Israel VS Lebanon: ಇಸ್ರೇಲ್ ವಿರುದ್ಧ ಲೆಬನಾನ್ ತೀವ್ರ ದಾಳಿ, ದಾಳಿಯಲ್ಲಿ 7 ಜನರ ಸಾವು?
ಇಸ್ರೇಲ್ & ಲೆಬನಾನ್ ಈ ಜನ್ಮದಲ್ಲಿ ಯುದ್ಧ ನಿಲ್ಲಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ಒಂದು ತಿಂಗಳಿಂದ ಇಸ್ರೇಲ್ & ಲೆಬನಾನ್ ಹಾವು & ಮುಂಗುಸಿ ರೀತಿ ಬಡಿದಾಡ್ತಿವೆ. ಅದರಲ್ಲೂ ತನ್ನ ಮೇಲೆ ದಾಳಿ ಮಾಡಿದ ಆರೋಪಕ್ಕೆ ಸೇಡು ತೀರಿಸಿಕೊಳ್ಳಲು ನೇರವಾಗಿಯೇ ಲೆಬನಾನ್ ಮೇಲೆ ನುಗ್ಗಿದ ಇಸ್ರೇಲ್ ಈಗ ಅಲ್ಲಿ ಒಂದೊಂದೇ ಪ್ರದೇಶವನ್ನು ಪುಡಿ ಪುಡಿ ಮಾಡಿ ಹಾಕುತ್ತಿದೆ. ಇಂತಹ ಸಮಯದಲ್ಲೇ ಲೆಬನಾನ್ ಕಡೆಯಿಂದ ಕೂಡ ರಾಕೆಟ್‌ಗಳು ಹಾರಿದ್ದು, ಉತ್ತರ ಗಾಜಾದಲ್ಲಿ ಲೆಬನಾನ್ ಹಾರಿಸಿದ್ದ ರಾಕೆಟ್‌ಗಳಿಗೆ 7 ಮಂದಿ ಬಲಿಯಾಗಿರುವ ಆರೋಪ ಕೇಳಿ ಬಂದಿದೆ.
ಇಸ್ರೇಲ್ ಸಣ್ಣ ದೇಶ, ಹೀಗಿದ್ದರೂ ಇಸ್ರೇಲ್ ಸೇನೆಯ ವಿಚಾರದಲ್ಲಿ ತುಂಬಾ ಬಲಿಷ್ಠವಾಗಿದೆ. ಅದರಲ್ಲೂ ಇಸ್ರೇಲ್ ಬೆನ್ನಿಗೆ ಅಮೆರಿಕ ಸೇರಿದಂತೆ ಘಟಾನುಘಟಿ ದೇಶಗಳೇ ನಿಂತುಕೊಂಡಿವೆ. ಹೀಗಿದ್ದರೂ ಇಸ್ರೇಲ್ ವಿರುದ್ಧ ಲೆಬನಾನ್ ಈಗ ರಾಕೆಟ್ ದಾಳಿ ನಡೆಸಿ, 7 ಜನರನ್ನು ಕೊಂದು ಹಾಕಿರುವ ಆರೋಪ ಕೇಳಿ ಬಂದಿದೆ. ಹಿಜ್ಬುಲ್ಲಾ ಬಂಡುಕೋರರ ಗುಂಪು ಈ ರೀತಿ ಅಟ್ಯಾಕ್ ಮಾಡಿ ಇಸ್ರೇಲ್‌ನಲ್ಲಿ 7 ಜನರನ್ನ ಕೊಂದು ಹಾಕಿದೆ ಎಂದು ಆರೋಪ ಕೂಡ ಮಾಡಲಾಗಿದೆ. ಲೆಬನಾನ್ ಕಡೆಯಿಂದ ಹಾರಿ ಬಂದ ರಾಕೆಟ್‌ಗಳು ಉತ್ತರ ಇಸ್ರೇಲ್ ಭಾಗಕ್ಕೆ ಬಂದು ಬಡಿದಿವೆ ಎಂದು ಗಂಭೀರ ಆರೋಪ ಕೇಳಿಬಂದಿದೆ.

