Unacademy row: 'ರಾಜಕೀಯ ಒತ್ತಡದಿಂದ ಅವರು ನನ್ನನ್ನು ವಜಾಗೊಳಿಸಿರಬಹುದು' - ಶಿಕ್ಷಣತಜ್ಞ ಕರಣ್ ಸಾಂಗ್ವಾನ್

ದೆಹಲಿ ಆಗಸ್ಟ್ 19: ಆನ್‌ಲೈನ್ ಶಿಕ್ಷಣದಲ್ಲಿ ರಾಜಕೀಯ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಶಿಕ್ಷಣತಜ್ಞ ಕರಣ್ ಸಾಂಗ್ವಾನ್ ಅವರನ್ನು ಅನಾಕಾಡಮಿಯಿಂದ ವಜಾಗೊಳಿಸಿದ ಬಳಿಕ ಸಾಂಗ್ವಾನ್ ಅವರು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಸಂಗ್ವಾನ್, ರಾಜಕೀಯ ಒತ್ತಡದಿಂದ ಆನ್‌ಲೈನ್ ಟ್ಯೂಟರಿಂಗ್ ಪ್ಲಾಟ್‌ಫಾರ್ಮ್‌ನಿಂದ ತಮ್ಮನ್ನು ತೆಗೆದುಹಾಕಿರಬಹುದು ಎಂದು ಹೇಳಿದ್ದಾರೆ.

Unacademy row: They may have sacked me due to political pressure - Educationist Karan Sangwan

ಆಗಸ್ಟ್ 14ರಂದು ಸಾಂಗ್ವಾನ್ ವಿಡಿಯೋ ವೈರಲ್ ಆಗಿತ್ತು. ಬಳಿಕ ಈ ವಿಡಿಯೋ ವಿವಾದಕ್ಕೆ ಸಿಲುಕಿದೆ. ವಿಡಿಯೋದಲ್ಲಿ ಸುಶಿಕ್ಷಿತ ನಾಯಕರಿಗೆ ಮತ ಹಾಕುವಂತೆ ತಮ್ಮ ವಿದ್ಯಾರ್ಥಿಗಳಿಗೆ ಸಾಂಗ್ವಾನ್ ಹೇಳಿದ್ದಾರೆ. ವಿವಾದದ ಬಳಿಕವೂ ತಾವು ತಮ್ಮ ಹೆಲಿಕೆಗೆ ಬದ್ಧರಾಗಿರುವುದಾಗಿ ಹೇಳಿದ್ದಾರೆ.

ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಸಾಂಗ್ವಾನ್ ಅವರು, 'ಘಟನೆಯ ಬಳಿಕ ಅನಾಕಾಡೆಮಿಯ ಉನ್ನತ ಆಡಳಿತದೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಆದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ' ಎಂದು ಸಾಂಗ್ವಾನ್ ಹೇಳುತ್ತಾರೆ. "ನಾನು 2021 ರಿಂದ ಅನಾಕಾಡೆಮಿಯಲ್ಲಿದ್ದೇನೆ. ನನ್ನ ಪ್ರೊಫೈಲ್ ಅನ್ನು ಅಳಿಸಲಾಗಿದೆ, ಇದಕ್ಕೆ ರಾಜಕೀಯ ಒತ್ತಡ ಇರಬಹುದು" ಎಂದು ಸಾಂಗ್ವಾನ್ ಅವರು ಹೇಳಿದರು.

ವಿಡಿಯೋದಲ್ಲಿ ಏನಿದೆ?

