ಋಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಪ್ರವಾಸಿಗರ ನಡುವೆ ಹೊಡೆದಾಟ- ವಿಡಿಯೋ
ಉತ್ತರಾಖಂಡದ ಋಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಪ್ರವಾಸಿಗರ ನಡುವೆ ಜಗಳದಿಂದ ಹೊಡೆದಾಟ ನಡೆದಿದೆ. ರಿವರ್ ರಾಫ್ಟಿಂಗ್ ವೇಳೆ ಪ್ರವಾಸಿಗರ ನಡುವೆ ನಡೆದ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಂಗಾ ನದಿಯ ಮಧ್ಯದಲ್ಲಿ ಪ್ರವಾಸಿಗರ ಗುಂಪುಗಳು ಹಿಂಸಾತ್ಮಕವಾಗಿ ಒಬ್ಬರನ್ನೊಬ್ಬರು ಪ್ಯಾಡ್ಲ್‌ಗಳಿಂದ ಹೊಡೆದುಕೊಳ್ಳುವುದು ವೀಡಿಯೋದಲ್ಲಿ ಕಂಡು ಬಂದಿದೆ. ಈ ಘಟನೆ ಶನಿವಾರ ನಡೆದಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
"ನಿನ್ನೆ ರಿಷಿಕೇಶದಲ್ಲಿ ರಿವರ್ ರಾಫ್ಟಿಂಗ್ ಸಂದರ್ಭದಲ್ಲಿ ರಾಫ್ಟರ್‌ಗಳ ನಡುವೆ ಹಿಂಸಾತ್ಮಕ ಗಲಾಟೆ ನಡೆದಿದೆ" ಎಂದು ಎಎನ್‌ಐ ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.

ವೀಡಿಯೊ ನೋಡಿ:
Uttarakhand | A violent scuffle broke out among rafters during river rafting in Rishikesh, yesterday. On the incident, SP Tehri Garhwal, Navneet Bhullar said that the police are investigating the incident after which a case will also be registered in this matter. pic.twitter.com/dRAs4MiUB9
— ANI UP/Uttarakhand (@ANINewsUP) May 21, 2023
ವಾಸ್ತವವಾಗಿ ಬೇಸಿಗೆಯಲ್ಲಿ ಜನರು ರಾಫ್ಟಿಂಗ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಗಂಗಾನದಿ ಕೌಡಿಯಾಲ-ಮುನಿಕಿರೆಟಿ ಪರಿಸರ ಪ್ರವಾಸೋದ್ಯಮ ವಲಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿನ ನಡೆದ ಘಟನೆ ಸದ್ಯ ಆತಂಕವನ್ನು ಹುಟ್ಟುಹಾಕಿದೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಗಂಗಾನದಿಯ ಅಲೆಗಳಲ್ಲಿ ತೇಲುತ್ತಿರುವ ಎರಡು ತೆಪ್ಪಗಳಲ್ಲಿ ಸವಾರಿ ಮಾಡುವ ಪ್ರವಾಸಿಗರು ಮತ್ತು ಮಾರ್ಗದರ್ಶಕರು ಒಬ್ಬರಿಗೊಬ್ಬರು ಪ್ಯಾಡ್ಲ್ಗಳಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಸ್ಥಳೀಯರ ಪ್ರಕಾರ, ರಾಫ್ಟ್ ಗೈಡ್ ತನ್ನ ಗೋ ಪ್ರೊ ಕ್ಯಾಮೆರಾದಿಂದ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ತೆಪ್ಪಗಳಲ್ಲಿ ದೆಹಲಿ-ಎನ್‌ಸಿಆರ್‌ನಿಂದ ಎರಡಕ್ಕೂ ಹೆಚ್ಚು ಪ್ರವಾಸಿಗರಿದ್ದರು ಎಂದು ಹೇಳಲಾಗುತ್ತಿದೆ. ಈ ತೆಪ್ಪಗಳ ಮಾರ್ಗದರ್ಶಕರ ನಡುವೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಮೊದಲಿಗೆ ಗೈಡ್‌ಗಳು ಒಬ್ಬರಿಗೊಬ್ಬರು ಪ್ಯಾಡ್‌ಗಳಿಂದ ಹಲ್ಲೆ ನಡೆಸಿದ್ದು, ಬಳಿಕ ಪ್ರವಾಸಿಗರು ಕೂಡ ಹಲ್ಲೆಗೆ ಮುಂದಾಗಿದ್ದಾರೆ.
ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ರಾಫ್ಟಿಂಗ್ ಪ್ಯಾಡಲ್‌ನಿಂದ ಇನ್ನೊಬ್ಬರ ಮೇಲೆ ಕೆಟ್ಟದಾಗಿ ದಾಳಿ ಮಾಡುವುದನ್ನು ಕಾಣಬಹುದು. ಜೊತೆಗೆ ಪದೇ ಪದೇ ಬಲವಾಗಿ ಹೊಡೆಯುವುದು ಕಂಡುಬಂದಿದೆ. ದಾಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮೂವರು ವ್ಯಕ್ತಿಗಳು ತೆಪ್ಪದಿಂದ ಹಾರಿ ಗಂಗಾ ನದಿಗೆ ಧುಮುಕಿದ್ದಾರೆ.

