ಚೀನಾ & ಭಾರತ ನಡುವೆ ಮಾತಿನ ಕಿರಿಕ್: ಮಾತುಕತೆಗೆ ಕರೆದಿದ್ದು ಯಾರು?
ಭಾರತದ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಹೀಗಾಗಿ ಇದಕ್ಕೆಲ್ಲ ಒಂದು ಅಂತ್ಯ ಹಾಡಲು ಎರಡೂ ದೇಶಗಳು ಮುಂದಾಗಲಿವೆ ಎಂಬ ಭರವಸೆ ಇತ್ತು. ಈ ಭರವಸೆ ಇನ್ನೇನು ಈಡೇರಿತು ಅಂತಾ ಅಂದುಕೊಳ್ಳಲಾಗಿತ್ತು. ಆದರೆ ಮತ್ತೆ ಕಿರಿಕ್ ಶುರುವಾಗಿದ್ದು, ಚೀನಾ ಮತ್ತು ಭಾರತದ ನಡುವೆ ಮಾತಿನ ಕಿರಿಕ್ ಜೋರಾಗಿದೆ. ಹಾಗಾದರೆ ಈ ಕಿರಿಕಿರಿ ಶುರುವಾಗಿದ್ದು ಯಾಕೆ? ಬನ್ನಿ ತಿಳಿಯೋಣ.
ಹೌದು, ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಬ್ರಿಕ್ಸ್ ಶೃಂಗ ಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಹತ್ವದ ಮಾತುಕತೆ ನಡೆಸಿದ್ದರು. ಈ ಚರ್ಚೆ ವೇಳೆ ಗಡಿ ವಿಚಾರ ಕೂಡ ಪ್ರಸ್ತಾಪ ಮಾಡಲಾಗಿತ್ತು. ಗಡಿಯ ವಿವಾದಕ್ಕೆ ಅಂತ್ಯ ಕಾಣಿಸೋದಕ್ಕೆ ಭಾರತ & ಚೀನಾ ನಾಯಕರು ಒಪ್ಪಿಗೆ ಸೂಚಿಸಿದ್ದರು. ಕಳೆದ 3 ವರ್ಷಗಳಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಭಾರತ ಗಡಿ ಭಾಗಕ್ಕೆ ಈಗಲಾದರೂ ನೆಮ್ಮದಿ ಸಿಗುತ್ತಾ? ಅನ್ನೋ ಪ್ರಶ್ನೆ ಮೂಡಿತ್ತು ಹಾಗೂ ನಿರಿಕ್ಷೆಯೂ ಹೆಚ್ಚಾಗಿತ್ತು. ಆದ್ರೆ ಇರೋ ವಿಚಾರ ಬಿಟ್ಟು, ಇಲ್ಲದಿರೋ ವಿಚಾರಕ್ಕೆ ಇದೀಗ ಕ್ಯಾತೆ ಶುರುವಾಗಿದೆ.

ಚರ್ಚೆಗೆ ಕರೆದಿದ್ದು ಭಾರತ ಅಥವಾ ಚೀನಾ?
ಇದಕ್ಕೆ ಅಲ್ವಾ ಹೇಳೋದು ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೋಂಡ್ರು ಅಂತಾ? ಈ ಮಾತು ಯಾಕಪ್ಪ ಅಂದ್ರೆ ಗಡಿಯಲ್ಲಿ ಸೈನಿಕರ ನಡುವೆ ನಡೆಯುತ್ತಿರುವ ತಿಕ್ಕಾಟಕ್ಕೆ ಬ್ರೇಕ್ ಹಾಕಬೇಕು ಅಂತಿರುವಾಗಲೇ ಸಣ್ಣ ವಿಚಾರಕ್ಕೆ ಕಿರಿಕ್ ಶುರುವಾಗಿದೆ. ಅತ್ತ ಚೀನಾ, ಚರ್ಚೆ ನಡೆಸಿದ್ದು ಭಾರತದ ಕೋರಿಕೆ ಕಾರಣಕ್ಕೆ ಎಂದಿದೆ. ಭಾರತ ಕೂಡ ಚೀನಾ ಹೇಳಿಕೆಗೆ ಇದೀಗ ಖಡಕ್ ಉತ್ತರ ನೀಡಿದೆ. ಮಾತುಕತೆಗೆ ಕೋರಿಕೆ ಸಲ್ಲಿಸಿದ್ದೇ ಚೀನಾ ಎಂದಿದೆ. ಈ ಮೂಲಕ ಎರಡೂ ರಾಷ್ಟ್ರಗಳ ನಡುವೆ ಸಣ್ಣ ವಿಚಾರಕ್ಕೆ ಫೈಟ್ ದೊಡ್ಡದಾಗುತ್ತಿದೆ.
ಹಾಗಾದರೆ ಮಾತುಕತೆ ನಡೆದಿದ್ದು ಹೇಗೆ?
