ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಪುಟ್ಟ ಬಾಲಕನ ಸಾಂಬಾರ್ ರೆಸಿಪಿಗೆ ಮರುಳಾದ ಜನ

|
Google Oneindia Kannada News

ಇದೊಂದು ಹೊಸ ಸಾಂಬಾರ್ ರೆಸಿಪಿ. ಇದು ತುಂಬಾ ಚೆನ್ನಾಗಿರುತ್ತೆ. ಇದಕ್ಕೆ ಚೂರು ಉಪ್ಪು ಚೂರು ಕಾಳು ಮೆಣಸು, ಚೂರೇ ಚೂರು ನೀರು ಹಾಕಬೇಕು. ಹೀಗಂತಾ ಯಾರೋ ಗೃಹಿಣಿ ಹೇಳುತ್ತಿಲ್ಲ. ಅಥವಾ ಅನುಭವಿ ಅಜ್ಜಿ ಕೂಡ ಹೇಳುತ್ತಿಲ್ಲ. ಅಷ್ಟೆ ಯಾಕೆ ಈಗಿನ್ನು ಅಡುಗೆ ಕಲಿಯುವ ಯುವತಿಯೋ ಅಥವಾ ಹುಡುಗನೋ ಹೇಳುತ್ತಿಲ್ಲ. ಇದನ್ನು ಹೇಳುತ್ತಿರುವುದು ಒಂದು ಪುಟ್ಟ ಬಾಲಕ. ಈ ಬಾಲಕ ಸಾಂಬಾರ್ ರೆಸಿಪಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಪುಟ್ಟ ಬಾಲಕ ಮುದ್ದುಮುದ್ದಾಗಿ ಸಾಂಬಾರ್ ಮಾಡುವ ವಿಧಾನವನ್ನು ಹಾಗೂ ಅದಕ್ಕೆ ಬಳಸುವ ಪದಾರ್ಥಗಳ ಬಗ್ಗೆ ನೋಡುಗರು ಬೆರಗಾಗುವಂತೆ ವಿವರಿಸುತ್ತಾನೆ.

ಸದ್ಯ ಈ ಬಾಲಕನ ಸಾಂಬಾರ್ ಮಾಡುವ ರೆಸಿಪಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಬಾಲಕನ ಮಾತಿಗೆ ಮರುಳಾಗಿದ್ದಾರೆ. 'ಹೊಸ ಅಡುಗೆ ಭಟ್ಟರು' ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಬಾಲಕ ಹೇಳುವ ಶೈಲಿ ಹಾಗೂ ಹಿರಿಯರಂತೆ ವಿವರಿಸುವ ಕಲೆಗೆ ಜನ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ. ಅಷ್ಟಕ್ಕೂ ಬಾಲಕ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ?

'ಸಾರ್ ಮಾಡೋದು ಹೇಗೆ ಗೊತ್ತಾ? ಅದಕ್ಕೆ ಉಪ್ಪು ಮತ್ತು ಕಾಳಮೆಣಸು ಹಾಕಬೇಕು. ಕಾಳಮೆಣಸು ಅಂದರೆ ಗೊತ್ತಲ್ಲ. ಅದನ್ನು ಸಣ್ಣಕೆ ಕುಟ್ಟಿ ಹಾಕಬೇಕು. ಇದಕ್ಕೆ ಚೂರೇ ಚೂರು ನೀರು ಹಾಕಬೇಕು ಅಷ್ಟೇ. ಜಾಸ್ತಿ ಏನೂ ಹಾಕ್‌ಬಾರದು. ಚೂರೇ ಚೂರು ಹಾಕಬೇಕು ನೀರು ಅಷ್ಟೇ. ಇದು ಹೊಸ ಸಾಂಬಾರ್. ಚೂರೇ ಅಂದರೆ ಚೂರೆ ಕಾಳಮೆಣಸು ಹಾಕಬೇಕು. ಚೂರೆ ಅಂದರೆ ಚೂರೆ. ಮೆಂತೆ ಹಾಕಬೇಕು. ಚೆನ್ನಾಗಿ ಬಾಡುತ್ತೆ ಅದು. ಅಮೇಲೆ ಕೊತ ಕೊತ ಕುದಿಯುತ್ತೆ. ಕುದ್ರೆ ಏನಾಗುತ್ತೆ ಹೊಸ ಸಾಂಬಾರ್ ಆಗುತ್ತದೆ. ಅದು ಕೊತ ಕೊತ ಕುದಿಬೇಕು. ಹತ್ತು ನಿಮಿಷ ಕುಳಿತುಕೊಳ್ಳಿ. ಅದು ಕೊತ ಕೊತ ಕುದಿಬೇಕು. ಸ್ಟವ್ ನಾ ಆಫ್ ಮಾಡಿಬಿಡಿ. ಅದಕ್ಕೆ ಚೂ...ರು ಉಪ್ಪು ಹಾಕಿಬಿಟ್ಟು. ಚೂರು ಚೆನ್ನಾಗಿದಿಯಾ ನೋಡಬೇಕು. ಚೂರು ಲೋಟಕ್ಕೆ ಹಾಕೊಂಡು ಊ... ಅಂತ ಕುಡಿದು ಚೆನ್ನಾಗಿದ್ದರೆ ಮಾತ್ರ ತಿನ್ಬೇಕು. ಊಟ ಮಾಡಬೇಕು. ಇಲ್ಲಂದ್ರೆ ಚೂರು ಉಪ್ಪಾಕಿ ಲೋಟಕ್ಕೆ ಹಾಕಿ ಕುಡಿಬೇಕು' ಇದು ಬಾಲಕನ ವಿವರಿಸಿದ ಸಾಂಬರ್ ಮಾಡುವ ವಿಧಾನ ಮತ್ತು ಬಳಕೆ ಮಾಡುವ ಪದಾರ್ಥಗಳು.

Video: People goes happy for boys sambar recipe

ಈ ವಿಡಿಯೋಕ್ಕೆ ಹಾಸ್ಯಾಸ್ಪದ ಪ್ರತಿಕ್ರಿಯೆಗಳು ಬಂದಿವೆ. 'ಎಷ್ಟು ಸಲ ಉಪ್ಪು ಹಾಕ್ತಿಯೋ. ಅದು ಉಪ್ಪು ಸಾರ್ ಆಯ್ತೆನ್' ಎಂದು ಪುನೀತ್ ಎಂಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೊಬ್ಬರು 'ಎಲ್ಲಾ ಚೂರೇ ಚೂರು ಹಾಕಿ ಕೊನೆಗೆ ಚೂರೇ ಚೂರು ಟೇಸ್ಟ್ ಮಾಡಿದರೆ, ಸಾಂಬಾರೇ ಖಾಲಿ ಆಯ್ತಲ್ಲ ಮಾರ್ರ' ಎಂದು ಹಾಸ್ಪಾಸ್ಪದವಾಗಿ ರಿಪ್ಲೈ ಮಾಡಿದ್ದಾರೆ.

English summary
A video of a little boy explaining the process of making sambar along with the required ingredients has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X