ಮರುದಾಳಿ ನಡೆಸಿದ ಇಸ್ರೇಲ್ ಸೇನೆ!
ತನ್ನ ಮೇಲೆ ಹೀಗೆ ಲೆಬನಾನ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇಸ್ರೇಲ್ ಕೂಡ ತಕ್ಕ ಉತ್ತರ ನೀಡಿದ್ದು, ಹತ್ತಾರು ಜನರು ಇಸ್ರೇಲ್ ಮಿಲಿಟರಿ ದಾಳಿಗೆ ಲೆಬನಾನ್ ನೆಲದಲ್ಲಿ ಜೀವ ಬಿಟ್ಟ ಆರೋಪ ಕೇಳಿ ಬಂದಿದೆ. ಇಸ್ರೇಲ್ ಸೇನೆಯ ದಾಳಿ ಅದೆಷ್ಟು ಜೋರಾಗಿದೆ ಅಂದ್ರೆ, ಇದೀಗ ಲೆಬನಾನ್ ಜನರು ಜೀವ ಉಳಿಸಿಕೊಳ್ಳಲು ಪದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಅದ್ರಲ್ಲೂ ಹಿಜ್ಬುಲ್ಲಾ ಬಂಡುಕೋರರು ಜನರು ಹೆಚ್ಚಾಗಿ ವಾಸ ಇರುವ ಜಾಗದಿಂದಲೇ ಕೂತು ಹೀಗೆ, ಇಸ್ರೇಲ್ ವಿರುದ್ಧ ದಾಳಿ ನಡೆಸುತ್ತಿರುವ ಆರೋಪ ಮಾಡಲಾಗುತ್ತಿದೆ. ಮತ್ತೊಂದ್ಕಡೆ ಜೀವ ಭಯದಲ್ಲಿ ಈಗಾಗಲೇ ಲಕ್ಷಾಂತರ ಜನ ಲೆಬನಾನ್ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಇದು ಸಾಲದು ಎಂಬಂತೆ ಈಗಿನ ಪರಿಸ್ಥಿತಿ ನೋಡಿದರೆ ಮತ್ತಷ್ಟು ಜನರು ಲೆಬನಾನ್ ಬಿಟ್ಟು ಓಡಿ ಹೋಗುವ ಅಪಾಯ ಕಾಡುತ್ತಿದೆ.
ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ...
ಹಿಜ್ಬುಲ್ಲಾ ಈಗ ಇಸ್ರೇಲ್ ಸೇನೆ ಜೊತೆ ರಾಜಿ ಮಾಡಿಕೊಳ್ಳಲು ಅಥವಾ ಶರಣಾಗಲು ಸಿದ್ಧವಿಲ್ಲ. ಇದೇ ಕಾರಣಕ್ಕೆ ಇಸ್ರೇಲ್ ಮಿಲಿಟರಿ ಕೂಡ ಹಿಜ್ಬುಲ್ಲಾ ಬಂಡುಕೋರರ ಹೆಣ ಬೀಳಿಸೋಕೆ, ಅತ್ಯಂತ ಭಯಾನಕ ಅಸ್ತ್ರಗಳನ್ನೇ ಬಳಕೆ ಮಾಡುತ್ತಿದೆ ಇಸ್ರೇಲ್ ಸೇನೆ. ಆದ್ರೆ ಇಬ್ಬರ ನಡುವೆ ನಡೆಯುವ ಈ ಬಡಿದಾಟಕ್ಕೆ ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಈ ಬಡಿದಾಟ ಇಲ್ಲಿಗೆ ನಿಲ್ಲೋದಿಲ್ವಾ? ಎಂಬ ಪ್ರಶ್ನೆ ಕೂಡ ಮೂಡಿದೆ.












Click it and Unblock the Notifications