Lok Sabha election: ಈ ಬಾರಿ ಇದೇ ಪಕ್ಷ ಗದ್ದುಗೆಗೆ ಏರಲಿದೆ: ಯೋಗೇಂದ್ರ ಯಾದವ್
ಭಾರತದಲ್ಲಿ ಇಂದು ಆರನೇ ಹಂತದ ಮತದಾನ ನಡೆಯುತ್ತಿದೆ. ಈಗಾಗಲೇ ಐದು ಹಂತದ ಚುನಾವಣೆಗಳು ಮುಗಿದಿವೆ. ಅಭ್ಯರ್ಥಿಗಳ ಭವಿಷ್ಯವನ್ನು ಮತಗಟ್ಟೆಯಲ್ಲಿ ಭದ್ರವಾಗಿವೆ. ಇನ್ನು ಜೂನ್ 4ರಂದು ಮತ ಏಣಿಕೆ ಆರಂಭವಾಗಲಿದೆ. ಈ ಬೆನ್ನಲ್ಲೆ ರಾಜಕೀಯ ತಂತ್ರಜ್ಞರು ತಮ್ಮ ಅನಿಸಿಕೆ ಅಭಿಪ್ರಾಯ ನೀಡಿದ್ದಾರೆ. ಇತ್ತೀಚಿಗೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿಕೆ ನೀಡಿದ ಬೆನ್ನಲ್ಲೆ ಯೋಗೇಂದ್ರ ಯಾದವ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ದೇಶದ ಜನರ ನಾಡಿ ಮಿಡಿತವನ್ನು ಲೆಕ್ಕಾಚಾರ ಹಾಕಿ ಪ್ರಶಾಂತ್ ಕಿಶೋರ್ ತಮ್ಮ ಅಭಿಪ್ರಾಯ ನೀಡಿದ್ದರು. ಈಗ ಚುನಾವಣಾ ತಜ್ಞ ಯೋಗೇಂದ್ರ ಯಾದವ್ ಸಹ ಬೆಳಕು ಚೆಲ್ಲಿದ್ದಾರೆ. ಇಬ್ಬರೂ ತಮ್ಮ ತಮ್ಮ ಅನಿಸಿಕೆಗಳನ್ನು ನೀಡಿದ್ದಾರೆ. ಇಬ್ಬರ ಅಂಕಿ ಅಂಗಳಲ್ಲಿ ವ್ಯತ್ಯಾಸ ಏರುಪೇರು ಆಗುವುದು ಸಹಜ. ಆದರೆ ತೀರ್ಪು ಮಾತ್ರ ಒಂದೇ ಆಗಿದೆ.

ಇಬ್ಬರೂ ಹೇಳಿದ್ದು ಒಂದೇ
ಪ್ರಶಾಂತ್ ಕಿಶೋರ್ ಹಾಗೂ ಯೋಗೇಂದ್ರ ಯಾದವ್ ಇಬ್ಬರ ಹೇಳಿಕೆಯನ್ನು ಆಧಾರಿಸಿ ಹೇಳುವುದಾದರೆ, ಈ ಬಾರಿಯೂ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿ ಪಕ್ಷಗಳು ಮ್ಯಾಜಿಕ್ ನಂಬರ್ ದಾಟಿ ಅಧಿಕಾರದ ಗದ್ದುಗೆಗೆ ಏರುತ್ತವೆ ಎಂದಿದ್ದರು. ಇಬ್ಬರೂ ಗೆಲುವಿನ ಲೆಕ್ಕಾಚಾರದಲ್ಲಿ ಬೇರೆ ಬೇರೆ ಅಂಕಿಗಳನ್ನು ನೀಡಿದ್ದು ಸುಳ್ಳಲ. ಆದರೆ ಫಲಿತಾಂಶ ಒಂದೇ ಇದೆ.
ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತದೆ
ಪ್ರಶಾಂತ್ ಕಿಶೋರ್ ಅವರು ಯೋಗೇಂದ್ರ ಯಾದವ್ ಅವರ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಲೋಕಸಭೆ ಚುನಾವಣೆಯ ಫಲಿತಾಂಶಗಳನ್ನು ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಈ ಬಾರಿ 240 ರಿಂದ 260 ಸ್ಥಾನಗಳನ್ನು ಗೆಲ್ಲಬಹುದು ಎಂದು ಅವರು ಅಂದಾಜಿಸಿದ್ದಾರೆ, ಆದರೆ ಎನ್‌ಡಿಎ ಮಿತ್ರಪಕ್ಷಗಳು 35 ರಿಂದ 45 ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಯಾದವ್ ಮತವಾಗಿದೆ.

