Trump Tariffs: ಭಾರತದ ವಿರುದ್ಧ ಭಾರಿ ಪ್ರಮಾಣದ ತೆರಿಗೆ ಹೇರಿದ ಡೊನಾಲ್ಡ್ ಟ್ರಂಪ್, ಭಾರತದ ನಡೆ ಏನು?
ಡೊನಾಲ್ಡ್ ಟ್ರಂಪ್ ಎಲ್ಲಾ ದೇಶಗಳ ಜೊತೆಗೆ ಕಿರಿಕ್ ಮಾಡಿಕೊಂಡು, ಒಂದಲ್ಲ ಒಂದು ರಗಳೆ ತೆಗೆಯುತ್ತಿದ್ದಾರೆ. ಅದರಲ್ಲೂ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಗೆಲ್ಲಲು ದೊಡ್ಡ ಸಹಾಯ ಮಾಡಿದ್ದ ಭಾರತ & ಭಾರತೀಯರ ಜೊತೆಗೂ ಕಿರಿಕ್ ಮಾಡಿರುವ ಟ್ರಂಪ್, ತೆರಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಹೀಗೆ ಡೊನಾಲ್ಡ್ ಟ್ರಂಪ್ ಈಗ ಭಾರತದ ವಿರುದ್ಧ ಭಾರಿ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡಿರುವುದಕ್ಕೆ ಭಾರತದ ರಿಯಾಕ್ಷನ್ ಏನು?
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆದ ನಂತರ ತಲ್ಲಣ ಎಬ್ಬಿಸಿದ್ದಾರೆ. ಈ ರೀತಿ ಭಾರಿ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡುವ ಮೂಲಕ ಕೆನಡಾ & ಮೆಕ್ಸಿಕೋ ಸೇರಿದಂತೆ ಚೀನಾ ವಿರುದ್ಧ ತಿಕ್ಕಾಟಕ್ಕೆ ನಿಂತಿದ್ದ ಡೊನಾಲ್ಡ್ ಟ್ರಂಪ್ ಇದೀಗ ಭಾರತದ ಜೊತೆಗೂ ಕಿರಿಕ್ ಮಾಡಿದ್ದಾರೆ. ಕೆನಡಾ & ಮೆಕ್ಸಿಕೋ ವಿರುದ್ಧ ಶೇಕಡಾ 25 ರಷ್ಟು ತೆರಿಗೆ ಹೇರಿಕೆ ಮಾಡಿದ ಟ್ರಂಪ್ ಚೀನಾ ವಿರುದ್ಧ ಕೂಡ ಭಾರಿ ಪ್ರಮಾಣದ ತೆರಿಗೆ ಹಾಕಲು ಮುಂದಾಗಿದ್ದರು. ಇದು ಸಾಲದು ಎನ್ನವಂತೆ ಭಾರತದ ವಿರುದ್ಧ ಕೂಡ ಅದೇ ರೀತಿ ತೆರಿಗೆ ಯುದ್ಧಕ್ಕೆ ಇದೀಗ ಸಜ್ಜಾಗಿದ್ದಾರೆ.

ಭಾರತದ ವಸ್ತುಗಳಿಗೆ ಭಾರಿ ತೆರಿಗೆ!
ಅಮೆರಿಕ & ಭಾರತ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತವೆ, ಎರಡೂ ದೇಶಗಳ ಮಧ್ಯೆ ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ. ಹೀಗಿದ್ದಾಗ ಭಾರತದಿಂದ ಬರುವ ವಸ್ತುಗಳಿಗೆ ಭಾರಿ ಪ್ರಮಾಣದ ತೆರಿಗೆ ಹಾಕುವ ಮೂಲಕ ಟ್ರಂಪ್ ಸಂಚಲನ ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ಮಧ್ಯೆ ಸಂಬಂಧ ಹಾಳಾಗುವ ಮುನ್ಸೂಚನೆ ಸಿಕ್ಕಿದ್ದು, ಈವರೆಗೂ ಭಾರತದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೆ ಭವಿಷ್ಯದಲ್ಲಿ ಈ ವಿಚಾರ ದೊಡ್ಡ ತಿರುವು ಪಡೆಯುವ ಲಕ್ಷಣ ಗೋಚರಿಸುತ್ತಿದೆ.
ಸೇಡಿಗೆ ಸೇಡು ತೀರಿಸಿಕೊಂಡ ಕೆನಡಾ!
ಅಂದಹಾಗೆ ಅಮೆರಿಕ ತಮ್ಮ ವಿರುದ್ಧ ತೆರಿಗೆ ಹೇರಿಕೆ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಕೆನಡಾ, ಭಾರಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಆ ಪ್ರಕಾರ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಜೊತೆ ಮಾಡಿಕೊಂಡಿದ್ದ 100 ಮಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದ ಮುರಿದು ಹಾಕಿ ಎಳ್ಳುನೀರು ಬಿಟ್ಟಿದ್ದು, ಮತ್ತೊಂದು ಕಡೆ ಅಮೆರಿಕಗೆ ಕೆನಡಾ ಸರಬರಾಜು ಮಾಡುತ್ತಿದ್ದ ವಿದ್ಯುತ್ ಕಡಿತಗೊಳಿಸಲು ನಿರ್ಧಾರ ಮಾಡಿದೆ. ಈ ಮೂಲಕ ಅವರಿಗೆ ಕೂಡ ನೋವು ಗೊತ್ತಾಗಲಿ ಎಂದು ಗುಡುಗಿದೆ ಕೆನಡಾ. ಇನ್ನೊಂದು ಕಡೆ ಕೆನಡಾ ಘೋಷಿಸಿರುವ ಈ ನಿರ್ಧಾರ ಭವಿಷ್ಯದಲ್ಲಿ ಅಮೆರಿಕದ ಪ್ರಜೆಗಳಿಗೆ ಸಮಸ್ಯೆ ಮಾಡುವ ಮುನ್ಸೂಚನೆ ನೀಡಿದೆ.












Click it and Unblock the Notifications