Get Updates
Get notified of breaking news, exclusive insights, and must-see stories!

ಲೈಂಗಿಕತೆ, ಮಾದಕದ್ರವ್ಯ, ಸಲಿಂಗಕಾಮ : ಬೆಚ್ಚಿಬೀಳಿಸುವ ಇಮ್ರಾನ್ ಖಾನ್ ಕಥೆ!

ನವದೆಹಲಿ, ಜುಲೈ 13: ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಅವರ ವೈಯಕ್ತಿಕ ರಹಸ್ಯಗಳನ್ನು ಅವರ ಮಾಜಿ ಪತ್ನಿ ರೆಹಾಮ್ ಖಾನ್ ಬಹಿರಂಗಪಡಿಸಿದ್ದು, ತೀವ್ರ ಸಂಚಲನ ಸೃಷ್ಟಿಸಿದೆ.

ಅಕ್ರಮ ಸಂಬಂಧದ ಮೂಲಕ ಇಮ್ರಾನ್ ಖಾನ್ ಐದು ಮಕ್ಕಳನ್ನು ಹೊಂದಿದ್ದಾರೆ. ಅವರಲ್ಲಿ ಕೆಲವರು ಭಾರತೀಯರು ಎಂಬ ವಿವರವನ್ನು ರೆಹಾಮ್ ಖಾನ್ ಬರೆದ ಆತ್ಮಕಥನದಲ್ಲಿ ನೀಡಲಾಗಿದೆ.

ಪ್ರಧಾನಿ ಸ್ಥಾನದ ಮಾಜಿ ಅಭ್ಯರ್ಥಿಯಾಗಿರುವ ಇಮ್ರಾನ್ ಖಾನ್, ಪತ್ನಿಗೆ ಹೊಡೆಯುವ ಹಾಗೂ ಲಂಪಟ ಮಾತ್ರವಲ್ಲ, ಅವರೊಬ್ಬ ಮಾದಕ ದ್ರವ್ಯ ವ್ಯಸನಿ ಹಾಗೂ ವಿವಾಹಿತ ಪುರುಷನೊಬ್ಬನ ಜತೆ ಸಲಿಂಗ ಕಾಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದಾರೆ.

ವಾಸಿಂ ಅಕ್ರಂ ಕುರಿತೂ ಉಲ್ಲೇಖ

ವಾಸಿಂ ಅಕ್ರಂ ಕುರಿತೂ ಉಲ್ಲೇಖ

'ರೆಹಾಮ್ ಖಾನ್' ಎಂಬ ಶೀರ್ಷಿಕೆಯುಳ್ಳ ಈ ಪುಸ್ತಕದಲ್ಲಿ ಇಮ್ರಾನ್ ಖಾನ್ ಅವರ ಖಾಸಗಿ ಮಾಹಿತಿಯನ್ನು ಮಾತ್ರವಲ್ಲದೆ, ಪಾಕಿಸ್ತಾನದ ರಾಜಕಾರಣದ ಕರಾಳಮುಖ, ತನ್ನ ಮೊದಲ ಪತಿ ಇಜಾಜ್ ರೆಹಮಾನ್ ಸೇರಿದಂತೆ ಅನೇಕರಿಂದ ಎದುರಾದ ಜೀವ ಬೆದರಿಕೆ ಹಾಗೂ ಕಾನೂನು ಕ್ರಮಗಳ ಕುರಿತು ವಿವರಿಸಿದ್ದರೆ.

ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ತನ್ನ ಪತ್ನಿ ಬೇರೊಬ್ಬ ವ್ಯಕ್ತಿ ಜತೆ ಲೈಂಗಿಕ ಕ್ರಿಯೆ ನಡೆಸುವುದನ್ನು ವೀಕ್ಷಿಸಲು ಇಷ್ಟಪಡುತ್ತಿದ್ದರು ಎಂದೂ ಹೇಳಿದ್ದಾರೆ.

