ಧರ್ಮದ ಹಾದಿಯಲ್ಲಿ! ಅಯೋಧ್ಯೆ ರಾಮನ ಬಗ್ಗೆ ವೆಂಕಟೇಶ್ ಪ್ರಸಾದ್ ಹೇಳಿದ್ದೇನು?
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಭಾಗವಹಿಸಿದ್ದರು. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಅವರು, ಜೀವನದ ಅತ್ಯಂತ ಪ್ರೀತಿಯ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇನೆ ಎಂದು ಹೇಳಿದ್ದಾರೆ.
ಟ್ವೀಟ್ ಮಾಡಿರುವ ಅವರು, "ನಮ್ಮ ಜೀವನದ ಕ್ಷಣಕ್ಕೆ ಸಾಕ್ಷಿಯಾಗುವ ದಾರಿಯಲ್ಲಿ. ಧರ್ಮ ಮಾರ್ಗ. ಒಂದೇ ದೇಶ, ಒಂದೇ ಹೆಸರು ಜೈ ಶ್ರೀ ರಾಮ" ಎಂದು ಪ್ರಸಾದ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

ಈ ಕಾರ್ಯಕ್ರಮಕ್ಕೆ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮಿಥಾಲಿ ರಾಜ್, ಹರ್ಮನ್‌ಪ್ರೀತ್ ಕೌರ್ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿತ್ತು. ವೆಂಕಟೇಶ್ ಪ್ರಸಾದ್ ಜೊತೆಗೆ ಕರ್ನಾಟಕದ ಮತ್ತೊಬ್ಬ ದಿಗ್ಗಜ ಅನಿಲ್ ಕುಂಬ್ಳೆ ಕೂಡ ಪತ್ನಿಯೊಂದಿಗೆ ಭಾಗವಹಿಸಿದ್ದರು.
500 ವರ್ಷಗಳ ಕಾಯುವಿಕೆ ಅಂತ್ಯ
ರಾಮ ಮಂದಿರ ವಿವಾದ 500 ವರ್ಷಗಳಷ್ಟು ಹಳೆಯದಾಗಿದ್ದು, ಐದು ಶತಮಾನಗಳ ಕಾಯುವಿಕೆ ಅಂತ್ಯವಾಗಿದೆ ಎಂದು ರಾಮ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಕ್ರೀಡಾ ದಿಗ್ಗಜರ ಜೊತೆಗೆ ಸಿನಿಮಾ ತಾರೆಯರು ಕೂಡ ಭಾಗವಹಿಸಿದ್ದಾರೆ. ರಿಷಬ್ ಶೆಟ್ಟಿ, ಪವನ್ ಕಲ್ಯಾಣ್, ರಾಮ್ ಚರಣ್, ಕತ್ರಿನಾ ಕೈಫ್ ಸೇರಿದಂತೆ ಹಲವು ಪ್ರಮುಖ ಸಿನಿಮಾ ನಟ-ನಟಿಯರು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಮ್ಮ ರಾಮ ಬಂದಿದ್ದಾನೆ ಎಂದ ಮೋದಿ
ಸೋಮವಾರ ಅಯೋಧ್ಯೆ ದೇವಸ್ಥಾನದಲ್ಲಿ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಬಾಲ ರಾಮ ಇನ್ನು ಮುಂದೆ ಡೇರೆಯಲ್ಲಿ ಉಳಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭದ ನಂತರ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, 'ನಮ್ಮ ರಾಮ ಬಂದಿದ್ದಾನೆ,' ಶತಮಾನಗಳ ಕಾಯುವಿಕೆಯ ನಂತರ ಭಗವಾನ್ ರಾಮನು ಅಂತಿಮವಾಗಿ ಅವನ ಮನೆಗೆ ಆಗಮಿಸಿದ್ದಾನೆ. ಶತಮಾನಗಳ ಕಾಲ ನಾವು ತೋರಿದ ತಾಳ್ಮೆ ಮತ್ತು ನಾವು ಮಾಡಿದ ತ್ಯಾಗದ ನಂತರ, ನಮ್ಮ ಭಗವಾನ್ ರಾಮನು ಅಂತಿಮವಾಗಿ ಆಗಮಿಸಿದ್ದಾನೆ ಎಂದು ಹೇಳಿದ್ದಾರೆ.
ಶ್ರೀರಾಮನಲ್ಲಿ ಕ್ಷಮೆಯಾಚಿಸಿದ ಮೋದಿ, "ನಮ್ಮ ಪ್ರಯತ್ನ, ತ್ಯಾಗ ಮತ್ತು ತಪಸ್ಸಿನಲ್ಲಿ ಏನಾದರೂ ಕೊರತೆಯಿರಬೇಕು, ಇಷ್ಟು ಶತಮಾನಗಳಿಂದ ನಾವು ಈ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ, ಇಂದು, ಕೆಲಸ ಪೂರ್ಣಗೊಂಡಿದೆ, ಭಗವಾನ್ ರಾಮನು ಕ್ಷಮಿಸುತ್ತಾನೆ ಎಂದು ನಾನು ನಂಬುತ್ತೇನೆ." ಎಂದು ಹೇಳಿದ್ದಾರೆ.












Click it and Unblock the Notifications