Get Updates
Get notified of breaking news, exclusive insights, and must-see stories!

Islamabad: ದೆಹಲಿ ದಾಳಿ ಬೆನ್ನಲ್ಲೇ ಪಾಪಿ ಪಾಕಿಸ್ತಾನದಲ್ಲೂ ಭೀಕರ ಸ್ಫೋಟ, 6 ಜನರ ಸಾವು

ಇಸ್ಲಾಮಾಬಾದ್: ಉಗ್ರರ ತವರು ಎಂಬ ಕೆಟ್ಟ ಹೆಸರು ಪಡೆದಿರುವ ಪಾಕಿಸ್ತಾನದಲ್ಲಿ ಇಂದು ಭೀಕರ ಘಟನೆ ಸಂಭವಿಸಿದೆ. ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣ ಬಳಿ ಸಂಭವಿಸಿರುವ ಭೀಕರ ಸ್ಫೋಟದ ಪರಿಣಾಮ 6 ಜನ ಮೃತಪಟ್ಟಿದ್ದು, ಸುಮಾರು 20 ರಿಂದ 25 ಜನ ಗಾಯಗೊಂಡಿದ್ದಾರೆ ಎಂದು ಈಗ ವರದಿಯಾಗಿದೆ. ನಿನ್ನೆಯಷ್ಟೇ ನಮ್ಮ ದೇಶದ ರಾಜಧಾನಿ ದೆಹಲಿ ಹೃದಯ ಭಾಗದಲ್ಲಿ ಭೀಕರ ಬ್ಲಾಸ್ಟ್ ಆಗಿದ್ದು ಭಾರಿ ದೊಡ್ಡ ಮಟ್ಟಿಗೆ ಸಂಚಲನ ಸೃಷ್ಟಿ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಶತ್ರು ದೇಶದಲ್ಲೂ ಭೀಕರ ಸ್ಫೋಟವಾಗಿದೆ.

ಭಯೋತ್ಪಾದನೆ ಬೆಳೆಸುತ್ತಾ, ಭಯೋತ್ಪಾದಕರಿಗೆ ಬೆನ್ನೆಲುಬಾಗಿ ನಿಂತಿರುವ ಪಾಕಿಸ್ತಾನಕ್ಕೆ ಈಗಾಗಲೇ ಸಾಕಷ್ಟು ಸವಾಲುಗಳು ಎದುರಾಗಿವೆ. ಹೀಗಿದ್ದರೂ ಉಗ್ರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚಾಗಿದೆ. ಇಂದು ಕೂಡ ಪಾಕಿಸ್ತಾನದ ಇಸ್ಲಾಮಾಬಾದ್ ಪ್ರದೇಶದಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿದ್ದು, ದಿಢೀರ್ ಸಂಭವಿಸಿರುವ ಸ್ಫೋಟದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ನಿಲ್ಲಿಸಿರುವ ವಾಹನದ ಒಳಗೆ ಇದ್ದ ಗ್ಯಾಸ್ ಸಿಲಿಂಡರ್‌ ಬ್ಲಾಸ್ಟ್ ಆಗಿ ಘಟನೆ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಹೊರ ಬಿದ್ದಿರುವ ಮಾಹಿತಿ.

Attack Near Islamabad Court Results In 6 Fatalities And Several Injured

5 ಕಿ.ಮೀ. ದೂರಕ್ಕೂ ಕೇಳಿದ ಸ್ಫೋಟದ ಸದ್ದು!

ಮಧ್ಯಾಹ್ನದ ಹೊತ್ತಿನಲ್ಲಿ ಜನರು ಹೆಚ್ಚಾಗಿರುವ ಸಮಯದಲ್ಲೇ ಈ ರೀತಿಯ ದಾಳಿ ಮಾಡಲಾಗಿದ್ದು, ಉಗ್ರರಿಂದಲೇ ಆಗಿರುವ ಕೃತ್ಯ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಸ್ಫೋಟ ಕೋರ್ಟ್ ಆವರಣದಲ್ಲಿ ಇದ್ದ ವಕೀಲರಲ್ಲಿ ಭಯ ಮೂಡಿಸಿತ್ತು, ತಕ್ಷಣವೇ ಎಲ್ಲರೂ ಓಡಿ ಹೋಗಿದ್ದಾರೆ. ಹಾಗೇ ಬ್ಲಾಸ್ಟ್ ಅದೆಷ್ಟು ತೀವ್ರವಾಗಿತ್ತು ಎಂದರೆ, 5 ಕಿಲೋ ಮೀಟರ್ ದೂರಕ್ಕೂ ಸ್ಫೋಟದ ಸದ್ದು ಕೇಳಿಸಿದೆ. ಸುತ್ತಮುತ್ತಲು ಇದ್ದ ವಾಹನಗಳು ಕೂಡ ಸ್ಫೋಟದಲ್ಲಿ ಹಾನಿಗೀಡಾಗಿದ್ದು, ಗಾಯಗೊಂಡವರ ಪೈಕಿ ಹೆಚ್ಚಿನ ಜನರು ವಕೀಲರು & ಕೋರ್ಟ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ. ಮತ್ತೊಂದು ಕಡೆ ಪೊಲೀಸರು ಆತ್ಮಹತ್ಯಾ ದಾಳಿ ಇದಾಗಿರಬಹುದು ಎಂದು ಶಂಕಿಸಿದ್ದಾರೆ.

ದೆಹಲಿ ಘಟನೆ ನಂತರ ಪಾಪಿ ಪಾಕಿಸ್ತಾನ...

ನಿನ್ನೆ ರಾತ್ರಿ ಭಾರತದ ರಾಜಧಾನಿ ದೆಹಲಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಸಂಚಲನ ಸೃಷ್ಟಿಯಾಗಿದೆ. ದೆಹಲಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಈ ಸ್ಫೋಟದ ತೀವ್ರತೆ ಹಿನ್ನೆಲೆ ಭಾರಿ ದೊಡ್ಡ ಹಾನಿ ಉಂಟಾಗಿದೆ. ದಿಢೀರ್ ಕಾರಿನ ಒಳಗಡೆ ಸಂಭವಿಸಿದ ಈ ಸ್ಫೋಟದ ಪರಿಣಾಮ ಈವರೆಗೂ 9 ಸಾವು, ಹಲವರು ಗಾಯಗೊಂಡಿದ್ದಾರೆ. ಹೀಗಿದ್ದಾಗ ಪಾಕಿಸ್ತಾನ ನೆಲದಲ್ಲೂ ಭಾರಿ ದೊಡ್ಡ ಬ್ಲಾಸ್ಟ್ ಆಗಿರುವುದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸದಾ ಉಗ್ರರನ್ನು ಬೆಂಬಲಿಸುವ ಪಾಕಿಸ್ತಾನ ಅದೇ ಉಗ್ರರಿಂದ ಪೆಟ್ಟು ತಿನ್ನುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+