ಮಾದಕ ದ್ರವ್ಯ ವ್ಯಸನಿ

ಮಾದಕ ದ್ರವ್ಯ ವ್ಯಸನಿ

ಕೊಕೇನ್, ಹೆರಾಯಿನ್, ಕ್ಸನಾಕ್ಸ್, ಲೆಕ್ಸೊಟಾನಿಲ್ ಮತ್ತು 'ಡೇಟ್ ರೇಪ್' ಎಂದೇ ಕುಖ್ಯಾತಿ ಪಡೆದಿರುವ ರೊಹಿಪ್ನೊಲ್ ಸೇರಿದಂತೆ ಎಲ್ಲ ಬಗೆಯ ಮಾದಕವಸ್ತುಗಳನ್ನೂ ಇಮ್ರಾನ್ ಸೇವಿಸಿದ್ದಾರೆ.

ಅದರ ಪರಿಣಾಮವಾಗಿ ತಮ್ಮ ಹಲ್ಲುಗಳನ್ನು ಕಚ್ಚಿಕೊಳ್ಳಲು ಸಾಧ್ಯವಾಗದಂತೆ ಮೌತ್ ಗಾರ್ಡ್‌ಅನ್ನು ಹಾಕಿಕೊಳ್ಳುತ್ತಿದ್ದರು ಎಂದು ಬರೆದಿದ್ದಾರೆ.

ಇಮ್ರಾನ್ ರಾಜಕೀಯ ಗುರಿಗೆ ಅಡ್ಡಿ

ಇಮ್ರಾನ್ ರಾಜಕೀಯ ಗುರಿಗೆ ಅಡ್ಡಿ

ಈ ಕೃತಿಯನ್ನು ಬಿಬಿಸಿಯ ಮಾಜಿ ಪತ್ರಕರ್ತರೊಬ್ಬರು ಈ ಪುಸ್ತಕವನ್ನು ನಿರೂಪಣೆ ಮಾಡಿದ್ದು, ಅದರಲ್ಲಿ 'ಇದು ಸಂಪೂರ್ಣ ನನ್ನ ಬದುಕಿನ ಕುರಿತು... ನನ್ನ ಸಂಕಷ್ಟಗಳು ಮತ್ತು ಅವುಗಳಿಂದ ನಾನು ಹೇಗೆ ಹೊರಬಂದೆ ಎಂಬುದರ ಕುರಿತಾಗಿದೆ' ಎಂದು ರೆಹಾಮ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವನೆ ಜುಲೈ 25ರಂದು ನಡೆಯಲಿದ್ದು, ಅದಕ್ಕೆ ಕೆಲವೇ ವಾರಗಳ ಮೊದಲು ಈ ಪುಸ್ತಕ ಬಿಡುಗಡೆಯಾಗಿರುವುದು ಇಮ್ರಾನ್ ಖಾನ್ ಅವರ ರಾಜಕೀಯ ಬದುಕಿಗೆ ತೊಂದರೆ ಉಂಟುಮಾಡುವ ಗುರಿಯೊಂದಿಗೇ ರೆಹಾಮ್ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ಅಕ್ರಮ ಸಂಬಂಧದಲ್ಲಿ ಐದು ಮಕ್ಕಳು

ಅಕ್ರಮ ಸಂಬಂಧದಲ್ಲಿ ಐದು ಮಕ್ಕಳು

2015ರ ಜನವರಿಯಲ್ಲಿ ಮದುವೆಯಾದಾಗ ಅಮೆರಿಕದ ಸಿಟಾ ವೈಟ್ ಎಂಬುವವರಿಂದ ಅಕ್ರಮ ಸಂಬಂಧದಲ್ಲಿ ಟಿರೈನ್ ವೈಟ್ ಎಂಬ ಮಗಳು ಇರುವುದಾಗಿ ಇಮ್ರಾನ್ ತಿಳಿಸಿದ್ದರು.

ಅವರ ಸಂಭಾಷಣೆಯನ್ನು ಪುಸ್ತಕದಲ್ಲಿ ಈ ರೀತಿ ನೀಡಲಾಗಿದೆ.

