Get Updates
Get notified of breaking news, exclusive insights, and must-see stories!

ಓಲಾ ಮಾದರಿಯಲ್ಲಿ ಕೇಂದ್ರ ಸರ್ಕಾರದಿಂದ ಟ್ಯಾಕ್ಸಿ ಸೇವೆ, ವಿವರ

ನವದೆಹಲಿ, ಮಾರ್ಚ್ 27: ಖಾಸಗಿ ಕಂಪನಿಗಳ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳು ಜನರನ್ನು ಸುಲಿಗೆ ಮಾಡುತ್ತವೆ ಎಂಬ ಆರೋಪಗಳಿವೆ. ಈ ಹಿನ್ನಲೆಯಲ್ಲಿ ವಿವಿಧ ನಗರದಲ್ಲಿ ಹಲವು ಬಾರಿ ಟ್ಯಾಕ್ಸಿ ಚಾಲಕರು, ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಈಗ ಕೇಂದ್ರ ಸರ್ಕಾರ ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ತೀರ್ಮಾನಿಸಿದೆ. ಈ ಕುರಿತು ಲೋಕಸಭೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ.

ಲೋಕಸಭೆ ಕಲಾಪದಲ್ಲಿ ಮಾತನಾಡಿದ ಅಮಿತ್ ಶಾ, ಭಾರತದ ಮೊದಲ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ, ಶೀಘ್ರದಲ್ಲಿಯೇ 'ಸಹಕಾರಿ ಟ್ಯಾಕ್ಸಿ' ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು. ಓಲಾ ಮತ್ತು ಉಬರ್‌ ಮಾದರಿಯಲ್ಲಿಯೇ ಸಹಕಾರಿ ಟ್ಯಾಕ್ಸಿಗಳು ಕಾರ್ಯ ನಿರ್ವಹಣೆ ಮಾಡಲಿವೆ.

Union Govt Cooperative Taxi Services Like Ola And Uber

ಈ ಟ್ಯಾಕ್ಸಿ ಸೇವೆಯಿಂದ ಚಾಲಕರಿಗೆ ಅನುಕೂಲವಾಗಲಿದೆ. ಈ ಟ್ಯಾಕ್ಸಿ ಸೇವೆಯಲ್ಲಿ ಆಟೋ, ಬೈಕ್ ಮತ್ತು ಕಾರುಗಳು ಸೇರಿರಲಿವೆ ಎಂದು ಅಮಿತ್ ಶಾ ವಿವರಣೆ ನೀಡಿದ್ದಾರೆ. ಸಹಕಾರಿ ಟ್ಯಾಕ್ಸಿ ಸೇವೆಯಿಂದ ಬರುವ ಲಾಭ ಯಾವುದೇ ಖಾಸಗಿ ವ್ಯಕ್ತಿಗೆ ಹೋಗುವುದಿಲ್ಲ. ನೇರವಾಗಿ ಇದು ಚಾಲಕನ ಕೈ ಸೇರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಸಹಕಾರಿ ಟ್ಯಾಕ್ಸಿ ಸೇವೆ: ಅಮಿತ್ ಶಾ ಲೋಕಸಭೆಯಲ್ಲಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ ಕುರಿತ ಮಸೂದೆಯ ಮೇಲೆ ಮಾತನಾಡುವಾಗ 'ಸಹಕಾರಿ ಟ್ಯಾಕ್ಸಿ' ಕುರಿತು ವಿಷಯವನ್ನು ಪ್ರಸ್ತಾಪಿಸಿದರು. ಓಲಾ ಮತ್ತು ಉಬರ್‌ ಮಾದರಿಯಲ್ಲಿಯೇ ಸಹಕಾರಿ ಟ್ಯಾಕ್ಸಿಗಳು ಕಾರ್ಯ ನಿರ್ವಹಿಸಲಿವೆ ಎಂದರು.

ಆದರೆ ಸಹಕಾರಿ ಟ್ಯಾಕ್ಸಿ ಸೇವೆ ಎಲ್ಲಿ ಮೊದಲು ಪ್ರಾರಂಭವಾಗಲಿದೆ?, ಇದರ ಸೇವೆ ಹೇಗಿರಲಿದೆ? ಎಂಬ ಬಗ್ಗೆ ಇನ್ನೂ ಸಹ ಖಚಿತವಾದ ಮಾಹಿತಿ ಸಿಕ್ಕಿಲ್ಲ. ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ ಅಂಗೀಕಾರವಾದರೆ ಅದರಲ್ಲಿ ಈ ಟ್ಯಾಕ್ಸಿ ಸೇವೆ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿಯೇ 'ಸಹಕಾರಿ ಟ್ಯಾಕ್ಸಿ' ಸೇವೆಯನ್ನು ಆರಂಭಿಸಲಾಗುತ್ತದೆ. ಈ ಟ್ಯಾಕ್ಸಿ ಸೇವೆಯಲ್ಲಿ ಆಟೋ, ಬೈಕ್ ಮತ್ತು ಕಾರುಗಳು ಸೇರಿವೆ ಎಂದು ಸಚಿವರು ಲೋಕಸಭೆಯಲ್ಲಿ ವಿವರಣೆಯನ್ನು ನೀಡಿದ್ದಾರೆ.

ಗುಜರಾತ್ ರಾಜ್ಯದಲ್ಲಿ ದೇಶದ ಮೊದಲ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ ಎಂದು ಅಮಿತ್ ಶಾ ವಿವರಣೆ ನೀಡಿದ್ದಾರೆ. ಗುಜರಾತ್ ರಾಜ್ಯ ಸರ್ಕಾರ ವಿವಿ ಸ್ಥಾಪನೆಗೆ ಭೂಮಿಯನ್ನು ನೀಡಿದೆ. ವಿಶ್ವವಿದ್ಯಾಲಯ ಗುಜರಾತ್‌ನಲ್ಲಿದ್ದರೂ ಕಾರ್ಯ ಕ್ಷೇತ್ರ ಇಡೀ ದೇಶದಲ್ಲಿ ಇರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

Take a Poll

ಸಹಕಾರಿ ವಿಶ್ವವಿದ್ಯಾಲಯ ಡಿಪ್ಲೊಮಾ, ಪದವಿ, ಪಿಎಚ್‌ಡಿ, ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡಲಿದೆ. ವಾರ್ಷಿಕ 8 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತೆ ವಿವಿಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಲೋಕಸಭೆಯಲ್ಲಿ ಅಮಿತ್ ಶಾ ದೇಶದಲ್ಲಿ ಸಹಕಾರಿ ಸಂಸ್ಥೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಆದ್ದರಿದ ಈ ಮಾದರಿ ವಿಶ್ವವಿದ್ಯಾಲಯಗಳು ಅಗತ್ಯವಾಗಿವೆ. ಈ ವಿವಿಯಲ್ಲಿ ತರಬೇತಿ ಪಡೆದವರ ಅಗತ್ಯವಿದೆ. ಸಹಕಾರಿ ಸಂಸ್ಥೆಗಳ ಅಗತ್ಯಗಳಿವೆ ಅನುಗುಣವಾಗಿ ವಿವಿಯಲ್ಲಿ ವಿವಿಧ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗುತ್ತದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+