು ಗೌರವಿಸುತ್ತೇವೆ. ಇದರಲ್ಲಿ ಸಲಿಂಗ ಕಾಮ ಎಂಬುವುದು ಮಾನ್ಯತೆ ಆಗಲಾರದು. ಎಲ್‌ಜಿಬಿಟಿ.. ಅದು ನಮ್ಮ ಚರಿಯಾ ಕಾನೂನಿಗೆ ವಿರುದ್ಧವಾದುದ್ದು," ಎಂದಿದ್ದಾರೆ.
ಇನ್ನು ಹಣದ ವಿಚಾರದಲ್ಲಿ ಮಾತನಾಡಿದ ಅಹ್ಮದ್ ವಾಲಿ ಹಕ್ಮಲ್, "ನಮಗೆ ಹಣ ನೀಡದಿದ್ದರೆ, ಅಫ್ಘಾನಿಸ್ತಾನದ ಆಮದುದಾರರಿಗೆ ಆಮದು ಮಾಡಿಕೊಳ್ಳಲು ಹಣವನ್ನು ನೀಡಲು ಸಾಧ್ಯವಾಗುವುದಿಲ್ಲ, ಬ್ಯಾಂಕುಗಳು ನಷ್ಟ ಅನುಭವಿಸಿ ಕುಸಿಯುತ್ತದೆ, ಆಹಾರ ಎಂಬುವುದೇ ವಿರಳ ವಸ್ತುವಾಗುತ್ತದೆ, ದಿನಸಿ ಅಂಗಡಿಗಳು ಬರಿದಾಗುತ್ತದೆ," ಎಂದು ವಿವರಿಸಿದರು.
(ಒನ್‌ಇಂಡಿಯಾ ಸುದ್ದಿ)
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications