Sunita Williams: ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಜೊತೆಗಿದ್ದ ದೇವರ ವಿಗ್ರಹ ಯಾವುದು?
ಸರಿಸುಮಾರು 9 ತಿಂಗಳು ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಇದೀಗ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಪ್ರಸ್ತುತ ಅವರ ಆರೋಗ್ಯ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಮನೆಗೆ ವಾಪಾಸ್ ಆಗಲಿದ್ದಾರೆ.
ಹೌದು... ಗಗನಯಾತ್ರಿ ಸುನೀತಾ ಮಿಲಿಯಮ್ಸ್ ತಾವು ಸತತವಾಗಿ ಬಾಹ್ಯಾಕಾಶದಲ್ಲಿ 9 ತಿಂಗಳು ಸಿಲುಕಿಕೊಳ್ಳುತ್ತಾರೆಂದು ಊಹಿಸಿರಲಿಲ್ಲ. ಆದರೂ ಕೂಡ ಈ ಸಮಯವನ್ನು ಅವರು ತಾಳ್ಮೆಯಿಂದ ಬಾಹ್ಯಾಕಾಶದಲ್ಲಿ ಕಳೆದರು. ಹೀಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ದೀರ್ಘಕಾಲ ಸಿಲುಕಿಕೊಂಡಿದ್ದಾಗ ಸುನೀತಾ ವಿಲಿಯಮ್ಸ್‌ಗೆ ಆಧ್ಯಾತ್ಮಿಕ ಶಕ್ತಿಯಿಂದ ಬೆಂಬಲ ಸಿಕ್ಕಿದೆ. ಹಾಗಾದರೆ ಸುನೀತಾ ಅವರಿಗೆ ಸಿಕ್ಕ ಆ ಶಕ್ತಿ ಯಾವುದು? ಸುನೀತಾ ತಮ್ಮೊಂದಿಗೆ ಇಟ್ಟುಕೊಳ್ಳುತ್ತಿದ್ದ ಪುಸ್ತಕ ಹಾಗೂ ವಿಗ್ರಹ ಯಾವುದು? ಸತತ ಒಂಬತ್ತು ತಿಂಗಳು ಸುನೀತಾ ಅವರ ಮಾನಸಿಕ ಸ್ಥಿತಿ ಹಾಗೂ ಆರೋಗ್ಯವನ್ನು ಕಾಪಾಡಿದ ಆ ಶಕ್ತಿ ಯಾವುದು ಅನ್ನೋದು ಮಾತ್ರ ಪವಾಡ.

ಹಿಂದೂ ದೇವರನ್ನು ನಂಬುವ ಸುನೀತಾ ಮಿಲಿಯಮ್ಸ್
ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅಮೆರಿಕದಲ್ಲಿ ಬೆಳೆದರು. ಆದರೂ ಕೂಡ ಅವರು ಹಿಂದೂ ಧರ್ಮವನ್ನು ನಂಬುತ್ತಾರೆ. ವಾಸ್ತವವಾಗಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಜುಲಾಸನ್ ಗ್ರಾಮ ಸುನೀತಾ ವಿಲಿಯಮ್ಸ್ ಅವರ ಪೂರ್ವಜರ ಗ್ರಾಮವಾಗಿದೆ. ಅವರ ತಂದೆ ಭಾರತದಲ್ಲಿ ನರವಿಜ್ಞಾನಿಯಾದ ನಂತರ ಅಮೆರಿಕದಲ್ಲಿ ನೆಲೆಸಿದರು.
