Pakistan Paramilitary: ಪಾಕಿಸ್ತಾನ ಸೇನಾ ಕೇಂದ್ರಕ್ಕೆ ನುಗ್ಗಿದ ಆಗಂತುಕ, ಮುಂದೆ ಆಗಿದ್ದೆಲ್ಲಾ ಅನಾಹುತ!
ಪಾಕಿಸ್ತಾನ ಮತ್ತೊಮ್ಮೆ ಭೀಕರ ದಾಳಿಗೆ ನಲುಗಿದೆ, ಪದೇ ಪದೇ ಉಗ್ರರನ್ನು ಪೋಷಣೆ ಮಾಡುವ ಈ ದೇಶಕ್ಕೆ ಅದೇ ಉಗ್ರರಿಂದ ಮತ್ತೆ ಮತ್ತೆ ಆಪತ್ತು ಎದುರಾಗುತ್ತಿದೆ. ಇಂದು ದಿಢೀರ್ ಪಾಕಿಸ್ತಾನದ ಪ್ಯಾರಾ ಮಿಲಿಟರಿ ಅಂದ್ರೆ ಅರೆಸೇನಾ ಪಡೆಯ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಈ ದಾಳಿ ಪರಿಣಾಮ 3 ಸಾವು ಸಂಭವಿಸಿದೆ ಎಂದು ಸದ್ಯಕ್ಕೆ ಮಾಹಿತಿ ಸಿಗುತ್ತಿದೆ. ಮತ್ತೊಂದು ಕಡೆ 2 ಉಗ್ರರ ಹೆಣ ಬೀಳಿಸಿದ್ದೀವಿ ಎಂದು ಪಾಕಿಸ್ತಾನ ಸೇನೆ ಮಾಹಿತಿ ನೀಡಿದೆ. ಇತ್ತೀಚಿಗಷ್ಟೇ ಇದೇ ಪಾಕಿಸ್ತಾನದ ಪ್ರಮುಖ ನಗರ ಇಸ್ಲಾಮಾಬಾದ್ ನೆಲದಲ್ಲಿ, ಕೋರ್ಟ್ ಬಳಿಯೇ ಭೀಕರ ಸ್ಫೋಟ ಸಂಭಿವಿಸಿತ್ತು. ಈ ಘಟನೆ ಮಾಸುವ ಮೊದಲೇ ಮತ್ತೊಂದು ದುರಂತ ನಡೆದು ಹೋಗಿದೆ.
ಪಾಕಿಸ್ತಾನದ ವಾಯುವ್ಯ ನಗರ ಪೇಶಾವರದಲ್ಲಿ ಪಾಕ್ ಅರೆಸೈನಿಕ ಪಡೆಯ ಕೇಂದ್ರ ಕಚೇರಿ ಇದೆ. ಉಗ್ರರು ಇದೇ ಅರೆಸೈನಿಕ ಪಡೆಯ ಕೇಂದ್ರ ಕಚೇರಿ ಟಾರ್ಗೆಟ್ ಮಾಡಿ, ಹೊಂಚು ಹಾಕಿ ನೇರವಾಗಿ ನುಗ್ಗಿದ್ದಾರೆ. ಬಂದೂಕುಧಾರಿ ಉಗ್ರರು ದಿಢೀರ್ ಒಳಗೆ ನುಗ್ಗಿ ದಾಳಿ ಮಾಡಿದ್ದು, ಇದರ ಜೊತೆಗೆ ಆತ್ಮಾಹುತಿ ಬಾಂಬ್ ದಾಳಿ ಕೂಡ ನಡೆದಿದೆ ಎಂದು ಆರೋಪಿಸಲಾಗಿದೆ. ಕಾನ್‌ಸ್ಟಾಬ್ಯುಲರಿ ಮುಖ್ಯ ದ್ವಾರದ ಮೇಲೆ ಮೊದಲು ಆತ್ಮಹತ್ಯಾ ಬಾಂಬರ್ ದಾಳಿ ಮಾಡಿದ್ದು, ಆ ನಂತರ ಒಳಗೆ ನುಗ್ಗಿದ ಇನ್ನಷ್ಟು ಉಗ್ರರು ಘೋರ ಕೃತ್ಯ ಎಸಗಿದ್ದಾರೆ. 2ನೇ ಆತ್ಮಹತ್ಯಾ ಬಾಂಬರ್ ಪಾಕಿಸ್ತಾನ ಅರೆಸೈನಿಕ ಪಡೆಯ ಕೇಂದ್ರ ಕಚೇರಿಯ ಒಳಗೆ ನುಗ್ಗಿ ದಾಳಿ ಮಾಡಿದ್ದಾನೆ. ಹೀಗಾಗಿ ಸಾವು & ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಅರೆಸೈನಿಕ ಪಡೆ ಕೇಂದ್ರ ಕಚೇರಿ ಲಾಕ್
