ಖಲಿಸ್ತಾನಿಗಳ ವಿಚಾರ ಮತ್ತೆ ಪ್ರಸ್ತಾಪಿಸಿದ ಕೆನಡಾ ಪ್ರಧಾನಿ!

ಕೆನಡಾ & ಭಾರತ ಸಂಬಂಧ ಹಾಳು ಮಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಇದೀಗ ಮತ್ತೊಮ್ಮೆ ಕಿರಿಕ್ ತೆಗೆದಿದ್ದಾರೆ. ಖಲಿಸ್ತಾನಿ ಉಗ್ರರ ಪರ ಮಾತನಾಡಿ, ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ಕೆನಡಾದ ಪ್ರಧಾನಿ ಮತ್ತೊಂದು ಬಾರಿ ಇದೀಗ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಬಗ್ಗೆ ಮಾತನಾಡಿದ್ದಾರೆ.

ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ 2023ರ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು.

Canada PM Once Again Spoke About Nijjar s Case

ಆದರೆ ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಹೀಗಾಗಿ ಸೂಕ್ತ ಸಾಕ್ಷ್ಯವೇ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಇಷ್ಟೆಲ್ಲದರ ಮಧ್ಯೆ ಕೆನಡಾ & ಭಾರತ ನಡುವೆ ಸಂಬಂಧ ಸಂಪೂರ್ಣ ಹಳಸಿತ್ತು. ಕೆಲವು ತಿಂಗಳಿಂದ ತಣ್ಣಗಾಗಿದ್ದ ಈ ಮ್ಯಾಟರ್ ಬಗ್ಗೆ ಈಗ ಮತ್ತೆ ಮಾತನಾಡಿದ್ದಾರೆ ಕೆನಡಾ ಪ್ರಧಾನಿ.

ಕೆನಡಾ ಪ್ರಧಾನಿ ಹೇಳಿದ್ದೇನು?

ಅಂದಹಾಗೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ, ಖಲಿಸ್ತಾನಿ ಟೆರರ್ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ಪ್ರಶ್ನೆ ಕೇಳಿಬಂದಿದೆ. ಆಗ ಮಾತನಾಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಪ್ರತಿಯೊಬ್ಬ ಕೆನಡಾ ಪ್ರಜೆಯ ಹಕ್ಕುಗಳು & ಸ್ವಾತಂತ್ರ್ಯ ರಕ್ಷಿಸಲು ತಮ್ಮ ಸರ್ಕಾರ ಬದ್ಧ ಎಂದಿದ್ದಾರೆ.

ಅಲ್ಲದೆ ಭಾರತ ಸರ್ಕಾರದ ಜೊತೆಗಿನ ಸಂಬಂಧದ ಕುರಿತು ಕೂಡ ಈ ಸಮಯದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮಾತನಾಡಿದ್ದು ಗಮನ ಸೆಳೆದಿದೆ. ಇದು ಮುಂದೆ ಭಾರತ & ಕೆನಡಾ ಸಂಬಂಧದಲ್ಲಿ ಸಂಚಲನ ಸೃಷ್ಟಿಸುವ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+