ಮೂಲತ: ಭಾರತೀಯರಾಗಿದ್ದರಿಂದ ಹಿಂದೂ ದೇವರನ್ನು ಸುನೀತಾ ನಂಬುತ್ತಾರೆ. ಹೀಗಾಗಿ ಪ್ರತೀ ಬಾರಿ ಅವರು ಬಾಹ್ಯಾಕಾಶಕ್ಕೆ ಹೋದಾಗಲೆಲ್ಲಾ ಅವರು ತಮ್ಮೊಂದಿಗೆ ಹಿಂದೂ ಪವಿತ್ರ ಗ್ರಂಥಗಳು ಹಾಗೂ ದೇವರ ವಿಗ್ರಹವನ್ನು ಅವರೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ಬಾರಿಯೂ ಅವರು ತಮ್ಮೊಂದಿಗೆ ವಿಗ್ರಹವೊಂದನ್ನು ತೆಗೆದುಕೊಂಡು ಹೋಗಿದ್ದರು.
ವಿಶೇಷ ಅಂದರೆ ಸುನೀತಾ ವಿಲಿಯಮ್ಸ್ ಅವರ ಪತಿ ಮೈಕೆಲ್ ಜೆ ವಿಲಿಯಮ್ಸ್ ಕೂಡ ಹಿಂದೂ ಪದ್ಧತಿಗಳನ್ನು ಅನುಸರಿಸುತ್ತಾರೆ. ಸುನೀತಾ ವಿಲಿಯಮ್ಸ್ ಮೂರು ಬಾರಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ, ಪ್ರತಿ ಬಾರಿಯೂ ದೇವರ ಪ್ರತಿಮೆಗಳು ಮತ್ತು ಧಾರ್ಮಿಕ ಸಂಕೇತಗಳನ್ನು ಸುನೀತಾ ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಬಾಹ್ಯಾಕಾಶದಲ್ಲಿ ವಿಘ್ನವಿನಾಯಕನ ಪವಾಡ
ಈ ಹಿಂದೆ ಸುನೀತಾ ವಿಲಿಯಮ್ಸ್ ತಮ್ಮ ಬಾಹ್ಯಾಕಾಶ ಯಾನದ ಸಮಯದಲ್ಲಿ ಶಿವನ ವಿಗ್ರಹವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು. ಈ ಬಾರಿ ಅವರು ತಮ್ಮೊಂದಿಗೆ ಗಣೇಶನ ವಿಗ್ರಹವನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದ್ದರು. ಒಂಬತ್ತು ತಿಂಗಳ ಕಾಲ ಸುನೀತಾ ವಿಘ್ನವಿನಾಯಕನ ಆರಾಧನೆ ಮಾಡಿದ್ದಾರೆ. ಸಂಕಷ್ಟ ನಿವಾರಕನ ಜಪ ಮಾಡಿದ್ದಾರೆ. ಇದೇ ಶಕ್ತಿ ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತಂದಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಸುನೀತಾ ಅವರು ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಾಗ ಹೆದರದೆ, ಮಾನಸಿಕವಾಗಿ ಕುಗ್ಗದೆ, ಪ್ರತೀ ಗಂಟೆ, ಪ್ರತೀ ಗಳಿಗೆಯೂ ಕೂಡ ಇದೇ ಶಕ್ತಿ ಕಾಪಾಡಿದೆ ಎಂದು ಹೇಳಲಾಗುತ್ತದೆ.
ಮೊದಲ ಬಾರಿಗೆ ಭಗವದ್ಗೀತೆ ತೆಗೆದುಕೊಂಡು ಹೋಗಿದ್ದ ಸುನೀತಾ
ಸುನೀತಾ ವಿಲಿಯಮ್ಸ್ ಮೊದಲ ಬಾರಿಗೆ ಡಿಸೆಂಬರ್ 2006ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಿದರು. ನಂತರ ಅವರು ಜೂನ್ 2007 ರವರೆಗೆ ISS ನಲ್ಲಿ ಫ್ಲೈಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಅವರು ಭಗವದ್ಗೀತೆಯ ಪ್ರತಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋದರು. ಇದಾದ ನಂತರ ಸುನೀತಾ ವಿಲಿಯಮ್ಸ್ ಜುಲೈ 2012 ರಲ್ಲಿ ಬಾಹ್ಯಾಕಾಶ ಪ್ರವಾಸಕ್ಕೆ ಹೋದರು. ಈ ಬಾರಿ ಅವರು ನವೆಂಬರ್ 2012 ರವರೆಗೆ ISS ನಲ್ಲಿಯೇ ಇದ್ದರು. ಈ ಬಾರಿ ಅವರು ಓಂಕಾರದ ಸಂಕೇತವಾದ ಶಿವನ ವಿಗ್ರಹ ಮತ್ತು ಉಪನಿಷತ್ತಿನ ಪ್ರತಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು.
