Russia: ರಷ್ಯಾ ದೇಶಕ್ಕೆ ಭರ್ಜರಿ ಬಂಪರ್ ನಿರೀಕ್ಷೆ, ಉಕ್ರೇನ್ ಜೊತೆ ಶಾಂತಿ ಒಪ್ಪಂದದ ನಂತರ ಭೂಭಾಗ ಹೆಚ್ಚುವ ಸಾಧ್ಯತೆ
ರಷ್ಯಾ ಈಗಾಗಲೇ ಉಕ್ರೇನ್ ವಿರುದ್ಧ ಎಲ್ಲಾ ರೀತಿಯ ತಂತ್ರ ಪ್ರಯೋಗಿಸಿ ಯುದ್ಧ ಮಾಡುತ್ತಿದೆ, ತನ್ನ ಬಳಿ ಇರುವ ದೊಡ್ಡ ದೊಡ್ಡ ಅಸ್ತ್ರಗಳನ್ನ ಪ್ರಯೋಗ ಮಾಡಿ ಉಕ್ರೇನ್ ದೇಶ ನಲುಗಿ ಹೋಗುವ ರೀತಿಯೇ ದಾಳಿ ಮಾಡಿದೆ. ಈ ಪೈಕಿ ಚಳಿಗಾಲದ ಸಮಯದಲ್ಲಿ ನಡೆದ ದಾಳಿ ಪರಿಣಾಮ ಈಗಾಗಲೇ ಉಕ್ರೇನ್ ದೇಶದ ಜನರು ಜೀವ ಉಳಿಸಿಕೊಳ್ಳಲು ವಲಸೆ ಹೋಗುವ ವಾತಾವರಣ ನಿರ್ಮಾಣ ಆಗಿದೆ. ಇನ್ನೊಂದು ಕಡೆ ಅಮೆರಿಕ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾ ಶಾಂತಿ ಒಪ್ಪಂದಕ್ಕೆ ವೇದಿಕೆ ಸೃಷ್ಟಿಸಿದೆ. ಆದರೆ ಈ ಶಾಂತಿ ಒಪ್ಪಂದ ಸಕ್ಸಸ್ ಕಂಡರೆ ಅದರಿಂದ ರಷ್ಯಾಗೆ ದೊಡ್ಡ ಲಾಭವಾಗಲಿದೆ, ಹೇಗೆ ಗೊತ್ತಾ?
ರಷ್ಯಾ ತನ್ನ ಶತ್ರು ಉಕ್ರೇನ್ ವಿರುದ್ಧ ಬಲಶಾಲಿ ಅಸ್ತ್ರ ಪ್ರಯೋಗ ಮಾಡಿ ಯುದ್ಧದಲ್ಲಿ ಭಾಗಶಃ ಗೆಲುವು ಕಂಡಿದೆ. ಹೀಗೆ ರಷ್ಯಾ ನಡೆಸುತ್ತಿರುವ ದಾಳಿ ಪರಿಣಾಮ ಈಗಾಗಲೇ ಉಕ್ರೇನ್ ನಲುಗಿ ಹೋಗುತ್ತಿದೆ. ದೊಡ್ಡ, ದೊಡ್ಡ ಕ್ಷಿಪಣಿ & ಡ್ರೋನ್ ಮೂಲಕ ಉಕ್ರೇನ್ ನೆಲವನ್ನು ಧೂಳ್ ಧೂಳ್ ಮಾಡಲು ಮುಂದೆ ನುಗ್ಗಿದೆ ರಷ್ಯಾ ಸೇನೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಮೆರಿಕ ಕೂಡ ಶಾಂತಿ ಮಾತುಕತೆಯ ಮೂಲಕ ರಷ್ಯಾ ನಾಯಕರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದೆ. ಅಲ್ಲದೆ ರಷ್ಯಾ & ಉಕ್ರೇನ್‌ನ ನಡುವೆ ಶಾಂತಿ ಮಾತುಕತೆ ಮಾಡಿಸಿ ಆದಷ್ಟು ಬೇಗ ಯುದ್ಧ ನಿಲ್ಲಿಸುವ ಪ್ರಯತ್ನಗಳು ಕೂಡ ಇದೀಗ ಸಾಗಿವೆ. ಆದರೆ ಈ ಸಂಧಾನ ನಡೆದರೆ ಅದರಿಂದ ಅತಿಹೆಚ್ಚು ಲಾಭ ಸಿಗುವುದೇ ರಷ್ಯಾಗೆ ಗೊತ್ತಾ?

