ಹರಿಕೇನ್ ಅಟ್ಟಹಾಸಕ್ಕೆ ಸೋತು ಹೋದ ಅಮೆರಿಕದ ಕರಾವಳಿ ರಾಜ್ಯ...
ಅಮೆರಿಕದ ಕರಾವಳಿ ರಾಜ್ಯ ಎಂದೇ ಕರೆಯಲಾಗುವ ಫ್ಲೊರಿಡಾ ಇದೀಗ ಬೆಚ್ಚಿಬಿದ್ದಿದೆ. ಈ ರೀತಿ ಫ್ಲೊರಿಡಾ ರಾಜ್ಯದಲ್ಲಿ ತೀವ್ರ ಆತಂಕ ಮನೆಮಾಡಲು ಕಾರಣವಾಗಿದ್ದು 'ಮಿಲ್ಟನ್' ಮಹಾ ಚಂಡಮಾರುತ. 100 ಕಿಲೋ ಮೀಟರ್‌ಗೂ ಹೆಚ್ಚು ವೇಗದಲ್ಲಿ ಬಂದು ಫ್ಲೊರಿಡಾ ರಾಜ್ಯದ ಕರಾವಳಿಗೆ ಅಪ್ಪಳಿಸಿದ 'ಮಿಲ್ಟನ್' ಮಹಾ ಚಂಡಮಾರುತ, ಎಲ್ಲೆಲ್ಲೂ ಅನಾಹುತ ಸೃಷ್ಟಿ ಮಾಡಿದೆ. ಅದ್ರಲ್ಲೂ ಹರಿಕೇನ್ ಅಟ್ಟಹಾಸಕ್ಕೆ ಸೋತು ಹೋದ ಅಮೆರಿಕದ ಕರಾವಳಿ ರಾಜ್ಯ ಫ್ಲೊರಿಡಾ ರಾಜ್ಯದಲ್ಲಿ ಇದೀಗ ಎಲ್ಲೆಲ್ಲೂ ಬರೀ ನೀರೇ ಕಾಣುತ್ತಿದೆ.
ನೀರು.. ನೀರು.. ನೀರು.. ಎಲ್ಲಿ ನೋಡಿದರೂ ಬರೀ ನೀರೇ ನೀರು.. ಅಂದಹಾಗೆ ಇದು ಅಮೆರಿಕದ ಫ್ಲೊರಿಡಾ ರಾಜ್ಯದ ಪರಿಸ್ಥಿತಿ. ಯಾಕಂದ್ರೆ ಫ್ಲೊರಿಡಾ ರಾಜ್ಯದಲ್ಲಿ ಚಂಡಮಾರುತ ಆರ್ಭಟಿಸಿದ ಕಾರಣಕ್ಕೆ ದೊಡ್ಡ ಅನಾಹುತ ಸೃಷ್ಟಿಯಾಗಿ ಹೋಗಿದೆ. ಲಕ್ಷಾಂತರ ಜನ ಈಗ ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡು ಪರದಾಡುತ್ತಿದ್ದರೆ, ಇನ್ನೊಂದು ಕಡೆ 'ಮಿಲ್ಟನ್' ಮಹಾ ಚಂಡಮಾರುತದ ಅಬ್ಬರದ ಕಾರಣಕ್ಕೆ ಭಾರಿ ಭರ್ಜರಿ ಮಳೆ ಬಿದ್ದಿದೆ. ಹೀಗಾಗಿ ಅಲ್ಲಿ ಅಂದ್ರೆ ಫ್ಲೊರಿಡಾ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದೆ. ಭೀಕರ ಪ್ರವಾಹ ಹಿನ್ನೆಲೆ ಲಕ್ಷಾಂತರ ಮನೆಗಳಿಗೆ ಇದೀಗ ನೀರು ನುಗ್ಗಿದೆ.

ಜೀವ ಉಳಿಸಿಕೊಳ್ಳಲು 10 ಲಕ್ಷ ಜನ...