'ಆದರೆ ನಿನಗೆ ಗೊತ್ತೇ, ನನಗೆ ಇರುವುದು ಅವಳು ಮಾತ್ರವಲ್ಲ. ನನಗೆ ಗೊತ್ತಿರುವಂತೆ ಒಟ್ಟು ಐದು ಮಂದಿ ಇದ್ದಾರೆ'

'ಏನು ಐದು?!' ನಾನು ಉಸುರಿದೆ.

'ಮಕ್ಕಳು' ಎಂದು ಅವರು ನಕ್ಕರು.

'ಏನು? ನಿಮಗೆ ಐವರು ಅಕ್ರಮ ಸಂಬಂಧದ ಮಕ್ಕಳಿದ್ದಾರೆಯೇ! ನಿಮಗೆ ಹೇಗೆ ಗೊತ್ತು?' ಎಂದು ಕೇಳಿದೆ.

'ಅವರ ಅಮ್ಮಂದಿರು ನನಗೆ ಹೇಳಿದ್ದರು' ಎಂದು ಉತ್ತರಿಸಿದರು.

ರಹಸ್ಯ ಕಾಪಾಡಿಕೊಂಡಿರುವ ತಾಯಂದಿರು

ರಹಸ್ಯ ಕಾಪಾಡಿಕೊಂಡಿರುವ ತಾಯಂದಿರು

'ಎಲ್ಲರೂ ಬಿಳಿಯರೇ?' ಕೇಳಿದೆ.

'ಇಲ್ಲ, ಕೆಲವರು ಭಾರತೀಯರು. ಹಿರಿಯವನಿಗೆ ಈಗ 34 ವರ್ಷ'.

'ಇದು ಹೇಗೆ ಇಮ್ರಾನ್? ಆ ತಾಯಿ ಇದನ್ನೆಲ್ಲ ಏಕೆ ಹೇಳಲಿಲ್ಲ?'

'ಏಕೆಂದರೆ ಆಕೆ ಸಂಭ್ರಮದಲ್ಲಿ ತೇಲಾಡುತ್ತಿದ್ದಳು! ಆಕೆ ಚಿಕ್ಕಂದಿನಲ್ಲಿ ಮದುವೆಯಾಗಿದ್ದಳು ಮತ್ತು ಬಸುರಿಯಾಗಿರಲಿಲ್ಲ. ನನ್ನಿಂದ ಆಕೆ ಅತಿಯಾದ ಸಂತಸಪಟ್ಟಿದ್ದಳು. ಇದನ್ನು ರಹಸ್ಯವಾಗಿ ಇರಿಸುವಂತೆ ಬೇಡಿಕೊಂಡಿದ್ದಳು. ಅದಕ್ಕೆ ನಾನು ಸಮ್ಮತಿ ಸೂಚಿಸಿದ್ದೆ'.

'ಮತ್ತೆ ಉಳಿದವರು? ಅವರು ಯಾಕೆ ಯಾರೂ ಮಾತನಾಡಲಿಲ್ಲ?' ನಾನು ಅವರತ್ತ ಸಿಟ್ಟಿನಿಂದ ಕೇಳಿದೆ. ನನ್ನ ತಲೆಯಲ್ಲಿ ಇನ್ನೂ ಅನೇಕ ಪ್ರಶ್ನೆಗಳಿದ್ದವು.

'ಅವರೆಲ್ಲರೂ ವಿವಾಹಿತರು. ತಮ್ಮ ಮದುವೆ ಸಂಬಂಧ ಹಾಳಾಗುವುದನ್ನು ಅವರು ಬಯಸಿಲ್ಲ' ಎಂದು ಅವರು ಹೇಳಿದರು.

'ಇದು ಬೇರೆ ಯಾರಿಗಾದರೂ ತಿಳಿದಿದೆಯೇ?'