ದೇಶದ ಚುನಾವಣೆಗಳು ಮತ್ತು ಸಾಮಾಜಿಕ-ರಾಜಕೀಯ ವಿಷಯಗಳನ್ನು ಅರ್ಥಮಾಡಿಕೊಳ್ಳುವವರಲ್ಲಿ ವಿಶ್ವಾಸಾರ್ಹ ಮುಖವಾಗಿರುವ ಯೋಗೇಂದ್ರ ಯಾದವ್ ಅವರು 2024 ರ ಲೋಕಸಭೆ ಚುನಾವಣೆಯ "ಅಂತಿಮ ಮೌಲ್ಯಮಾಪನ" ವನ್ನು ಹಂಚಿಕೊಂಡಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಬರೆದುಕೊಂಡಿದ್ದಾರೆ.
ಮ್ಯಾಜಿಕ್ ನಂಬರ್ ದಾಟುವುದು ಯಾರು?
ಕೇಂದ್ರದಲ್ಲಿ ಸರ್ಕಾರ ರಚಿಸಲು 272 ಮ್ಯಾಜಿಕ್ ನಂಬರ್ ಆಗಿದೆ. ಯೋಗೇಂದ್ರ ಅವರ ಪ್ರಕಾರ ಬಿಜೆಪಿ 240-260 ಸ್ಥಾನಗಳನ್ನು ಮತ್ತು ಎನ್‌ಡಿಎ ಮಿತ್ರಪಕ್ಷಗಳು 35-45 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿಸಿದ್ದಾರೆ. 2024ರ ಲೋಕಸಭಾ ಚುನಾವಣೆಗಳ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 275-305 ಸ್ಥಾನ ಗೆಲ್ಲಬಹುದು ಎಂದು ಯೋಗೇಂದ್ರ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಶಾಂತ್ ಕಿಶೋರ್ ಹೇಳಿದ್ದೇನು ?
ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಬಿಜೆಪಿ ಸುಮಾರು 300 ಸ್ಥಾನ ಗೆಲ್ಲಬಹುದು. ಅಲ್ಲದೆ ಬಿಜೆಪಿ 370 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ. ಬಿಜೆಪಿ ವೋಟ್ ಶೇರಿಂಗ್‌ನಲ್ಲಿ ಏರುಗತಿ ಕಂಡು ಬರುತ್ತದೆ. ಆದರೆ ಸೀಟ್‌ಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುವುದಿಲ್ಲ. 2019ರ ಲೋಕಸಭಾ ಚುನಾವಣೆಯ ಆಸು ಪಾಸಿನಲ್ಲೇ ಈ ಬಾರಿಯ ಚುನಾವಣಾ ಫಲಿತಾಂಶವೂ ಇರಲಿದೆ ಎಂದು ತಿಳಿಸಿದ್ದರು.
ಪ್ರಶಾಂತ್ ಕಿಶೋರ್ ಇನ್ನೊಂದು ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬದಲಿಸಬಹುದಾದ ನಾಲ್ಕು ಬದಲಾವಣೆಗಳ ಬಗ್ಗೆಯೂ ಬೆಳಕು ಚೆಲ್ಲಿದ್ದರು.
ಯೋಗೇಂದ್ರ ಯಾದವ್ ಅವರ ಪ್ರಕಾರ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ INDIA ಮೈತ್ರಿ ಕೂಟಗಳು ಅಚ್ಚರಿಯ ಫಲಿತಾಂಶವನ್ನು ನೀಡಿದ್ದೇ ಆದಲ್ಲಿ ಬದಲಾವಣೆ ಸಾಧ್ಯ. ಇಲ್ಲದೆ ಇದ್ದರೆ ಎನ್‌ಡಿಎ ಸುಲಭವಾಗಿ ಗದ್ದುಗೆ ಏರಲಿದೆ ಎಂದು ತಿಳಿಸಿದ್ದಾರೆ.












Click it and Unblock the Notifications