ಪಾಕಿಸ್ತಾನದ ಗುರಿ ಭಾರತಕ್ಕಿಂತ ಹೆಚ್ಚಾಗಿ RSS! ಸಾಕ್ಷಿ ಇಲ್ಲಿದೆ ನೋಡಿ...

ಇಸ್ಲಾಮಾಬಾದ್, ಆಗಸ್ಟ್ 30: "ಇಂದಿನ ಪೀಳಿಗೆಯ ಮಕ್ಕಳು ಹಿಟ್ಲರ್ ಮತ್ತವನ ಸಾಮ್ರಾಜ್ಯದ ಕತೆ ಕೇಳಿದ್ದಾರಷ್ಟೆ, ಆದರೆ ಕಣ್ಣಾರೆ ಕಂಡಿಲ್ಲ. ವಾಸ್ತವ ಏನೆಂದರೆ ಉಪಖಂಡ(ಭಾರತ)ದಲ್ಲಿ ಮತ್ತೊಬ್ಬ ಹಿಟ್ಲರ್ ಉದಯಿಸುತ್ತಿದ್ದಾನೆ..." ಎಂಬ ಟ್ವೀಟ್ ಮೂಲಕ ಪಾಕಿಸ್ತಾನ್ ತೆಹ್ರೀಕ್ ಇ-ಇನ್ಸಾಫ್(ಪಿಟಿಐ) ಪಕ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗುರಿಯಾಗಿಸಿ ವಿಡಿಯೋವೊಂದನ್ನು ಶೇರ್ ಮಾಡಿದೆ.

Recommended Video

      ಪಾಕ್‌ನಿಂದ 222 ಬಾರಿ ಕದನ ವಿರಾಮ ಉಲ್ಲಂಘನೆ | Oneindia Kannada

      ಈ ಮೂಲಕ ಭಾರತದಲ್ಲಿ ತನ್ನ ಗುರಿ ಆರೆಸ್ಸೆಸ್ ಮತ್ತದರ ಬೆಂಬಲಿಗರು ಎಂಬುದನ್ನು ಪಾಕಿಸ್ತಾನ ನೇರವಾಗಿಯೇ ಹೇಳಿದೆ.

      'ಆರೆಸ್ಸೆಸ್ ಎಂದರೆ ಹಿಟ್ಲರ್ ಮತ್ತು ಮುಸೊಲಿನಿಯ ಮಿಶ್ರಣ' ಎಂದು ವ್ಯಕ್ತಿಯೊಬ್ಬ ಸಂದರ್ಶಕಿಗೆ ಹೇಳುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ. ಮಾತ್ರವಲ್ಲ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕರಾಗಿದ್ದ ಮಾಧವರಾವ್ ಗೋಳ್ವಲ್ಕರ್ ಅವರ ಹೆಸರನ್ನೂ ಉಲ್ಲೇಖಿಸಿ, 'ಆರೆಸ್ಸೆಸ್ ನಾಝಿ ಸಿದ್ಧಾಂತ'ವನ್ನು ಬೆಂಬಲಿಸುತ್ತದೆ ಎಂದು ಗುರೂಜಿ ಗೋಳ್ವಲ್ಕರ್ ಹೇಳಿದ್ದಾಗಿ ಈ ವಿಡಿಯೋದಲ್ಲಿ ಹೇಳಲಾಗಿದೆ.

      ಜರ್ಮನಿಯ ಸರ್ವಾಧಿಕಾರಿ, ನಾಝಿ ಪಕ್ಷದ ಅಡಾಲ್ಫ್ ಹಿಟ್ಲರ್ ಮತ್ತು ಇಟಲಿಯ ಫ್ಯಾಸಿಸಂ ಪ್ರತಿಪಾದಕ ಬೆನಿಟೋ ಮುಸೊಲಿನಿ ಇಬ್ಬರೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಪ್ರೇರಣೆ ಎಂದು ವಿಡಿಯೋದಲ್ಲಿ ವ್ಯಕ್ತಿ ಹೇಳಿದ್ದಾನೆ.

      ಈ ವಿಡಿಯೋದಲ್ಲಿ ಏನಿದೆ, ಸಂಪೂರ್ಣ ವಿವರ ಇಲ್ಲಿದೆ...

      Array

      ಆರೆಸ್ಸೆಸ್ ನ ಡ್ರೆಸ್ ಕೋಡ್ ಹೇಗೆ ಬಂತು?

      ಗಣವೇಷ ಎಂದು ಕರೆಯಲ್ಪಡುವ ಆರೆಸ್ಸೆಸ್ ನ ಡ್ರೆಸ್ ಕೋಡ್ ಬಗ್ಗೆ ಈ ವಿಡಿಯೋದಲ್ಲಿ ಹೇಳಿರುವ ವ್ಯಕ್ತಿ, "ಆರೆಸ್ಸೆಸ್ನ ಡ್ರೆಸ್ ಕೋಡ್ ಆಗಿರುವ ಖಾಕಿ ಚಡ್ಡಿ ಬಂದಿದ್ದು ಹಿಟ್ಲರ್ ನಿಂದ, ಕಪ್ಪು ಟೋಪಿ ಬಂದಿದ್ದು ಮುಸೊಲಿನಿಯಿಂದ!" ಎಂದಿದ್ದಾನೆ.