ನದಿಗೆ ಧುಮುಕಿದ ಮೂವರು ಲೈಫ್ ಜಾಕೆಟ್‌ಗಳನ್ನು ಧರಿಸಿದ್ದರು ಎನ್ನಲಾಗಿದೆ. ಬಂಡೆಗಳ ನಡುವೆ ಅಪಾಯಕಾರಿ ಹೊಡೆದಾಟದಲ್ಲಿ ಮೂವರು ನದಿಗೆ ಧುಮುಕಿದ್ದು ಯಾವುದೇ ಪ್ರಾಣ ಸಂಭವಿಸಿಲ್ಲ. ಪ್ರವಾಸಿಗರು ಮತ್ತು ರಾಫ್ಟಿಂಗ್ ಮಾರ್ಗದರ್ಶಕರಿಗೆ ಇದು ತೀವ್ರ ಅಪಾಯವನ್ನುಂಟುಮಾಡಿದೆ.
ಘಟನೆಯ ಕುರಿತು ಎಸ್ಪಿ ನವನೀತ್ ಭುಲ್ಲರ್ ಅವರು ತನಿಖೆ ನಡೆಸುತ್ತಿದ್ದಾರೆ. ವಿಡಿಯೋವನ್ನು ಆಧರಿಸಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ, ಆದರೆ ಇನ್ನೂ ಜಗಳಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಟ್ವಿಟರ್‌ನಲ್ಲಿ ವೀಡಿಯೊಗೆ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವಾರು ಬಳಕೆದಾರರು ಪ್ರವಾಸಿಗರನ್ನು ಆತಂಕ ಸೃಷ್ಟಿಸಿದ್ದಕ್ಕೆ ದೂಷಿಸಿದ್ದಾರೆ.

"ಈ ರಾಸ್ಕಲ್‌ಗಳು ಯಾರು? ಅವರ ಹೊಡೆದಾಟದ ತೀವ್ರತೆ ನೋಡಿದರೆ ಅವರು ದರೋಡೆಕೋರರು ಎಂದು ತೋರುತ್ತದೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
"ಪ್ರತಿಯೊಂದು ರಾಜ್ಯದ ಪ್ರವಾಸಿಗರು ಪ್ರತಿ ಪ್ರವಾಸಿ ಸ್ಥಳದಲ್ಲಿ ತಮ್ಮ ಕೊಳೆಯನ್ನು ಹೊತ್ತು ತರುತ್ತಾರೆ" ಎಂದು ಮತ್ತೊಬ್ಬರು ಹೇಳಿದರು.
"ಇದು ಅತ್ಯಂತ ನಾಚಿಕೆಗೇಡಿನ ಘಟನೆಯಾಗಿದ್ದು, ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಮತ್ತು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಉತ್ತರಾಖಂಡ - ಸರಳವಾಗಿ ಸ್ವರ್ಗವಾಗಿದೆ. ಈ ರಾಜ್ಯ ಯಾವುದೇ ಹಿಂಸಾಚಾರಕ್ಕೆ ಸ್ಥಳ ಆಗಬಾರದು'' ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.
"ನಾನು ಇಂತಹ ಮೂರ್ಖರ ನಡುವೆ ಜನಿಸಿದ್ದೇನೆ. ನಾನು ಇಂತವರ ನಡುವೆ ಇದ್ದೇನೆ ಎಂದು ನಾನು ತುಂಬಾ ಕೃತಜ್ಞನಾಗಿದ್ದೇನೆ" ಎಂದು ನಾಲ್ಕನೆಯವರು ವ್ಯಂಗ್ಯವಾಗಿ ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ವಿಡಿಯೋ 8,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಇಸ್ರೇಲ್-ಯುಎಸ್ ಜಂಟಿ ದಾಳಿ ಅಬ್ಬರ: ಇರಾನ್ಗೆ ಉತ್ತರಾಧಿಕಾರಿ ನೇಮಕ, ಇಂದಿನ ಪ್ರಮುಖಾಂಶಗಳು ಇಲ್ಲಿವೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ












Click it and Unblock the Notifications