ಇಸ್ರೇಲ್ ಪ್ರಧಾನಿ ಭಾವುಕ, ದೇಶದ ಪ್ರಜೆಗಳನ್ನು ಉದ್ದೇಶಿಸಿ ಭಾಷಣ
ಹಮಾಸ್ ಜೊತೆಗೆ ತಿಕ್ಕಾಟ ನಡೆಸುತ್ತಿರುವ ಇಸ್ರೇಲ್ ಇದೀಗ ಕದನ ವಿರಾಮ ಘೋಷಿಸಿದ್ದು, ಎರಡೂ ದೇಶಗಳು ಸೈಲೆಂಟ್ ಆಗಿವೆ. ಗಾಜಾ ಪಟ್ಟಿಯಲ್ಲಿ ಇದೀಗ ಶಾಂತಿ ಮೂಡಿದ್ದು, ಈ ನಡುವೆ ಇಸ್ರೇಲ್ ಒತ್ತೆಯಾಳುಗಳನ್ನೂ ಹಮಾಸ್ ಬಂಡುಕೋರರು ರಿಲೀಸ್ ಮಾಡಿದ್ದಾರೆ. ಮತ್ತೊಂದು ಕಡೆ ಹಮಾಸ್ ಬಳಿ ಮೃತಪಟ್ಟಿದ್ದ ಒತ್ತೆಯಾಳುಗಳ ಮೃತದೇಹ ಕೂಡ ಇದೀಗ ಹಸ್ತಾಂತರವಾಗಿದೆ.
ಇಸ್ರೇಲ್ & ಹಮಾಸ್ ನಡುವಿನ ಹೋರಾಟದಲ್ಲಿ ಅರ್ಧ ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿ, ಗಾಜಾ ಥೇಟ್ ನರಕವಾಗಿದೆ. ಹಾಗೇ ಮತ್ತೊಂದು ಕಡೆ ಮಧ್ಯಪ್ರಾಚ್ಯ ದೇಶಗಳಲ್ಲಿ ಹಿಂಸೆಯ ಭಯ ಆವರಿಸಿತ್ತು. ಆದರೆ ಯುದ್ಧ ನಿಂತು ಹಲವು ದಿನಗಳು ಕಳೆದಿದ್ದು, ಹಮಾಸ್ ಕೂಡ ಒಪ್ಪಂದದ ಪ್ರಕಾರ ಒತ್ತೆಯಾಳುಗಳನ್ನು ಹಸ್ತಾಂತರ ಮಾಡಿದೆ. ಹಾಗೇ ಮೃತಪಟ್ಟವರ ದೇಹ ಕೂಡ ಇಸ್ರೇಲ್‌ನ ಕುಟುಂಬಗಳಿಗೆ ದೊರೆತಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ಈ ಎಲ್ಲಾ ಬೆಳವಣಿಗೆ ನಡೆಯುತ್ತಿವೆ. ಮತ್ತೊಂದು ಕಡೆ ಇಸ್ರೇಲ್ ಪ್ರಧಾನಿ ಭಾವುಕರಾಗಿದ್ದಾರೆ.

ಬೆಂಜಮಿನ್ ನೆತನ್ಯಾಹು ಭಾವುಕ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒತ್ತೆಯಾಳುಗಳ ಮೃತದೇಹ ವಾಪಸ್ ಬಂದಿರುವ ಬಗ್ಗೆ ಮಾತನಾಡುತ್ತಾ, ಇಸ್ರೇಲ್ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಭಾವುಕರಾಗಿದ್ದಾರೆ ನೆತನ್ಯಾಹು. ಇಸ್ರೇಲ್ ಸೇನೆ ಈಗಾಗಲೇ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ಶಾಂತಿ ಪಾಲನೆ ಮಾಡಲಾಗುತ್ತಿದೆ. ಮತ್ತೊಂದು ಕಡೆ ಯುದ್ಧ ಮುಗಿಯುತ್ತಿರುವ ನಡುವೆ ಗಾಜಾ ಪಟ್ಟಿಯನ್ನು ನಮ್ಮ ವಶಕ್ಕೆ ಒಪ್ಪಿಸಿ ಅಂತಾ ಬೇಡಿಕೆ ಇಡುತ್ತಿದೆ ಅಮೆರಿಕ.
ಹೀಗೆ ಅಮೆರಿಕದ ಬೇಡಿಕೆ ನಡುವೆ ಇಸ್ರೇಲ್ ಕೂಡ ಗಾಜಾ ಪಟ್ಟಿಯಲ್ಲಿ ಬೇರೆ ಏನೋ ಪ್ಲಾನ್ ಮಾಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ಗಾಜಾ ಪಟ್ಟಿಯನ್ನ ತಮ್ಮ ಎಂದರೆ ಅಮೆರಿಕದ ವಶಕ್ಕೆ ಪಡೆದು ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದ್ದಾರೆ. ಆದರೆ ಇದು ಸಕ್ಸಸ್ ಆಗುತ್ತಾ? ಅನ್ನೋ ಪ್ರಶ್ನೆ ಮೂಡಿದೆ.












Click it and Unblock the Notifications