ಭಾರತಕ್ಕೆ ಬೆದರಿಕೆ ಹಾಕಿದ ಪಾಪಿ ಪಾಕಿಸ್ತಾನ, ಯುದ್ಧಕ್ಕೆ ಸಿದ್ಧ ಅಂತಿದ್ದಾನೆ ಈ ಬಿಲಾವಲ್ ಭುಟ್ಟೋ...

ಪಾಕಿಸ್ತಾನಕ್ಕೆ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಯೋಗ್ಯತೆ ಇಲ್ಲ ಅಂದ್ರೂ ಭಾರತದ ಜೊತೆಗೆ ಬೇಕು ಬೇಕು ಅಂತಾ ಜಗಳ ತೆಗೆಯುವ ಕಂತ್ರಿ ಬುದ್ಧಿ ಮಾತ್ರ ಈಗಲೂ ಕಡಿಮೆ ಆಗಿಲ್ಲ. ಕೆಲವು ದಿನಗಳ ಹಿಂದಷ್ಟೇ ಈ ಪಾಪಿ ಪಾಕಿಸ್ತಾನಕ್ಕೆ ಭಾರತ ಸರಿಯಾಗಿ ಪಾಠ ಕಲಿಸಿದೆ. ಅಲ್ಲದೆ ಪಾಪಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನ ಕೂಡ ನೀಡುವಂತೆ ದಾಳಿ ಮಾಡಿದೆ ಭಾರತ. ಇಂತಹ ಸಮಯದಲ್ಲೇ ಮತ್ತೆ ಬಾಲ ಬಿಚ್ಚಿದೆ ಇದೇ ಕಿತ್ತೋದ ಪಾಕಿಸ್ತಾನ.

ಹೌದು, ಭಾರತದ ಕಿರೀಟ ಕಾಶ್ಮೀರದ ಮೇಲೆ ಉಗ್ರರನ್ನು ಛೂ ಬಿಟ್ಟು ದಾಳಿ ಮಾಡಿಸಿದ್ದ ಪಾಪಿ ಪಾಕ್‌ಗೆ ಭಾರತ ಬುದ್ಧಿ ಕಲಿಸಲು ನದಿ ನೀರು ನಿಲುಗಡೆ ಮಾಡಿತ್ತು. ಈ ಬಗ್ಗೆ ಪಾಪಿ ಪಾಕಿಸ್ತಾನ ಆರಂಭದಲ್ಲೆಲ್ಲಾ ಕಾಲು ಹಿಡಿದುಕೊಂಡು ಬೇಡುತ್ತಾ ಇತ್ತು. ಆದರೆ ಇದೀಗ ದಿಢೀರ್ ಪಾಪಿ ಪಾಕಿಸ್ತಾನ ತನ್ನ ವರಸೆಯನ್ನೇ ಬದಲಾಯಿಸಿದ್ದು, ಭಾರತಕ್ಕೆ ಬೆದರಿಕೆ ಹಾಕುವ ಹಂತಕ್ಕೆ ಮತ್ತೆ ಬಂದಿದೆ. ಹಾಗಾದ್ರೆ ಪಾಪಿ ಪಾಕಿಸ್ತಾನದ ಕಡೆಯಿಂದ ಬಂದಿರುವ ಮಾತು ಎಂತಹದ್ದು? ಮುಂದೆ ಓದಿ.

Bilawal Bhutto s Water Threats to India Amid Tensions

ಯುದ್ಧಕ್ಕೆ ಸಿದ್ಧ ಅಂತಿದ್ದಾನೆ ಬಿಲಾವಲ್ ಭುಟ್ಟೋ!

ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಈಗ ಭಾರತದ ವಿರುದ್ಧ ಮಾತನಾಡಿದ್ದು, ಭಾರತ ನದಿ ನೀರು ನಿಲ್ಲಿಸುವ ನಿರ್ಧಾರ ಕೈಗೊಂಡಿರುವ ಹಿನ್ನೆಲೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಅಂದ್ರೆ ಪಾಕಿಸ್ತಾನಕ್ಕೆ ಸಿಗಬೇಕಾದ ನೀರನ್ನು ಭಾರತ ನಿಲ್ಲಿಸಿದರೆ, ನಾವು ಯುದ್ಧ ಮಾಡಲು ಸಿದ್ಧವೆಂದು ಹೇಳಿದ್ದಾನೆ ಬಿಲಾವಲ್ ಭುಟ್ಟೋ. ಅಲ್ಲದೆ ಯುದ್ಧ ಮಾಡುವ ಮೂಲಕ 6 ನದಿಗಳನ್ನು ವಶಕ್ಕೆ ಪಡೆಯುವ ಬಗ್ಗೆ ಕೂಡ ಕನಸಿನ ಮಾತು ಆಡಿದ್ದಾನೆ ಇದೇ ಬಿಲಾವಲ್ ಭುಟ್ಟೋ.

ಉಗ್ರರ ದಾಳಿ ನಂತರ ಏನಾಗಿತ್ತು?

ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ಧಾರಿ ಸಾರ್ವಜನಿಕ ಸಮಾರಂಭದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. 2025 ಏಪ್ರಿಲ್ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಈ ಬಿಕ್ಕಟ್ಟು ಭುಗಿಲೆದ್ದಿತು, 26 ಭಾರತೀಯರನ್ನ ಉಗ್ರರು ಹತ್ಯೆ ಮಾಡಿದ್ದರಿಂದ ಭಾರಿ ಆಕ್ರೋಶ ಭುಗಿಲೆದ್ದಿತ್ತು.

ಇದೇ ಕಾರಣಕ್ಕೆ, 1960ರ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿ ಭಾರತ ಘೋಷಣೆ ಹೊರಡಿಸಿತ್ತು. ಈ ಬಗ್ಗೆ ಈಗ ಮಾತನಾಡಿರುವ ಇದೇ ಬಿಲಾವಲ್ ಭುಟ್ಟೋ, ಭಾರತಕ್ಕೆ ಕೇವಲ ಎರಡು ಆಯ್ಕೆಗಳಿವೆ- ಸಿಂಧೂ ಜಲ ಒಪ್ಪಂದಕ್ಕೆ ಒಪ್ಪಿಕೊಳ್ಳಿ, ಇಲ್ಲದೇ ಇದ್ದರೆ ಪಾಕಿಸ್ತಾನ ಮತ್ತೊಂದು ಯುದ್ಧವನ್ನು ಮಾಡುತ್ತದೆ ಎಂದಿದ್ದಾನೆ ಭುಟ್ಟೋ. ಇದೀಗ ಬಿಲಾವಲ್ ಭುಟ್ಟೋ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಮತ್ತೊಂದು ಸುತ್ತು ಏಟು ಬೇಕಾ? ಅಂತಿದ್ದಾರೆ ಭಾರತೀಯರು.

ಪಾಕಿಸ್ತಾನ ವಿರುದ್ಧ ಮತ್ತೊಂದು ಯುದ್ಧ?

ಒಟ್ನಲ್ಲಿ ಭಾರತದ ಕೈಯಲ್ಲಿ ಸರಿಯಾಗಿ ಏಟು ತಿಂದರೂ ಪಾಪಿ ಪಾಕಿಸ್ತಾನ ಇನ್ನೂ ಬದಲಾಗಿಲ್ಲ ಅಂತಾ ಕಾಣುತ್ತದೆ. ಭಾರತೀಯ ಸೇನೆ ಮಾಡಿದ್ದ ದಾಳಿಗೆ ಹೆದರಿ ಮೂಲೆ ಸೇರಿದ್ದ ಪಾಪಿ ಪಾಕಿಸ್ತಾನ ಈಗ ಮತ್ತೆ ಬಾಲ ಬಿಚ್ಚಿದ್ದು, ಇದಕ್ಕೆ ಭಾರತ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಆದರೆ ಒಂದಂತೂ ಸತ್ಯ, ಪಾಪಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಸರಿಯಾಗಿ ಬುದ್ಧಿ ಕಲಿಸಲೇಬೇಕಿದೆ ಅಂತಿದ್ದಾರೆ ಭಾರತೀಯರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+