'ಮಿಲ್ಟನ್' ಮಹಾ ಚಂಡಮಾರುತ ಇದೇ ರೀತಿಯಾಗಿ ಅಬ್ಬರಿಸುವ ಮುನ್ಸೂಚನೆ ಮೊದಲೇ ನೀಡಲಾಗಿತ್ತು. ಹೀಗಾಗಿಯೇ ಅಮೆರಿಕದ ಸರ್ಕಾರ & ಫ್ಲೊರಿಡಾ ಆಡಳಿತ ಮುನ್ಸೂಚನೆಯ ನೀಡಿತ್ತು. ಇದರ ಜೊತೆಗೆ 'ಮಿಲ್ಟನ್' ಚಂಡಮಾರುತ ಮೊದಲಿಗೆ ಬಂದು ಭೂಮಿಗೆ ತನ್ನ ಎಂಟ್ರಿ ಕೊಡುವ ಜಾಗದಿಂದ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ ಈಗ ಲಕ್ಷ, ಲಕ್ಷ ಜನರ ಜೀವ ಉಳಿಸಲಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಜನರನ್ನು ಚಂಡಮಾರುತ ಅಪ್ಪಳಿಸುವ ಮೊದಲು ಸ್ಥಳಾಂತರ ಮಾಡಲಾಗಿತ್ತು.
12 ಜನರು ಚಂಡಮಾರುತಕ್ಕೆ ಬಲಿ
ಈಗ 'ಮಿಲ್ಟನ್' ಚಂಡಮಾರುತದ ಅಬ್ಬರದ ಕಾರಣಕ್ಕೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದೆ. 'ಮಿಲ್ಟನ್' ಮಹಾ ಚಂಡಮಾರುತ ಫ್ಲೊರಿಡಾ ರಾಜ್ಯಕ್ಕೆ ಅಪ್ಪಳಿಸುವ ಬಗ್ಗೆ ಅಮೆರಿಕದಲ್ಲಿ ಭಾರಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಅಮೆರಿಕದ ಸರ್ಕಾರ ಹಾಗೂ ಫ್ಲೊರಿಡಾ ರಾಜ್ಯದ ಆಡಳಿತ ಕ್ರಮ ಕೈಗೊಂಡಿದ್ದರೂ ಈವರೆಗೂ ಸುಮಾರು 12 ಜನರನ್ನು ಬಲಿ ಪಡೆದಿದೆ ಈ 'ಮಿಲ್ಟನ್' ಮಹಾ ಚಂಡಮಾರುತ.
ಮತ್ತೊಂದ್ಕಡೆ ಅತ್ಯಂತ ಸೂಕ್ಷ್ಮ ಪ್ರದೇಶದಿಂದ ಜಾಗ ಖಾಲಿ ಮಾಡಿ ಎಂದು ಜನರು ಹಾಗೂ ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ, ಫ್ಲೊರಿಡಾದ ಕರಾವಳಿ ಭಾಗದ ಜನ ಹಾಗೂ ಫ್ಲೊರಿಡಾ ರಾಜ್ಯದ ಮಧ್ಯ ಭಾಗದಲ್ಲಿ ಜೀವನ ಕಟ್ಟಿಕೊಂಡಿದ್ದ ಜನರು ಎದ್ದು ಬಿದ್ದು ಮನೆ ಖಾಲಿ ಮಾಡಿಕೊಂಡು ಓಡಿದ್ದರು. ಈಗ ಅವರೆಲ್ಲಾ ವಾಪಸ್ ಬಂದು ನೋಡಿದರೆ 'ಮಿಲ್ಟನ್' ಸೈಕ್ಲೋನ್ ಅಬ್ಬರಕ್ಕೆ ಅವರ ಮನೆಗಳೆಲ್ಲಾ ಛಿದ್ರ ಛಿದ್ರವಾಗಿ ಹೋಗಿವೆ. ಮತ್ತೆ ಬಹುತೇಕರ ಮನೆಗಳು ನೀರಿನಿಂದ ತುಂಬಿ ಹೋಗಿವೆ.












Click it and Unblock the Notifications