India & China: ಭಾರತದ ‘ಜೇಮ್ಸ್ ಬಾಂಡ್’ ಚೀನಾಗೆ, ಜಗತ್ತಿನ ಗಮನ ಸೆಳೆದ ಮಾತುಕತೆ!
ಭಾರತ & ಚೀನಾ ನಡುವೆ 2020ರ ಸಮಯದಲ್ಲಿ ಘೋರ ಯುದ್ಧವೇ ನಡೆದು ಹೋಗುತ್ತಾ? ಎಂಬ ಭಯದ ವಾತಾವರಣ ನಿರ್ಮಾಣ ಆಗಿತ್ತು. ಯಾಕಂದ್ರೆ ಭಾರತ & ಚೀನಾ ಗಡಿಯಲ್ಲಿ ಸೈನಿಕರ ನಡುವೆ ಘೋರ ಕಾಳಗ ನಡೆದಿತ್ತು. ಭಾರತೀಯ ಸೈನಿಕರು ಚೀನಾ ಸೈನಿಕರನ್ನು, ಚೀನಾ ಸೇನಾ ವಾಹನಗಳನ್ನು ಅಟ್ಟಾಡಿಸಿ ಬಡಿದಿದ್ದರು. ಭಾರತದ ಗಡಿಗೆ ಬಂದಿದ್ದ ಚೀನಾ ಸೇನೆಗೆ ಈ ಮೂಲಕ ಬುದ್ಧಿ ಕಲಿಸಿದ್ದರು. ಅಲ್ಲದೆ ಭಾರತದ ಹಲವು ಸೈನಿಕರು ಹುತಾತ್ಮರಾದರೆ, ಚೀನಾ ಕಡೆ ಹತ್ತಾರು ಸೈನಿಕರು ಜೀವ ಬಿಟ್ಟರು ಎಂಬ ಆರೋಪ ಕೇಳಿಬಂತು.
ಹೀಗೆ, ಭಾರತ & ಚೀನಾ ಸಂಬಂಧ 2020ರ ಸಮಯದಲ್ಲಿ ಅತ್ಯಂತ ಸೂಕ್ಷ್ಮ ಸ್ಥಿತಿಗೆ ತಲುಪಿ, ಇನ್ನೇನು ಎರಡೂ ದೇಶಗಳ ನಡುವೆ ಯುದ್ಧ ಗ್ಯಾರಂಟಿ ಎಂಬ ಭಯ ಆವರಿಸಿತ್ತು. ಆದರೆ ಕೆಲವು ತಿಂಗಳಿಂದ ಭಾರತ & ಚೀನಾ ಸಂಬಂಧ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದ್ದು, ಭಾರತದ 'ಜೇಮ್ಸ್ ಬಾಂಡ್' ಅಂತಾನೇ ಖ್ಯಾತಿ ಪಡೆದಿರುವ ಅಜಿತ್ ದೋವಲ್ ಚೀನಾ ನೆಲಕ್ಕೆ ಎಂಟ್ರಿ ಕೊಟ್ಟು ಹೊಸ ಸಂಚಲನ ಸೃಷ್ಟಿ ಮಾಡಿದ್ದಾರೆ. ಹಾಗಾದ್ರೆ ಅಜಿತ್ ದೋವಲ್ ಚೀನಾ ಭೇಟಿಯಲ್ಲಿ ಏನೆಲ್ಲಾ ಆಗೋಯ್ತು? ಮುಂದೆ ಓದಿ.

ಭಾರತದ 'ಜೇಮ್ಸ್ ಬಾಂಡ್' ಎಂಟ್ರಿ!
ಮೊದಲೇ ಹೇಳಿದಂತೆ ಭಾರತ & ಚೀನಾ ನಡುವಿನ ಸಂಬಂಧ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದೆ. ಅದರಲ್ಲೂ ಭಾರತ & ಚೀನಾ ಸಂಬಂಧ ಹಾಳು ಮಾಡಲು ಕಾಯುತ್ತಿದ್ದ ಕೆಲವು ಶತ್ರುಗಳನ್ನ ದೂರ ಇಟ್ಟು ಎರಡೂ ದೇಶಗಳು ಇದೀಗ ಸಂಬಂಧ ಸುಧಾರಣೆಗೆ ಮುಂದಾಗಿವೆ. ಪರಿಸ್ಥಿತಿ ಹೀಗೆ ಸುಧಾರಣೆ ಕಾಣುವ ಸಮಯದಲ್ಲೇ ಮತ್ತೊಂದು ಪ್ರಮುಖ ಘಟನೆ ನಡೆದಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾಗೆ ಭೇಟಿಯನ್ನು ನೀಡಿದ್ದು, ಚೀನಾ ವಿದೇಶಾಂಗ ಸಚಿವರ ಜೊತೆಗೆ ಮಹತ್ವದ ಮಾತುಕತೆ ನಡೆದಿದೆ. ಅಲ್ಲದೆ ಈ ಸಮಯದಲ್ಲಿ ಭಾರತ & ಚೀನಾ ಗಡಿ ಸಮಸ್ಯೆ ಬಗ್ಗೆ ಕೂಡ ಮಾತುಕತೆ ನಡೆದಿದೆ ಅಂತ ಹೇಳಲಾಗಿದೆ. ಈ ಮೂಲಕ ಬರೋಬ್ಬರಿ 5 ವರ್ಷಗಳ ಗ್ಯಾಪ್ ನಂತರ ಭಾರತ & ಚೀನಾದ ನಡುವೆ ಮಹತ್ವದ ಗಡಿ ಮಾತುಕತೆ ಆರಂಭವಾಗಿದೆ.
ಚೀನಾ ವಿದೇಶಾಂಗ ಸಚಿವರ ಜೊತೆ ದೋವಲ್
ಭಾರತ & ಚೀನಾ ನಡುವಿನ ಸಂಬಂಧ ಸುಧಾರಣೆ ಆಗಬೇಕು ಎಂಬುದು ರಷ್ಯಾ ಸೇರಿದಂತೆ ಹಲವು ದೇಶಗಳ ಒತ್ತಾಸೆ ಆಗಿತ್ತು. ಅದರಲ್ಲೂ ಭಾರತ & ಚೀನಾ ನಡುವೆ ಒಗ್ಗಟ್ಟು ಮೂಡಿ ಎರಡೂ ದೇಶಗಳು ಒಂದಾಗಿ ನಿಂತರೆ ಏಷ್ಯಾ ಖಂಡ ಇಡೀ ಜಗತ್ತಿನಲ್ಲೇ ಶಕ್ತಿಶಾಲಿ ಆಗಲಿದೆ, ಈ ಮೂಲಕ ಭಾರಿ ದೊಡ್ಡ ಬದಲಾವಣೆ ಜಾಗತಿಕ ಮಟ್ಟದಲ್ಲಿ ಗ್ಯಾರಂಟಿ ಎನ್ನಲಾಗಿತ್ತು. ಎಲ್ಲ ಲೆಕ್ಕಾಚಾರಗಳ ನಡುವೆ ಇದೀಗ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾ ವಿದೇಶಾಂಗ ಸಚಿವರನ್ನ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.












Click it and Unblock the Notifications