      ಹಿಟ್ಲರ್-ಮುಸೊಲಿನಿಯ ಮಿಶ್ರಣ!

      ಹಿಟ್ಲರ್-ಮುಸೊಲಿನಿಯ ಮಿಶ್ರಣ!

      "ಹಾಗಾದರೆ ಇದು ಮುಸೊಲಿನಿ ಮತ್ತು ಹಿಟ್ಲರ್ ನಿಂದ ಪ್ರೇರಣೆ ಪಡೆದ ಸಂಘಟನೆಯೇ?" ಎಂಬ ಸಂದರ್ಶಕಿಯ ಪ್ರಶ್ನೆಗೆ ಉತ್ತರಿಸಿದ ವ್ಯಕ್ತಿ, "ಅದು ಮುಸೊಲಿನಿ ಮತ್ತು ಹಿಟ್ಲರ್ ನ ಮಿಶ್ರಣ. ನಾಜಿ ಸಿದ್ಧಾಂತವನ್ನು ಆರೆಸ್ಸೆಸ್ ಬೆಂಬಲಿಸುತ್ತದೆ ಎಂದು ಸ್ವತಃ ಆರೆಸ್ಸೆಸ್ ಮುಖಂಡ ಗೋಳ್ವಲ್ಕರ್ ಅವರೇ ಹೇಳಿದ್ದಾರೆ. ಅವರೇ ಒಂದು ಪುಸ್ತಕದಲ್ಲಿ ಅದನ್ನು ಬರೆದಿದ್ದಾರೆ. ನೀವು ಆ ಪುಸ್ತಕವನ್ನು ಓದಲೇ ಬೇಕು" ಎಂದು ವ್ಯಕ್ತಿ ಸಂದರ್ಶಕಿಗೆ ಹೇಳುತ್ತಾನೆ. ಆದರೆ ಎಲ್ಲೂ ಆ ಪುಸ್ತಕದ ಹೆಸರನ್ನು ಉಲ್ಲೇಖಿಸಿಲ್ಲ ಎಂಬುದು ಬೇರೆ ಮಾತು!

      ಹಿಂದುತ್ವ ಇಂದು ಅತ್ಯಂತ ಬಲಾಡ್ಯವಾಗಿದೆ!

      ಹಿಂದುತ್ವ ಇಂದು ಅತ್ಯಂತ ಬಲಾಡ್ಯವಾಗಿದೆ!

      "ಇಂದು ಹಿಂದುತ್ವ ಹಿಂದೆಂದಿಗಿಂತಲೂ ಹೆಚ್ಚು ಬಲಾಡ್ಯವಾಗಿದೆ. ಆರೆಸ್ಸೆಸ್ ಮಿಲಿಯನ್ ಗಟ್ಟಲೆ ಸದಸ್ಯರನ್ನು ಹೊಂದಿದೆ. ಹಾಗೆಯೇ ನಿಯಮಿತವಾಗಿ 'ಉಗ್ರರಿಗೆ' ಮತ್ತು ತಮ್ಮ ಸಿದ್ಧಾಂತವನ್ನು ನಿರ್ಭಯವಾಗಿ ಪ್ರಸಾರ ಮಾಡುವ ಸಾಮರ್ಥ್ಯ ಇರುವವರಿಗೆ ತರಬೇತಿ ನೀಡುತ್ತಿದೆ" ಎಂದು ವಿಡಿಯೋದ ಕೊನೆಯಲ್ಲಿ ಸಂದರ್ಶಕಿ ಹೇಳುತ್ತಾಳೆ!

      ವಿಡಿಯೊದಲ್ಲೇನಿದೆ?

      ವಿಡಿಯೊದಲ್ಲೇನಿದೆ?

      ಈ ವಿಡಿಯೋದಲ್ಲಿ ನಡುನಡುವೆ ಆರೆಸ್ಸೆಸ್ ಶಾಖೆಗಳು, ತರಬೇತಿ ಶಿಬಿರಗಳ ದೃಶ್ಯ, ಭಗವಾಧ್ವಜ, ಭಾರತ ಮಾತೆಯ ಚಿತ್ರಗಳು ಕಾಣಿಸುತ್ತವೆ. ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರರ ಮತ್ತು ಸಂಘದ ಮುಖಂಡರಾದ ಮಾಧವರಾವ್ ಗೋಳ್ವಲ್ಕರ್ ಅವರ ಚಿತ್ರಗಳನ್ನು ವಿಡಿಯೋ ಒಳಗೊಂಡಿದೆ. ಇತ್ತೀಚೆಗಷ್ಟೇ ಪಿಟಿಐ ಅಧ್ಯಕ್ಷ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಹ ನಾಝಿ ಸಿದ್ಧಾಂತವನ್ನು ಆರೆಸ್ಸೆಸ್ಸಿಗೆ ಹೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+