ಅಂತಿಮವಾಗಿ ಇಬ್ಬರ ನಡುವೆ ಗಡಿಯ ವಿವಾದ ಬಿಟ್ಟು ಬೇರೆಯದ್ದೆ ಕಿರಿಕ್ ಶುರುವಾಗಿದೆ. ಹೌದು, ಭಾರತದ ಪ್ರಧಾನಿ ಮೋದಿ ಅವರು ಹಾಗೂ ಚೀನಾ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆ ಬಗ್ಗೆ ಎರಡೂ ದೇಶಗಳ ನಡುವೆ ಕಿರಿಕ್ ನಡಿತಿದೆ. ಈ ಮಾತುಕತೆಯ ಬಗ್ಗೆ ವಿವರ ನೀಡಿದ್ದ ಚೀನಾ ವಿದೇಶಾಂಗ ಸಚಿವಾಲಯ, ಬ್ರಿಕ್ಸ್ ಸಭೆ ಸಂದರ್ಭದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪ್ರಧಾನಿ ಮೋದಿಯವರ ಕೋರಿಕೆಯ ಮೇರೆಗೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದಿತ್ತು. ಆದರೆ ಭಾರತ ಮಾತ್ರ ಚೀನಾದ ಈ ವಾದ ತಳ್ಳಿಹಾಕಿ, ಕೋರಿಕೆ ಮಾಡಿದ್ದು ಚೀನಾ ಹೊರತು ಭಾರತವಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ಗಡಿ ವಿವಾದದ ಜೊತೆಗೆ ಬೇರೆ ಕಿರಿಕ್ ಕೂಡ ಶುರುವಾಗಿದೆ.

ಭಾರತದ ಗಡಿಯಿಂದ ಚೀನಾ ಸೇನೆ ವಾಪಸ್?
ಬ್ರಿಕ್ಸ್ ಶೃಂಗಸಭೆ ಆರಂಭವಾದ ದಿನ ಪ್ರಶ್ನೆಯೊಂದು ಕಾಡುತ್ತಿತ್ತು. ಚೀನಾ & ಭಾರತದ ನಡುವೆ ಗಡಿ ವಿವಾದದ ಸಂಬಂಧ ಚರ್ಚೆ ನಡೆಯುತ್ತಾ? ಎರಡೂ ದೇಶಗಳು ಸಂಧಾನಕ್ಕೆ ಒಪ್ಪುತ್ತವಾ? ಎಂಬ ಕುತೂಹಲ ಹೆಚ್ಚಾಗಿತ್ತು. ಆದರೆ ಅಧಿಕೃತವಾಗಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಡುವೆ ಗಡಿ ವಿವಾದದ ಚರ್ಚೆ ನಡೆದಿರಲಿಲ್ಲ. ಆದರೆ ಅನೌಪಚಾರಿಕವಾಗಿಯೇ ಇಬ್ಬರೂ ನಾಯಕರು ಮಾತನಾಡಿದ್ದರು. ಅಲ್ಲದೆ ಗಡಿ ವಿವಾದ ಅಂತ್ಯಗೊಳಿಸಲು ಇಬ್ಬರೂ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿತ್ತು. ಚೀನಾ ಹಾಗೂ ಭಾರತದ ನಡುವಿನ ವಾಸ್ತವ ಗಡಿ ರೇಖೆ ಬಳಿ ಸೇನೆ ಹಿಂಪಡೆದು ಸ್ಥಿತಿ ತಿಳಿಗೊಳಿಸಲು ಒಪ್ಪಲಾಗಿದೆ ಎನ್ನಲಾಗಿತ್ತು. ಆದರೆ ಈ ಮಾತುಕತೆ ಬೆನ್ನಲ್ಲೇ ಹೊಸ ಕಿರಿಕ್ ಶುರುವಾಗಿದೆ.
2020ರಲ್ಲಿ ಗಲ್ವಾನ್ ವ್ಯಾಲಿ ಘರ್ಷಣೆ ನಂತರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಚೀನಾ & ಭಾರತ ಗಡಿಯಲ್ಲಿ ಉಭಯ ಸೇನೆಗಳು ಭಾರಿ ಪ್ರಮಾಣದಲ್ಲಿ ಸೈನಿಕರನ್ನ ನಿಯೋಜನೆ ಮಾಡಿವೆ. ನಂತರ ಪರಿಸ್ಥಿತಿ ತಿಳಿಗೊಳಿಸಲು ಸೇನಾ ಮಟ್ಟದ ಮಾತುಕತೆ ನಡೆದಿದೆ. ಆದ್ರೆ ಅದು ಅಂದುಕೊಂಡ ನಿರೀಕ್ಷೆ ಮುಟ್ಟಿಲ್ಲ. ಈ ಕಾರಣಕ್ಕೆ ಭಾರತ & ಚೀನಾ ಮುಖ್ಯಸ್ಥರು ಮಾತುಕತೆ ನಡೆಸಿದ್ದರು. ಆದ್ರೆ ಆ ಮಾತುಕತೆ ಬಗ್ಗೆ ಹೊಸ ವಿವಾದ ಭುಗಿಲೆದ್ದಿದ್ದು ದುರಂತವೇ ಸರಿ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications