ಸಲಿಂಗ ವಿವಾಹ ಮಾನ್ಯತೆ; ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್
ಸಲಿಂಗ ವಿವಾಹದ ಮಾನ್ಯತೆ ಬಗ್ಗೆ ಈ ಮೊದಲು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಕೋರಿ ಸಲ್ಲಿಸಿರುವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈಗಾಗಲೇ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಯಾವುದೇ ತಪ್ಪು ಇಲ್ಲ, ಇದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
2023ರ ಅಕ್ಟೋಬರ್ ತಿಂಗಳಿನಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಅನುಮೋದನೆ ನೀಡಲು ನಿರಾರಕರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿಗಳನ್ನು ದಾಖಲಿಸಲಾಗಿತ್ತು.

ಈ ಮೊದಲು ಅರ್ಜಿಗಳ ಬಗ್ಗೆ ಮುಕ್ತ ವಿಚಾರಣೆಯನ್ನು ನಿರಾಕರಿಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯ ಕಾಂತ್, ಬಿ.ವಿ. ನಾಗರತ್ನ, ಪಿ.ಎಸ್. ನರಸಿಂಹ ಮತ್ತು ದೀಪಂಕರ್ ದತ್ತ ಅವರ ಪೀಠವು ಬಹುಮತದ ತೀರ್ಪುಗಳನ್ನು ಪರಿಶೀಲಿಸಲಾಗಿದೆ ಮತ್ತು ಅವುಗಳಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೇಳಿದೆ.
ಈ ಮೊದಲು ನೀಡಿರುವ ಎರಡೂ ತೀರ್ಪುಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಕಾನೂನಿಗೆ ಅನುಗುಣವಾಗಿದೆ. ಈಗ ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಅದರಂತೆ ಪರಿಶೀಲನೆ ಮಾಡುವಂತೆ ಸಲ್ಲಿಸಿರುವ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಪ್ರಸ್ತುತ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಜುಲೈ 2024 ರಲ್ಲಿ ವಿಚಾರಣೆಯಿಂದ ಹಿಂದೆ ಸರಿದ ನಂತರ ಪರಿಶೀಲನಾ ಅರ್ಜಿಗಳನ್ನು ವಿಚಾರಣೆ ನಡೆಸುವ ಪೀಠವನ್ನು ರಚನೆ ಮಾಡಲಾಗಿದೆ.
LGBTQIA++ ಸಮುದಾಯದ ಬೇಡಿಕೆಗಳೇನು?
2023ರ ಅಕ್ಟೋಬರ್ ನಲ್ಲಿ ಸಲಿಂಗ ಮದುವೆಗೆ ಕಾನೂನು ಮಾನ್ಯತೆಯನ್ನು ನಿರಾಕರಸಿದ್ದ ಸುಪ್ರೀಂ ಕೋರ್ಟ್ ತೀರ್ಪಿಗೆ LGBTQIA++ ಸಮುದಾಯ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಒಂದು ಸಮುದಾಯದ ಹಕ್ಕುಗಳನ್ನು ಹತ್ತಿಕ್ಕಲಾಗಿದೆ ಎಂದು ಹೇಳಿತ್ತು.
"ಸಲಿಂಗ ಸಂಬಂಧಗಳು ಇತ್ತೀಚನ ಕಾಲದಲ್ಲಿ ಆರಂಭವಾದದ್ದಲ್ಲ, ಪ್ರಾಚೀಲ ಕಾಲದಿಂದಲೂ ಅದನ್ನು ನೋಡಬಹುದು. ಸಲಿಂಗ ಸಂಬಂಧ ಎಂದರೆ ಕೇವಲ ಲೈಂಗಿಕ ಚಟುವಟಿಗೆ ಮಾತ್ರವಲ್ಲ, ಭಾವನಾತ್ಮಕ ಸಂಬಂಧಗಳನ್ನೂ ನೋಡಬೇಕು. ನಾನು ಕೆಲವು ಸೂಫಿ ಸಂಪ್ರದಾಯಗಳನ್ನು ಉಲ್ಲೇಖಿಸಿದ್ದೇನೆ. ಮುಖ್ಯ ನ್ಯಾಯಮೂರ್ತಿಗಳ ತೀರ್ಪನ್ನು ನಾನು ಒಪ್ಪುತ್ತೇನೆ. ಸಾಂವಿಧಾನಿಕ ನ್ಯಾಯಾಲಯವು ಹಕ್ಕುಗಳನ್ನು ಎತ್ತಿಹಿಡಿಯುವುದು ಸಾಮಾಜಿಕ ನೈತಿಕತೆಯಿಂದಲ್ಲ, ಸಾಂವಿಧಾನಿಕ ನೈತಿಕತೆಯಿಂದ" ಎಂದು ನ್ಯಾಯಮೂರ್ತಿ ಕೌಲ್ ಹೇಳಿದ್ದರು.












Click it and Unblock the Notifications