Get Updates
Get notified of breaking news, exclusive insights, and must-see stories!

ಚೀನಾದಲ್ಲಿ ಮತ್ತೆ ಹೆಚ್ಚಾಯ್ತು ಅನಾರೋಗ್ಯ: ಭಾರತದ ರಾಜ್ಯಗಳಿಗೆ ನೀಡಿದ ಸೂಚನೆಗಳೇನು?

ಬೆಂಗಳೂರು, ನವೆಂಬರ್ 26: ಚೀನಾದಲ್ಲಿ ಉಸಿರಾಟ ಸಮಸ್ಯೆಯಂತಹ ಅನಾರೋಗ್ಯ ಪ್ರಕರಣಗಳು ವರದಿ ಆಗುತ್ತಲೇ ಇವೆ. ಈ ಸಂಬಂಧ ಭಾರತೀಯ ಅರೋಗ್ಯ ಸಚಿವಾಯವು ಇನ್ಫ್ಲುಯೆಂಜಾ ನಂತಹ ಅನಾರೋಗ್ಯ (ILI) ಮತ್ತು ತೀವ್ರ ಉಸಿರಾಟದ ಕಾಯಿಲೆ (SARI) ಪ್ರವೃತ್ತಿ ಕುರಿತು ನಿಗಾ ಇಡುವ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರ ಕಣ್ಗಾವಲು ಘಟಕಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವಂತೆ ಭಾನುವಾರ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

ಕಳೆದ ಕೆಲವು ವಾರಗಳಲ್ಲಿ ಉತ್ತರ ಚೀನಾದಲ್ಲಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯು ಉಲ್ಬಣಗೊಂಡಿದೆ. ಚೀನಾದಲ್ಲಿ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಿಗೆ, ಉಸಿರಾಟದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಭಾರತ ILI/SARI ಹೊಂದಿರುವ ರೋಗಿಗಳ ಮೂಗು ಮತ್ತು ಗಂಟಲಿನ ಸ್ವ್ಯಾಬ್ ಮಾದರಿಗಳ ಪರೀಕ್ಷಿಸಲು ರಾಜ್ಯಗಳಲ್ಲಿರುವ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯದ ಪ್ರಯೋಗಾಲಯಗಳಿಗೆ ಕಳುಹಿಸುವಂತೆ ಸೂಚನೆ ನೀಡಿದೆ.

Union Health Ministry Instructed to States Review Hospital Preparedness Amid China pneumonia Scare

ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ನಿರ್ದೇಶನದ ಪತ್ರದಲ್ಲಿ, ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಯ ಸನ್ನದ್ಧತೆಯ ಕ್ರಮಗಳನ್ನು ತಕ್ಷಣವೇ ಪರಿಶೀಲಿಸುವಂತೆ ತಿಳಿಸಿದೆ. ಆಸ್ಪತ್ರೆಯ ಹಾಸಿಗೆಗಳು, ಇನ್ಫ್ಲುಯೆಂಜಾಕ್ಕೆ ಔಷಧಗಳು ಮತ್ತು ಲಸಿಕೆಗಳ ಲಭ್ಯತೆ, ವೈದ್ಯಕೀಯ ಆಮ್ಲಜನಕ, ಪ್ರತಿಜೀವಕಗಳು, ವೈಯಕ್ತಿಕ ರಕ್ಷಣಾ ಸಾಧನಗಳು, ಪರೀಕ್ಷಾ ಕಿಟ್‌ಗಳು ಮತ್ತು ಕಾರಕಗಳು, ಆಮ್ಲಜನಕ ಸಸ್ಯಗಳು ಮತ್ತು ವೆಂಟಿಲೇಟರ್‌ಗಳ ಕಾರ್ಯನಿರ್ವಹಣೆ, ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ನಿಯಂತ್ರಣ ಅಭ್ಯಾಸಗಳು ಮೇಲ್ವಿಚಾರಣೆ ಮಾಡಲು ಸೂಚಿಸಿದೆ.