ಸುದ್ದಿ ತಿಳಿದ ತಕ್ಷಣ ಪಾಕಿಸ್ತಾನದ ಸೇನೆ ಹಾಗೂ ಪೊಲೀಸ್ ಪಡೆ ಸ್ಥಳಕ್ಕೆ ಓಡೋಡಿ ಬಂದಿದ್ದು, ಇದೀಗ ಉಗ್ರರು ಒಳಗೆ ನುಗ್ಗಿರುವ ಪಾಕ್ ಅರೆಸೈನಿಕ ಪಡೆಯ ಕೇಂದ್ರ ಕಚೇರಿಯನ್ನ ಸುತ್ತುವರಿದು ಉಗ್ರರ ಹೆಣ ಬೀಳಿಸಲು ಕಾಯುತ್ತಿದ್ದಾರೆ. ಈಗಲೂ ಒಳಗಡೆ ಉಗ್ರರು ಅಡಗಿ ಕುಳಿತಿರುವ ಸಾಧ್ಯತೆ ದಟ್ಟವಾಗಿದ್ದು, ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ಮತ್ತೆ ಭೀಕರ ಸ್ಫೋಟ ಅಥವಾ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಆತಂಕ ಮೂಡಿದೆ. ಸ್ಥಳೀಯರು ಈ ಘಟನೆ ಬೆನ್ನಲ್ಲೇ ಹೊರಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಪಾಕಿಸ್ತಾನ ನೆಲದಲ್ಲಿ ಪದೇ ಪದೇ ಅಟ್ಯಾಕ್
ಭಾರತದ ಜೊತೆ ಸದಾ ಜಗಳ ಮಾಡುತ್ತಾ ದ್ವೇಷ ಕಾರುವ ಪಾಪಿ ಪಾಕಿಸ್ತಾನದ ರಾಜಕಾರಣಿಗಳಿಗೆ ಇದೀಗ ಮತ್ತೊಂದು ಪಾಠವಾಗಿದೆ. ಉಗ್ರರನ್ನು ತಾವೇ ಪೋಷಣೆ ಮಾಡಿ ಬೆಳೆಸಿರುವ ಪಾಕಿಸ್ತಾನ ರಾಜಕೀಯ ನಾಯಕರು & ಪಾಪಿ ಪಾಕಿಸ್ತಾನ ಸೇನೆ ಇದೀಗ ಉಗ್ರರಿಂದಲೇ ಸಾಲು ಸಾಲು ಸಮಸ್ಯೆ ಎದುರಿಸುವಂತೆ ಆಗಿದೆ. ಜಾಗತಿಕ ಮಟ್ಟದಲ್ಲಿ ಎಷ್ಟೇ ಮರ್ಯಾದಿ ಕಳೆದುಕೊಂಡರೂ ಪಾಕಿಸ್ತಾನ ಮಾತ್ರ ಉಗ್ರರನ್ನು ಪೋಷಣೆ ಮಾಡುವ ಕೆಲಸ ಬಿಡುತ್ತಿಲ್ಲ. ಇದರ ಪರಿಣಾಮ ಪಾಕಿಸ್ತಾನ ದೇಶದ ಸಾಮಾನ್ಯ ಜನರು ಒದ್ದಾಡುವಂತೆ ಆಗಿದೆ.












Click it and Unblock the Notifications