ಹಮಾಸ್ ಇಸ್ರೇಲ್ ಯುದ್ಧ: ಪರದೆಯ ಮೇಲೆ ಮಾತ್ರವಲ್ಲ ನಿಜಜೀವನದಲ್ಲೂ ಹೀರೋ ಆದ ನಟ!
ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ಅಟ್ಟಹಾಸ ಇನ್ನೂ ಕೊನೆಗೊಂಡಿಲ್ಲ. ದಾಳಿ ಪ್ರತಿದಾಳಿಯಲ್ಲಿ ಅಪಾರ ಸಾವು ನೋವು ಸಂಭವಿಸಿವೆ. ಈ ನಡುವೆ ನಟನೊಬ್ಬ ಹಮಾಸ್ ಉಗ್ರರ ವಿರುದ್ಧ ಹೋರಾಡಲು ಇಸ್ರೇಲ್ ಸೇನೆಯನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಸ್ವತ: ನಟನೇ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ಹೌದು.... ಹಮಾಸ್ ವಿರುದ್ಧ ಪರದೆಯ ಮೇಲೆ ಯುದ್ಧ ಮಾಡಿದ ನಟ ನಿಜವಾಗಿಯೂ ಯುದ್ಧಭೂಮಿಗಿಳಿದಿದ್ದಾರೆ. "ಫೌಡಾ" ವೆಬ್ ಸರಣಿಯ ಸ್ಟಾರ್ ನಟ ಇಡಾನ್ ಅಮೆಡಿ ಅವರು ಹಮಾಸ್ ಭಯೋತ್ಪಾದಕರನ್ನು ಮಟ್ಟ ಹಾಕಲು ಇಸ್ರೇಲ್ ಸೇನೆಯೊಂದಿಗೆ ಕೈ ಜೋಡಿಸಿದ್ದಾರೆ.

ಅವರು ಪರದೆಯನ್ನು ತೊರೆದು ನಿಜವಾಗಿ ಇಸ್ರೇಲ್ ಸೇನೆಯೊಂದಿಗೆ ಯುದ್ಧಕ್ಕೆ ಸೇರಿಕೊಂಡಿದ್ದಾರೆ. ಇಡಾನ್ ಅಮೆಡಿ ಅವರು ಒಬ್ಬ ನಟ ಮಾತ್ರವಲ್ಲದೆ ಗಾಯಕ ಮತ್ತು ಗೀತರಚನೆಕಾರನೂ ಆಗಿದ್ದಾರೆ. ಆದರೆ ದೇಶದ ಅಗತ್ಯತೆಗೆ ಅನುಗುಣವಾಗಿ ಅವರು ಸಮವಸ್ತ್ರವನ್ನು ಸಹ ಧರಿಸಿದ್ದಾರೆ.
ಈ ಹಿಂದೆ ಈ ಜನಪ್ರಿಯ ಧಾರಾವಾಹಿಯ ನಿರ್ಮಾಪಕ ಮತ್ತು ನಾಯಕ ನಟ ಲಿಯೋರ್ ರಾಜ್ ಕೂಡ ಅದೇ ಹಾದಿಯನ್ನು ಅನುಸರಿಸಿದರು. ಮೊಸ್ಸಾದ್ ಏಜೆಂಟ್‌ಗಳ ಕುರಿತು ನಿರ್ಮಿಸಲಾದ ''ಫೌಡಾ" ಈ ಸರಣಿಯು ಗಾಜಾ ಸಮಸ್ಯೆ, ಗಡಿ ಘರ್ಷಣೆಗಳು, ಭಯೋತ್ಪಾದಕ ದಾಳಿಯಂತಹ ಘಟನೆಗಳನ್ನು ತೋರಿಸುತ್ತದೆ.
ಇದರಲ್ಲಿ ಲಿಯೋರ್ ದೇಶಕ್ಕಾಗಿ ಸಾವಿನೊಂದಿಗೆ ಹೋರಾಡುವುದನ್ನು ನೋಡುತ್ತಾರೆ. ಆದರೀಗ ನಿಜವಾಗಿಯೂ ಇಸ್ರೇಲ್ ಸೇನೆಯೊಂದಿಗೆ ಕೈ ಜೋಡಿಸುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಇತ್ತೀಚಿನ ಸಂಘರ್ಷದಲ್ಲಿ ಅವರು ಇಸ್ರೇಲಿ ನಗರವಾದ ಸ್ಡೆರೋಟ್ಗೆ ಹೋದರು ಮತ್ತು ಹಮಾಸ್ನಿಂದ ಅನೇಕ ಕುಟುಂಬಗಳನ್ನು ಉಳಿಸಿದರು.
ಲಿಯೋರ್ ಅವರ ಸಹನಟ ಇಡಾನ್ ಕೂಡ ಹಾಗೆಯೇ ಮಾಡಿದರು. ಇವರು ಇಸ್ರೇಲ್ ರಕ್ಷಣಾ ಪಡೆಗಳಿಗೆ ಸೇರಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ವಿಡಿಯೋದಲ್ಲಿ ಅವರು ಹಮಾಸ್ ವಿರುದ್ಧ ಹೋರಾಡಲು ರಕ್ಷಣಾ ಪಡೆಗಳನ್ನು ಸೇರುವ ನಿರ್ಧಾರದ ಬಗ್ಗೆ ಮಾತನಾಡಿದರು.
ಅವರ ಮಾತಿನಲ್ಲಿ, "ನೀವು ನೋಡಬಹುದು, ನಾನು ಇಂದು ಸ್ವಲ್ಪ ವಿಭಿನ್ನವಾದ ಬಟ್ಟೆಯನ್ನು ಧರಿಸಿದ್ದೇನೆ. ಇದು ಫೌಡಾದ ದೃಶ್ಯವಲ್ಲ, ಇದು ನಿಜ ಜೀವನ... ಇಸ್ರೇಲ್‌ನ ದಕ್ಷಿಣದಲ್ಲಿ ಘಟನೆ ನಡೆದ ತಕ್ಷಣ ನಾನು ಸೈನ್ಯವನ್ನು ಸೇರಿಕೊಂಡೆ... ಶೀಘ್ರದಲ್ಲೇ ನಾವು ಶಾಂತ ದಿನಗಳನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ'' ಎಂದು ಅವರು ಹೇಳಿದ್ದಾರೆ.












Click it and Unblock the Notifications