'ಜೆಮಿಮಾಗೆ (ಇಮ್ರಾನ್ ಮಾಜಿ ಪತ್ನಿ) ಮಾತ್ರ ಗೊತ್ತು. ನಾನು ಆಕೆಗೆ ಹೇಳಿದ್ದೆ' ಎಂದರು.

ಪತ್ರಕರ್ತೆಯೊಂದಿಗೆ ವಿವಾಹ

ಪತ್ರಕರ್ತೆಯೊಂದಿಗೆ ವಿವಾಹ

ಬ್ರಿಟನ್‌ನಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದ ಜೇಮ್ಸ್ ಗೋಲ್ಡ್‌ಸ್ಮಿತ್ ಮಗಳಾದ ಜೆಮಿಮಾ, 1995ರಲ್ಲಿ ಇಮ್ರಾನ್ ಖಾನ್ ಅವರನ್ನು ಮದುವೆಯಾಗಿದ್ದರು. ಜೆಮಿನಾ ಮೂಲತಃ ಪತ್ರಕರ್ತೆ.

ಒಂಬತ್ತು ವರ್ಷದ ಬಳಿಕ ಇಮ್ರಾನ್‌ ಖಾನ್‌ಗೆ ವಿಚ್ಛೇದನ ನೀಡಿ ಪಾಕಿಸ್ತಾನದಿಂದ ಲಂಡನ್‌ಗೆ ಮರಳಿದ್ದರು.

ಹತ್ತೇ ತಿಂಗಳಿನಲ್ಲಿ ದೂರ

ಹತ್ತೇ ತಿಂಗಳಿನಲ್ಲಿ ದೂರ

2015ರ ಅಕ್ಟೋಬರ್‌ನಲ್ಲಿ ಇಮ್ರಾನ್ ಖಾನ್ ಅವರನ್ನು ವರಿಸಿದ್ದ ರೆಹಾಮ್, ಹತ್ತು ತಿಂಗಳಿನಲ್ಲಿಯೇ ಅವರಿಂದ ಬೇರ್ಪಟ್ಟಿದ್ದರು.

ಇಮ್ರಾನ್ ಖಾನ್ ಪಾಕಿಸ್ತಾನದ ಸಂವಿಧಾನದ ನಿಯಮಗಳಿಗೆ ಬದ್ಧರಾಗಿಲ್ಲ. ಸುಪ್ರೀಂಕೋರ್ಟ್ ಅವರ ವಿರುದ್ಧ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಬೇಕು ಎಂದು ರೆಹಾಮ್ ಕಳೆದ ತಿಂಗಳು ಒತ್ತಾಯಿಸಿದ್ದರು.

ತಮ್ಮ ಅನುಭವಗಳು ಯಾರಿಗಾದರೂ ಸಹಾಯ ಮಾಡಬಹುದು ಎಂಬ ಉದ್ದೇಶದಿಂದ ಪುಸ್ತಕ ಬರೆದಿರುವುದಾಗಿ ಅವರು ಹೇಳಿದ್ದಾರೆ.

'ನಾನು ನನ್ನ ತಪ್ಪುಗಳನ್ನು ಹಂಚಿಕೊಂಡಿದ್ದೇನೆ. ನಾನು ಮದುವೆಯಾದ ವ್ಯಕ್ತಿಯನ್ನು ಏಕೆ ಮದುವೆಯಾದೆ? ಇದು ಯುವತಿಯರು ತಿಳಿದಿರಬೇಕಾದ ವಿಚಾರ.

ನಾವು ಮಾನವರಾಗಿ ಎಲ್ಲಿ ತಪ್ಪುಹಾದಿ ಹಿಡಿಯುತ್ತೇವೆ ಎಂದು ಹಾಗೂ ನಮ್ಮ ತಿಳಿವಳಿಕೆಯನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎನ್ನುವುದು ನನ್ನ ಉದ್ದೇಶ. ಅವರು ಮತ ಚಲಾಯಿಸಲು ಹೋಗುವಾಗ ಇದು ಬಹಳ ನೆರವಾಗಲಿದೆ' ಎಂದು ರೆಹಾಮ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+