ಕೋವಿಡ್ ಮಾರ್ಗಸೂಚಿ ತರಲು ಚಿಂತನೆ
ದೇಶದ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಕೊರೊನಾ ವೇಳೆ ಜಾರಿಗೆ ತಂದಿದ್ದ ಪರಿಷ್ಕೃತ ಕಣ್ಗಾವಲು ಕಾರ್ಯತಂತ್ರ, ಮಾರ್ಗಸೂಚಿಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರಿಂದ ಐಎಲ್‌ಐ ಮತ್ತು ಸಾರಿ ಪ್ರಕರಣ ವರದಿ ಆಗದಂತೆ ಎಚ್ಚರಿಕೆ ವಹಿಸುತ್ತಿದೆ.

ಸದ್ಯ ಚಳಿಗಾಳ ಸಂದರ್ಭದಲ್ಲಿ ನಾವು ಇರುವುದರಿಂದ ಇನ್ಫ್ಲುಯೆನ್ಸ ಹರಡದಂತೆ ಹೆಚ್ಚು ಗಮನವಹಿಸಬೇಕಾಗಿದೆ. ಇದು ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಚ್ಚರಿಕೆ ಅಗತ್ಯ. ಅನಾರೋಗ್ಯದ ಸ್ಥಿತಿ ಎದುರಾದರೆ ಸಿದ್ಧತೆ ಮುಖ್ಯ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Union Health Ministry Instructed to States Review Hospital Preparedness Amid China pneumonia Scare

ILI/SARI ಪ್ರಕರಣ ಅಪ್ಲೋಡ್‌ಗೆ ಸೂಚನೆ
ಒಂದು ವೇಳೆ ನಿಮ್ಮ ನಿಮ್ಮ ರಾಜ್ಯಗಳಲ್ಲಿ ILI/SARI ಪ್ರಕರಣಗಳು ವರದಿ ಆದರೆ ಅದನ್ನು ವಿಶೇಷವಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿದಂತೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ಕೇಂದ್ರ 'ಪೋರ್ಟಲ್‌'ನಲ್ಲಿ ಅಪ್‌ಲೋಡ್ ಮಾಡುವಂತೆ ಸಚಿವಾಲಯ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

ಚೀನಾದ ಉತ್ತರ ಭಾಗಗಳಲ್ಲಿ ಉಸಿರಾಟದ ಕಾಯಿಲೆಗೆ ತುತ್ತಾಗಿರುತ್ತಿವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹಂಚಿಕೊಂಡ ಮಾಹಿತಿ ನೀಡಿದೆ. ಇದಕ್ಕೆ ಇನ್ಫ್ಲುಯೆನ್ಸ, ಮೈಕೋಪ್ಲಾಸ್ಮಾ ನ್ಯುಮೋನಿಯಾ, ಸಾರ್ಸ್ ವೈರಸ್ ಗಳು ಕಾರಣ ಎಂದು ತಿಳಿಸಿದೆ.

ಚೀನಾದ ಸ್ಥಿತಿಗತಿ ಕುರಿತು ಮಾಹಿತಿ ಕೇಳಿದ ಭಾರತ
ವಿಶ್ವಸಂಸ್ಥೆ (WHO) ಹೇಳುವ ಪ್ರಕಾರ, ಮೈಕೋಪ್ಲಾಸ್ಮಾ ನ್ಯುಮೋನಿಯಾದಂತಹ ಉಸಿರಾಟಕ್ಕೆ ತೊಂದರೆ ಉಂಟು ಮಾಡು ಕಾಯಿಲೆಗಳು ಚಳಿಗಾಲದ ಸಂದರ್ಭದಲ್ಲಿ ಹೆಚ್ಚಾಗುತ್ತವೆ. ಈ ಅನಾರೋಗ್ಯ ಹರುಡುವಿಕೆ, ಲಕ್ಷಣ, ಹೊಸತೇನಾದರೂ ಕಂಡು ಕೊಳ್ಳುವ ದೃಷ್ಟಿಯಿಂದ ಭಾರತ ಆರೋಗ್ಯಾಧಿಕಾರಿಗಳು ಚೀನೀ ಅಧಿಕಾರಿಗಳಿಂದ ಹೆಚ್ಚುವರಿ ಮಾಹಿತಿ ಕೇಳಿದೆ. ದೇಶದ ಜನರು ಆರೋಗ್ಯ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವಾಲಯ ಅಭಯ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+