ವೈರಲ್ ಆದ ವೀಡಿಯೊ ಕ್ಲಿಪ್‌ನಲ್ಲಿ ಕರಣ್ ಸಾಂಗ್ವಾನ್ ಅವರು, ದೇಶದಲ್ಲಿನ ಅಪರಾಧ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಸರ್ಕಾರವು ತಂದ ಇತ್ತೀಚಿನ ಮಸೂದೆಗಳನ್ನು ಚರ್ಚಿಸುತ್ತಿದ್ದಾರೆ. ಈ ವೇಳೆ "ಮರೆಯಬೇಡಿ, ನೀವು ಮುಂದಿನ ಬಾರಿ ಮತ ಚಲಾಯಿಸುವಾಗ, ಸುಶಿಕ್ಷಿತರಿಗೆ ಮತ ನೀಡಿ, ಆದ್ದರಿಂದ ನೀವು ಮತ್ತೆ ಈ (ಪರೀಕ್ಷೆ) ಪಡಬೇಕಾಗಿಲ್ಲ. ವಿದ್ಯಾವಂತ ಮತ್ತು ವಿಷಯಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ಆರಿಸಿ. ಹೆಸರು ಬದಲಾಯಿಸಲು ಮಾತ್ರ ತಿಳಿದಿರುವವರನ್ನು ಆಯ್ಕೆ ಮಾಡಬೇಡಿ. ಸರಿಯಾಗಿ ನಿರ್ಧರಿಸಿ ಮತ ಚಲಾಯಿಸಿ" ಎಂದು ಸಾಂಗ್ವಾನ್ ತಮ್ಮ ವಿದ್ಯಾರ್ಥಿಗಳನ್ನು ವಿಡಿಯೋದಲ್ಲಿ ಒತ್ತಾಯಿಸಿದ್ದಾರೆ.

Unacademy row: They may have sacked me due to political pressure - Educationist Karan Sangwan

"ಕ್ಲಿಪ್ ಅನ್ನು ವೈರಲ್ ಮಾಡಲಾಗುತ್ತದೆ ಮತ್ತು ತಪ್ಪಾಗಿ ಚಿತ್ರಿಸಲಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿ ನನ್ನನ್ನು ತಪ್ಪಾಗಿ ಅರ್ಥೈಸಲಾಗಿದೆ" ಎಂದು ಸಾಂಗ್ವಾನ್ ಇಂಡಿಯಾ ಟುಡೇಗೆ ತಿಳಿಸಿದರು.

"ನಾನು ಸಾಮಾನ್ಯ ಹೇಳಿಕೆಯನ್ನು ನೀಡಿದ್ದೇನೆ. ನಾನು ಜನರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಬಲ್ಲೆ. ನನಗೆ ವಿದ್ಯಾವಂತರು ಬೇಕು. ಶಿಕ್ಷಣವೆಂದರೆ ಜನರು ತರಗತಿಯಲ್ಲಿ ಓದುವುದಲ್ಲ. ನನ್ನ ತರಗತಿಯಲ್ಲಿ ನಾನು ಕಲಿತದ್ದನ್ನು ನಾನು ನೀಡುತ್ತಿದ್ದೇನೆ" ಎಂದು ಸಾಂಗ್ವಾನ್ ಇಂಡಿಯಾ ಟುಡೇಗೆ ತಮ್ಮ ಬಗ್ಗೆ ಹೇಳಿದರು.

ಅನಾಕಾಡೆಮಿಯೊಂದಿಗಿನ ಒಪ್ಪಂದದ ಮುಕ್ತಾಯದ ಬಗ್ಗೆ ಕೇಳಿದಾಗ ಸಾಂಗ್ವಾನ್, ಆನ್‌ಲೈನ್ ಪ್ಲಾಟ್‌ಫಾರ್ಮ್ ತಮ್ಮ ಒಪ್ಪಂದದಲ್ಲಿ ರಾಜಕೀಯ ಹೇಳಿಕೆ ಇರಬಾರದು ಎಂದು ಉಲ್ಲೇಖಿಸಿದೆ. ಆದರೆ "ರಾಜಕೀಯ ಹೇಳಿಕೆ" ಎಂದರೇನು ಎಂಬುದರ ಬಗ್ಗೆ ಯಾವುದೇ ವ್ಯಾಖ್ಯಾನವಿಲ್ಲ. ಅಷ್ಟಕ್ಕೂ ನಾನು ಯಾವುದೇ ಹೆಸರು ಅಥವಾ ಪಕ್ಷವನ್ನು ಉಲ್ಲೇಖಿಸಿಲ್ಲ ಎಂದು ಕರಣ್ ಸಾಂಗ್ವಾನ್ ಹೇಳಿದ್ದಾರೆ.