ಭಗವದ್ಗೀತೆ ಬಗ್ಗೆ ಸುನೀತಾ ಹೇಳಿದ್ದೇನು?
ಈ ಹಿಂದೆ ಮಾಧ್ಯಮವೊಂದರೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿದ್ದ ಸುನೀತಾ, ಬಾಹ್ಯಾಕಾಶ ಯಾತ್ರೆಯ ಸಮಯದಲ್ಲಿ ಧಾರ್ಮಿಕ ಪುಸ್ತಕಗಳು ಗಮನ ಕೇಂದ್ರಿಕರಿಸಲು ಸಹಾಯ ಮಾಡುತ್ತವೆ ಎಂದು ಹೇಳಿದ್ದರು. ಅಲ್ಲದೆ ಈ ಪವಿತ್ರ ಗ್ರಂಥಗಳು ಬಾಹ್ಯಾಕಾಶದ ಏಕಾಂತ ಪರಿಸರದಲ್ಲಿ ಶಾಂತಿ ಮತ್ತು ಉದ್ದೇಶವನ್ನು ಕಂಡುಕೊಳ್ಳಲು ಅವರಿಗೆ ಸಹಾಯ ಮಾಡುತ್ತವೆ ಎಂದಿದ್ದರು.

ಸುನೀತಾ ಜೊತೆಗಿತ್ತು ಗಣೇಶ ವಿಗ್ರಹ
ಸುನೀತಾ ಜೂನ್ 2024 ರಲ್ಲಿ ತಮ್ಮ ಪಾಲುದಾರ ಬುಚ್ ವಿಲ್ಮೋರ್ ಅವರೊಂದಿಗೆ ಎಂಟು ದಿನಗಳ ಕಾಲ ISS ಗೆ ತೆರಳಿದರು. ಇದು ಸುನೀತಾ ಅವರ ಮೂರನೇ ಬಾಹ್ಯಾಕಾಶ ಪ್ರಯಾಣವಾಗಿತ್ತು. ಆದರೆ ತಾಂತ್ರಿಕ ದೋಷಗಳಿಂದಾಗಿ ಈ ಕಾರ್ಯಾಚರಣೆಯು 9 ತಿಂಗಳಿಗಿಂತ ಹೆಚ್ಚು ಕಾಲ ನಡೆಯಿತು. ಈ ಬಾರಿ ಅವರು ತಮ್ಮೊಂದಿಗೆ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗಿದ್ದರು. ಅವರು ಅದರ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಮತ್ತೊಂದು ವಿಚಾರ ಅಂದರೆ ಸುನೀತಾ ಅವರು ಬಾಹ್ಯಾಕಾಶದಿಂದಲೇ ಕುಂಭಮೇಳ ಚಿತ್ರಗಳನ್ನು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಅವರು ದೀಪಾವಳಿಯನ್ನು ಬಾಹ್ಯಾಕಾಶದಿಂದಲೇ ಆಚರಿಸಿದ್ದರು ಎಂದು ಫೆಬ್ರವರಿಯಲ್ಲಿ ಕುಂಭಮೇಳಕ್ಕೆ ಆಗಮಿಸಿದ್ದ ಸುನೀತಾ ವಿಲಿಯಮ್ಸ್ ಅವರ ಸೋದರಸಂಬಂಧಿ ಫಲ್ಗುಣಿ ಪಾಂಡ್ಯ ಹೇಳಿದ್ದರು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications