ಬೆಂಕಿಯ ಮೇಲೆ ನಡೆಯುತ್ತಿದೆ ಪಾಪಿ ಪಾಕಿಸ್ತಾನ!
ಪಾಕಿಸ್ತಾನ ಪರಿಸ್ಥಿತಿ ಕೆಂಡದ ಮೇಲಿನ ಸೆರಗಿನಂತೆ ಆಗಿದೆ, ಅತ್ತ ಓಡುವಂತೆಯೂ ಇಲ್ಲ.. ಇತ್ತ ಅನುಭವಿಸಲೂ ಆಗಲ್ಲ.. ಹಿಂಗೆ ಪಾಕಿಸ್ತಾನ ಪರದಾಡುತ್ತಿದೆ. ಹೀಗಿದ್ದಾಲೇ ಪಾಕ್‌ನ ರಾಜಕಾರಣಿಗಳು ದೇಶಕ್ಕೆ ಬೆಂಕಿ ಹಚ್ಚಿ ಜೋಳ ಬೇಯಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ಆ ಕಡೆ ಇರಲಿ ಅನ್ನುವಾಗಲೇ ಪಾಕಿಸ್ತಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ, ಯಾಕೆ ಗೊತ್ತಾ?
ಹೌದು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಅಧಿಕಾರಿಯೊಬ್ಬರ ಆರೋಪದ ಬಗ್ಗೆ ತನಿಖೆ ನೆಡೆಸಲು ಪಾಕಿಸ್ತಾನ ಚುನಾವಣಾ ಆಯೋಗ ಉನ್ನತ ಮಟ್ಟದ ಸಮಿತಿ ರಚಿಸಿದೆ. ಪಾಕಿಸ್ತಾನದ ಚುನಾವಣೆಯಲ್ಲಿ ಭಾರಿ ದೊಡ್ಡ ಅಕ್ರಮ ನಡೆದಿದೆ ಎಂಬ ಆರೋಪವನ್ನ ಇತ್ತೀಚೆಗೆ ಪಾಕ್ ಚುನಾವಣೆ ಅಧಿಕಾರಿ ಒಬ್ಬರು ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ಇಂತಹ ನಿರ್ಧಾರ, ಕೈಗೊಂಡಿದೆ ಪಾಕಿಸ್ತಾನ ಚುನಾವಣಾ ಆಯೋಗ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

1 ವಾರದ ಹಿಂದೆ ಸಂಸತ್ ಚುನಾವಣೆ
ಪಾಕಿಸ್ತಾನದಲ್ಲಿ 1 ವಾರದ ಹಿಂದೆ ಸಂಸತ್ ಚುನಾವಣೆ ನಡೆದಿತ್ತು. ತಾಂತ್ರಿಕವಾಗಿ ಭಾರಿ ಹಿಂದೆ ಉಳಿದಿರುವ ಕಾರಣ, ಹಲವು ದಿನಗಳ ಕಾಲ ಮತ ಎಣಿಕೆಯು ನಡೆದು ಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ಪಾಕಿಸ್ತಾನದಲ್ಲಿ ಯಾರಿಗೂ ಬಹುಮತ ಸಿಕ್ಕಿಲ್ಲ. ಹೀಗಾಗಿ ಅತಂತ್ರ ಸ್ಥಿತಿ ಇದೀಗ ಸೃಷ್ಟಿಯಾಗಿದೆ. ಹೀಗಿದ್ದಾಗ ಅಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೊರತಾಗಿ ಸರ್ಕಾರ ರಚನೆ ಮಾಡಲು ಇಮ್ರಾನ್ ಶತ್ರುಗಳು ಪ್ಲ್ಯಾನ್ ಮಾಡಿದ್ದಾರೆ. ಹೀಗಿದ್ದಾಗಲೆ ಸ್ಫೋಟಕ ಆರೋಪವನ್ನ ಮಾಡಿದ್ದಾರೆ ಪಾಕಿಸ್ತಾನ ಚುನಾವಣಾ ಅಧಿಕಾರಿ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಚುನಾವಣೆ ಆಯೋಗ ಅಲರ್ಟ್ ಆಗಿದೆ.
ಗಂಭೀರ ತನಿಖೆ ಗ್ಯಾರಂಟಿ?
ಪಾಕಿಸ್ತಾನ ಚುನಾವಣಾ ಆಯೋಗ ಮುಖ್ಯ ಆಯುಕ್ತರು & ಮುಖ್ಯ ನ್ಯಾಯಮೂರ್ತಿ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಪಾಕಿಸ್ತಾನ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪಾಕಿಸ್ತಾನ ಅಧಿಕಾರಿ ಆರೋಪ ಮಾಡಿದ್ದರು. ರಾವಲ್ಪಿಂಡಿ ಮಾಜಿ ಆಯುಕ್ತ, ಲಿಯಾಖತ್ ಅಲಿ ಛತ್ತಾ ಈ ರೀತಿ ಆರೋಪ ಮಾಡಿದ್ದಾರೆ. ಇದೀಗ ಈ ಬಗ್ಗೆ ಗಂಭೀರ ತನಿಖೆಗೆ ಪಾಕಿಸ್ತಾನ ಚುನಾವಣೆ ಆಯೋಗ ಮುಂದಾಗಿದೆ.