"ಇಮೇಲ್‌ನಲ್ಲಿ ಅನಾಕಾಡೆಮಿ ನನಗೆ ಟ್ವೀಟ್ ಕಳುಹಿಸಿದ್ದಾರೆ. ಅನಾಕಾಡೆಮಿಯೊಂದಿಗಿನ ಒಪ್ಪಂದದ ಮುಕ್ತಾಯಗೊಳಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಆದರೆ ಅವರು ನನ್ನೊಂದಿಗೆ ಚರ್ಚಿಸಲಿಲ್ಲ" ಎಂದು ಸಾಂಗ್ವಾನ್ ಹೇಳಿದರು.

ಆದರೆ ಸಾಂಗ್ವಾನ್ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. "ನಾನು ಹೇಳಿದ್ದು ಸರಿ. ನಾನು ಹೇಳಿದ್ದಕ್ಕೆ ನಾನು ಬದ್ಧನಾಗಿದ್ದೇನೆ. ಶಿಕ್ಷಣವು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ" ಎಂದು ಸಾಂಗ್ವಾನ್ ಹೇಳಿದರು.

"ನನ್ನನ್ನು ಟ್ರೋಲ್ ಮಾಡಲಾಗಿದೆ. ನನ್ನನ್ನು ವಿವಾದಕ್ಕೆ ಒಳಪಡಿಸಲಾಗಿದೆ. ಬಹುಶಃ ಅವರು ಒತ್ತಡಕ್ಕೆ ಒಳಗಾಗಿದ್ದಾರೆ, ಅದಕ್ಕಾಗಿ ಅವರು ನನ್ನನ್ನು ಅನಾಕಾಡಮಿಯಿಂದ ವಜಾಗೊಳಿಸಿದ್ದಾರೆ" ಎಂದು ಅವರು ಹೇಳಿದರು.

ಜೊತೆಗೆ ಸಾಂಗ್ವಾನ್ ಅವರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ನನಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಒಡನಾಟವಿಲ್ಲ, ನಾನು ಬೋಧನೆಯನ್ನು ಮಾತ್ರ ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.

"ನನಗೆ ಯೂಟ್ಯೂಬ್ ಚಾನೆಲ್ ಇದೆ, ನಾನು ಮಕ್ಕಳಿಗೆ ಉಚಿತವಾಗಿ ಕಲಿಸುತ್ತೇನೆ" ಎಂದು ಅವರು ಹೇಳಿದರು. ಅನಾಕಾಡೆಮಿಯಿಂದ ಮುಕ್ತಾಯ ಪತ್ರ ಬಂದಾಗ ತಾನು ಅಳುತ್ತಿದ್ದೆ ಎಂದು ಸಾಂಗ್ವಾನ್ ಹೇಳಿದರು. ನನ್ನ ಕೆಲ ವಿದ್ಯಾರ್ಥಿಗಳೂ ಅಳಲು ತೋಡಿಕೊಂಡರು. ಯಾರೂ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯೋಚಿಸುತ್ತಿಲ್ಲ ಎಂದರು. "ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಶಿಕ್ಷಕನಾಗಿ, ನಾನು ವಿದ್ಯಾರ್ಥಿಗಳನ್ನು ಸರಿಯಾದ ಮಾರ್ಗಕ್ಕೆ ಮಾರ್ಗದರ್ಶನ ನೀಡುತ್ತೇನೆ" ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+