NASA Satellite: 38 ವರ್ಷಗಳ ಬಳಿಕ ಭೂಮಿಗೆ ಬಿದ್ದ ನಾಸಾದ ನಿವೃತ್ತ ಉಪಗ್ರಹ: ಮಾಹಿತಿ ಇಲ್ಲಿದೆ

ನ್ಯೂಯಾರ್ಕ್, ಜ. 10: ಸುಮಾರು ನಾಲ್ಕು ದಶಕಗಳ ನಂತರ ಬಾಹ್ಯಾಕಾಶದಲ್ಲಿ ನಿಷ್ಕ್ರಿಯಗೊಂಡಿದ್ದ ನಾಸಾ ಉಪಗ್ರಹವೊಂದು ಯಾವುದೇ ಅಪಾಯವಿಲ್ಲದೆ ಭೂಮಿಗೆ ಬಿದ್ದಿದೆ ಎಂದು ನಾಸಾ ತಿಳಿಸಿದೆ.

38 ವರ್ಷಗಳ ಕಾಲ ಭೂಮಿಯನ್ನು ಸುತ್ತು ಹಾಕಿದ್ದ ಇಆರ್‌ಬಿಎಸ್‌ (ERBS) ಎಂದು ಕರೆಯಲ್ಪಡುವ ಅರ್ತ್ ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್ ಅನ್ನು 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್‌ನಲ್ಲಿ ಉಡಾವಣೆ ಮಾಡಲಾಗಿತ್ತು.

ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತವು 5,400 ಪೌಂಡ್ (2,420 ಕಿಲೋಗ್ರಾಂಗಳು) ಉಪಗ್ರಹವು ಬೇರಿಂಗ್ ಸಮುದ್ರದ ಮೇಲೆ ಬಿದ್ದಿದೆ ಎಂದು ಅಮೆರಿಕಾದ ರಕ್ಷಣಾ ಇಲಾಖೆ ದೃಢಪಡಿಸಿದೆ ಎಂದು ನಾಸಾ ಮಾಹಿತಿ ನೀಡಿದೆ.

After 38 Years In Space Retired NASA Satellite Falls harmlessly Back To Earth

ಈ ಹಿಂದೆಯೇ ಉಪಗ್ರಹ ಭೂಮಿಗೆ ಬೀಳುವ ಬಗ್ಗೆ ನಾಸಾ ಮಾಹಿತಿ ನೀಡಿತ್ತು. 5,400 ಪೌಂಡ್ (2,450 ಕಿಲೋಗ್ರಾಂ) ಉಪಗ್ರಹವು ಭೂಮಿ ವಾತಾವರಣಕ್ಕೆ ಮರಳಿ ಬರುವಾಗ ಬಹುತೇಕ ಉರಿದು ಹೋಗುತ್ತದೆ. ಆದರೆ, ಕೆಲವೇ ಕೆಲವು ತುಣುಕುಗಳು ಭೂಮಿಯ ಮೇಲೆ ಬೀಳುಳುತ್ತದೆ . ಇದರಿಂದ 9, 400 ಜನರಲ್ಲಿ ಒಬ್ಬರಿಗೆ ಮಾತ್ರ ಗಾಯವಾಗಬಹುದು ಎಂದಿತ್ತು. ಆದರೆ, ಅಂತತಹ ಯಾವುದೇ ಅಪಾಯವಿಲ್ಲದೇ ಉಪಗ್ರಹವೂ ಬೇರಿಂಗ್ ಸಮುದ್ರಕ್ಕೆ ಬಿದ್ದಿದೆ.

ಇಆರ್‌ಬಿಎಸ್‌ ಎಂದು ಕರೆಯಲ್ಪಡುವ ಈ ಬಾಹ್ಯಾಕಾಶ ನೌಕೆಯು ಭೂಮಿಯು ಸೂರ್ಯನಿಂದ ಹೀರಿಕೊಳ್ಳುವ ಶಕ್ತಿ ಮತ್ತು ಹೊರಸೂಸೂವ ಶಕ್ತಿಯ ಬಗ್ಗೆ ಅಧ್ಯಯನ ನಡೆಸುವ ಅರ್ತ್ ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್ ಪ್ರಯೋಗದ ಭಾಗವಾಗಿತ್ತು. ಇದರ ಜೀವಿತಾವಧಿ ಕೇವಲ ಎರಡು ವರ್ಷಗಳಾಗಿತ್ತು. ಆದರೆ, ಇದು 2005 ರವರೆಗೆ ಕಾರ್ಯನಿರ್ವಹಿಸಿತ್ತು. ಬಳಿಕ ಅದು ನಿಷ್ಕ್ರಿಯಗೊಂಡು ಬಾಹ್ಯಾಕಾಶದಲ್ಲಿಯೇ ಸುತ್ತುತ್ತಿತ್ತು.

1984 ರಲ್ಲಿ ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸ್ಯಾಲಿ ರೈಡ್, ನೌಕೆಯ ರೋಬೋಟ್ ಆರ್ಮ್ ಅನ್ನು ಬಳಸಿಕೊಂಡು ಉಪಗ್ರಹವನ್ನು ಕಕ್ಷೆಗೆ ಬಿಡುಗಡೆ ಮಾಡಿದ್ದರು. ಸ್ಯಾಲಿ ರೈಡ್ ಜೊತೆ ಕ್ಯಾಥರಿನ್ ಸುಲ್ಲಿವನ್ ಗಗನಯಾತ್ರೆ ಮಾಡಿದ್ದರು. 2012 ರಲ್ಲಿ ನಿಧನರಾದ ಸ್ಯಾಲಿ ರೈಡ್‌ಗೆ ಇದು ಎರಡನೇ ಮತ್ತು ಅಂತಿಮ ಬಾಹ್ಯಾಕಾಶ ಯಾನವಾಗಿತ್ತು ಎಂದು ನಾಸಾ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+