ಪಾಕ್ ಆಯೋಗದ ತುರ್ತು ಸಭೆ
ಈ ಆರೋಪದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಆಯೋಗ, ಹಿರಿಯ ಅಧಿಕಾರಿ ಆರೋಪದ ಬಗ್ಗೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದೆ. ಮುಖ್ಯ ಚುನಾವಣೆ ಆಯುಕ್ತ ಸಿಖಂದರ್ ಸುಲ್ತಾನ್ ರಜಾ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆಯಲ್ಲಿ ಭಾವಹಿಸಿದ್ದರು. ಹಾಗೇ ಉನ್ನತ ಮಟ್ಟದ, ಸಮಿತಿ ಆರೋಪ ಕೇಳಿಬಂದ ಜಿಲ್ಲೆಗಳ ಚುನಾವಣಾಧಿಕಾರಿ, ಸಂಬಂಧಿತ ಅಧಿಕಾರಿಗಳ ಹೇಳಿಕೆ ದಾಖಲಿಸಲಿದೆ. 3 ದಿನದಲ್ಲಿ ವರದಿ ಸಲ್ಲಿಸಲಿದೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ?
ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಪಾಕಿಸ್ತಾನದಲ್ಲಿ ಹೇಗಾದರೂ ಮಾಡಿ ಸರ್ಕಾರ ರಚಿಸಬೇಕೆಂಬ ಹುಮ್ಮಸ್ಸಿನಲ್ಲಿ ಮಾಜಿ ಪ್ರಧಾನಿ, ನವಾಜ್ ಷರೀಫ್ & ಟೀಂ ಇದೆ. ಮೈತ್ರಿ ಸರ್ಕಾರ ರಚನೆಗೆ ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಮತ್ತು ಬಿಲಾವಲ್ ಭುಟ್ಟೊ ನೇತೃತ್ವದ ಪಿಪಿಪಿ, ಪ್ರಯತ್ನ ನಡೆಸುತ್ತಿದೆ. ನವಾಜ್ ಷರೀಫ್ ಪಕ್ಷ 75 & ಬಿಲಾವಲ್ ಬುಟ್ಟೋ ಪಕ್ಷವು 54 ಸ್ಥಾನ ಗೆದ್ದಿದೆ. 17 ಸ್ಥಾನ ಗೆದ್ದಿರುವ ಎಂಕ್ಯೂಎಂ-ಪಿ ಕೂಡಾ ಮೈತ್ರಿ ಬೆಂಬಲಿಸಲು ತೀರ್ಮಾನಿಸಿದ್ದು, ಈ ಎಲ್ಲಾ ಕಾರಣಗಳ ಬೆನ್ನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆಗೂ ಪಾಕಿಸ್ತಾನವು ಈಗ ಸಾಕ್ಷಿ ಆಗಿದೆ.












Click it and Unblock the Notifications