ರಷ್ಯಾ ಗೆದ್ದಿರುವ ಪ್ರದೇಶವನ್ನು ಬಿಟ್ಟುಕೊಡಲ್ಲ!
ಹೌದು, ಈಗಾಗಲೇ ರಷ್ಯಾ ಸ್ಪಷ್ಟವಾಗಿ ಹೇಳಿರುವಂತೆ ತಾನು ಗೆದ್ದಿರುವ ಉಕ್ರೇನ್ ಭೂಮಿಯನ್ನ ಮತ್ತೆ ಉಕ್ರೇನ್‌ಗೆ ಮರಳಿಸುವುದಿಲ್ಲ ಎಂದಿದೆ. ಈ ಮೂಲಕ ಉಕ್ರೇನ್ ಭಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಳೆದುಕೊಂಡು ನರಳುವುದು ಗ್ಯಾರಂಟಿ ಆಗಿದ್ದು, ಭವಿಷ್ಯದಲ್ಲಿ ಕೂಡ ಈ ಜಾಗ ರಷ್ಯಾ ದೇಶದ ಪಾಲು ಆಗಲಿದೆ. ಮತ್ತೊಂದು ಕಡೆ ಉಕ್ರೇನ್ ರಾಜಧಾನಿ ಸಮೀಪಕ್ಕೆ ನುಗ್ಗಿರುವ ರಷ್ಯಾ ಸೇನೆಯು ಯಾವುದೇ ಕ್ಷಣದಲ್ಲಿ ಅದನ್ನು ಕೂಡ ಮತ್ತೆ ತನ್ನ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ಈಗ ಶಾಂತಿ ಒಪ್ಫಂದ ಉಕ್ರೇನ್‌ಗೆ ಚಿಂತೆ ತರಿಸಿದೆ.
ಅಮೆರಿಕ ಯಾರ ಬೆಂಬಲಕ್ಕೆ ನಿಲ್ಲಲಿದೆ?
ರಷ್ಯಾ ಇದೀಗ ಹಠ ಮಾಡಿ ತಾನು ಉಕ್ರೇನ್ ಕಡೆಯಿಂದ ಕಿತ್ತುಕೊಂಡಿರುವ ಜಾಗ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರೆ, ಆಗ ಅಮೆರಿಕ ಯಾರ ಬೆಂಬಲಕ್ಕೆ ನಿಲ್ಲಲಿದೆ? ಎಂಬ ಚರ್ಚೆ ನಡೆಯುತ್ತಿದೆ. ಇಲ್ಲಿ ಅಂತಹ ಪರಿಸ್ಥಿತಿ ಎದುರಾದರೆ ಅಮೆರಿಕ ಯಾರ ಪರವಾಗಿಯೂ ನಿಲ್ಲುವುದಿಲ್ಲ. ಯಾಕಂದ್ರೆ, ಹೇಗಾದರೂ ಮಾಡಿ ಯುದ್ಧ ನಿಲ್ಲಿಸಬೇಕು ಎಂದು ಅಮೆರಿಕ ಪರದಾಡುತ್ತಿದೆ. ಹೀಗಾಗಿ ರಷ್ಯಾ ಹೇಗೆ ಹೇಳುತ್ತದೋ ಅದನ್ನೇ ಒಪ್ಪುವ ಸಾಧ್ಯತೆ ದಟ್ಟವಾಗಿದೆ. ಅಕಸ್ಮಾತ್ ಹೀಗೆ ಆಗಿ ಹೋದರೆ ಉಕ್ರೇನ್‌ಗೆ ಅದು ದೊಡ್ಡ ಹೊಡೆತ ಕೊಡಲಿದೆ. ಹಾಗೇ ಭಷ್ಯದಲ್ಲಿ ದೊಡ್ಡ ಪ್ರಮಾಣದ ಭೂಮಿ ಕೆಳದುಕೊಂಡ ಕೊರಗು ಕೂಡ ಕಾಡಲಿದೆ ಉಕ್ರೇನ್ ದೇಶಕ್ಕೆ.












Click it and Unblock the Notifications