Israel VS Lebanon: ಲೆಬನಾನ್ ನೆಲದಿಂದ ಇಸ್ರೇಲ್ ಸೇನೆ ವಾಪಸ್, ಶಾಂತಿ ಮಾತುಕತೆ ಯಶಸ್ವಿ
ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಹಲವು ದೇಶಗಳ ನಡುವೆ ಯುದ್ಧ ಆರಂಭವಾಗಿ, ಸಖತ್ ಟೆನ್ಷನ್ ಶುರುವಾಗಿತ್ತು. ಈ ಬಡಿದಾಟ ನೋಡಿ 3ನೇ ಮಹಾಯುದ್ಧ ಇಲ್ಲಿಂದ ಶುರುವಾಗುತ್ತಾ? ಎಂಬ ಅನುಮಾನ ಕೂಡ ಮೂಡಿತ್ತು. ಮೊದಲಿಗೆ ಇಸ್ರೇಲ್ & ಗಾಜಾ ಪಟ್ಟಿ ನಡುವೆ ಭಾರಿ ದೊಡ್ಡ ಕದನ ಆರಂಭವಾಗಿ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರುವ ಮುನ್ಸೂಚನೆಯೂ ಸಿಕ್ಕಿತ್ತು. ಇದಾದ ನಂತರ ಲೆಬನಾನ್ ಜೊತೆಗೂ ಕಿರಿಕ್ ಶುರುವಾಗಿತ್ತು, ಆದರೆ ಈಗ ಇಸ್ರೇಲ್ ಒಂದೊಂದೇ ಕಿರಿಕ್ ಸರಿ ಮಾಡಿಕೊಂಡು ಬರುತ್ತಿದೆ.
ಗಾಜಾ ಪಟ್ಟಿ ಮೇಲೆ ಯುದ್ಧ ಸಾರಿದ ನಂತರ ಹಲವು ರೀತಿಯಲ್ಲಿ ಸಮಸ್ಯೆ ಎದುರಿಸಿರುವ ಇಸ್ರೇಲ್ ಮಿಲಿಟರಿ, ಕೆಲವು ದಿನಗಳ ಹಿಂದಷ್ಟೇ ಗಾಜಾ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಗಾಜಾ ಪಟ್ಟಿ ಶಾಂತವಾಗಿತ್ತು. ಅದೇ ರೀತಿ ಇದೀಗ ಲೆಬನಾನ್ ನೆಲದಿಂದ ಕೂಡ, ಇಸ್ರೇಲ್ ತನ್ನ ಸೇನೆಯನ್ನ ವಾಪಸ್ ಕರೆದುಕೊಂಡು ಬರುತ್ತಿದೆ. ಹೀಗಾಗಿ ದಕ್ಷಿಣ ಲೆಬನಾನ್ ಭಾಗದಲ್ಲಿ ಎಲ್ಲವನ್ನೂ ಬಿಟ್ಟು ಓಡಿ ಹೋಗಿದ್ದ ಪ್ರಜೆಗಳು ಮತ್ತೆ ಮರಳಿ ತಮ್ಮ ತಮ್ಮ ಮನೆಗೆ ಬರುತ್ತಿದ್ದಾರೆ.

ಲೆಬನಾನ್ ಈಗ ಕೂಲ್.. ಕೂಲ್..
ಇಸ್ರೇಲ್ ಹೊಸ ಹುರುಪು ತುಂಬಿಕೊಂಡು ಇದೀಗ ಮುಂದೆ ನುಗ್ಗುತ್ತಿದೆ. ಅಮೆರಿಕಗೆ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎಂಟ್ರಿ ಕೊಟ್ಟ ತಕ್ಷಣವೇ ಹೊಸ ಹುಮ್ಮಸ್ಸು ಮೂಡಿದೆ. ಈ ಎಲ್ಲಾ ಬೆಳವಣಿಗೆ ಗಮನಿಸಿದರೆ, ಮಧ್ಯಪ್ರಾಚ್ಯ ಇನ್ನಷ್ಟು ಸೈಲೆಂಟ್ ಆಗುವ ಲಕ್ಷಣ ಕೂಡ ಕಾಣುತ್ತಿದೆ. ಲೆಬನಾನ್ ನೆಲದಲ್ಲಿ ಇಸ್ರೇಲ್ ಸೇನೆ ಹಾಗೂ ಸ್ಥಳೀಯ ಸಂಘಟನೆಗಳ ನಡುವೆ ಘೋರ ಕಾಳಗ ನಡೆದಿತ್ತು. ಇದೀಗ ಹಿಂಸಾಚಾರಕ್ಕೆ ಬ್ರೇಕ್ ಬಿದ್ದಿದ್ದು, ಎಲ್ಲಾ ತಣ್ಣಗಾಗಿದೆ.
ಉಕ್ರೇನ್ ಯುದ್ಧಕ್ಕೂ ಬೀಳುತ್ತಾ ಬ್ರೇಕ್?
ಮಧ್ಯಪ್ರಾಚ್ಯ ಮಾತ್ರವಲ್ಲ ರಷ್ಯಾ & ಉಕ್ರೇನ್ ಯುದ್ಧಕ್ಕೂ ಬ್ರೇಕ್ ಹಾಕಲು ಟ್ರಂಪ್ ಪಡೆಯು ಪ್ಲಾನ್ ಮಾಡಿದೆ. ಹೀಗಾಗಿ ಯುರೋಪ್ ದೇಶಗಳಿಗೂ ಒಂದಷ್ಟು ನೆಮ್ಮದಿ ಸಿಗುವಂತಾಗಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ಇನ್ನು 5 ದಿನಗಳಿಗೆ 3 ವರ್ಷ ತುಂಬಲಿದೆ. ಹೀಗಾಗಿ ಯುದ್ಧ ನಿಲ್ಲಿಸಬೇಕು ಎನ್ನುವ ಪ್ರಯತ್ನಗಳೂ ಆರಂಭವಾಗಿವೆ. ಜಾಗತಿಕ ಮಟ್ಟದಲ್ಲಿ ಇದೇ ಯುದ್ಧ ದೊಡ್ಡ ತಲೆನೋವು ತಂದಿದೆ.
ಇಂತಹ ಸಮಯದಲ್ಲಿ ಟ್ರಂಪ್ ಯುದ್ಧ ನಿಲ್ಲಿಸಿ ಅದರ ಕ್ರೆಡಿಟ್ ಪಡೆಯಲು ಕಾಯುತ್ತಿದ್ದಾರೆ. ತಾವು ಅಧಿಕಾರಕ್ಕೆ ಬಂದ 24 ಗಂಟೆ ಒಳಗಾಗಿ ಯುದ್ಧ ನಿಲ್ಲಿಸುತ್ತೇವೆ ಎಂದು ಹೇಳಿದ್ದರು. ಆದರೆ ಅದು ಸಾಧ್ಯವಾಗಿಲ್ಲ, ಹೀಗಾಗಿ ಟ್ರಂಪ್ ತಮ್ಮ ಎಲ್ಲಾ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಟ್ರಂಪ್ ಅವರು ಪಕ್ಕಾ ಪ್ಲಾನ್ ಮಾಡಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಮುಂದಾಗಿದ್ದಾರೆ.












Click it and Unblock the Notifications