ದೆಹಲಿ ಚುನಾವಣೆ 2025: AAP ಪರ TMC ನಾಯಕ ಭರ್ಜರಿ ಪ್ರಚಾರ
ನವದೆಹಲಿ, ಜನವರಿ 28: ದೆಹಲಿಯ ಚುನಾವಣೆ ಕಣ ರಂಗೇರುತ್ತಿದೆ. ರಾಜಕೀಯ ಘಟನಾನುಘಟಿಗಳು ಚುನಾವಣಾ ಪ್ರಚಾರದ ವೇಳೆ ಮುಖಾ ಮುಖಿ ಆಗುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳ ನಾಯಕರನ್ನು ಸಹ ದೆಹಲಿಗೆ ಕರೆಯಿಸಿ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಇದೀಗ ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ, ಸಂಸದ ಶತ್ರುಘ್ನ ಸಿನ್ಹಾ ಅವರು ಪ್ರಚಾರ ಮಾಡಲಿದ್ದಾರೆ.
ದೆಹಲಿಯಲ್ಲಿ ಮುಂದಿನ ತಿಂಗಳ ಫೆಬ್ರವರಿ 5 ರಂದು 70 ವಿಧಾನಸಭಾ ಸೀಟುಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭಾ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ (TMC) ಸಂಸದ ಶತ್ರುಘ್ನ ಸಿನ್ಹಾ ಅವರು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಪರ ಪ್ರಚಾರ ಮಾಡಲಿದ್ದಾರೆ. ಈ ಕುರಿತು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ದೆಹಲಿಯ ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಟಿಎಂಸಿ ಸಂಸದ ಸಿನ್ಹಾ ಅವರು ಫೆಬ್ರವರಿ 1 ಮತ್ತು 2 ರಂದು ಭರ್ಜರಿ ಪ್ರಚಾರ ಮಾಡಲಿದ್ದಾರೆ. ತೆರೆದ ವಾಹನಗಳಲ್ಲಿ ಎಎಪಿ ನಾಯಕರಿಗೆ ಮತಯಾಚನೆ ಮಾಡಲಿದ್ದಾರೆ. ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಹಾಲಿ ಮುಖ್ಯಮಂತ್ರಿ ಅತಿಶಿ ಅವರ ಕಲ್ಕಾಜಿ ಕ್ಷೇತ್ರ ಹಾಗೂ ಮನೀಶ್ ಸಿಸೋಡಿಯಾ ಅವರ ಕಣಕ್ಕಿಳಿದ ಜಂಗ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಯಲಿದೆ ಎಂದು ತಿಳಿದು ಬಂದಿದೆ.
ದೆಹಲಿಗೆ ಬಿಹಾರ ರಾಜ್ಯದಿಂದ ಬಂದ ಪ್ರಮುಖ ರಾಜಕಾರಣ ಮತ್ತು ನಟರು ಕ್ಷೇತ್ರದ ಮತದಾರರನ್ನು ಎಎಪಿ ಪರ ಮತಯಾಚಿಸಬಹುದು. ಇದು ಎಎಪಿಗೆ ಹೆಚ್ಚಿನ ವರದಾಣವಾಗಲಿದೆ. ಬಿಹಾರ ಮತ್ತು ಉತ್ತರ ಪ್ರದೇಶದಿಂದ ವಲಸೆ ಬಂದ ಮತದಾರರನ್ನು ಟಾರ್ಗೆಟ್ ಮಾಡಿಕೊಳ್ಳಲಾಗಿದೆ. ದೆಹಲಿಯದ್ಯಂತ ಎಎಪಿ ಹೆಚ್ಚಿನ ಮತಗಳಿಕೆ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಅದರ ಭಾಗವಾಗಿ ಟಿಎಂಸಿ ನಾಯಕರಿಂದ ಪ್ರಚಾರ ಮಾಡಿಸುತ್ತಿದೆ.
ಎಎಪಿಯ ದೆಹಲಿಯಲ್ಲಿ ಪ್ರಚಾರ ಮೆರವಣಿಗೆಯಲ್ಲಿ ಒಬ್ಬರು ಇಲ್ಲವೇ ಇಬ್ಬರು ಟಿಎಂಸಿ ನಾಯಕ ಇರಬಹುದು. ದೆಹಲಿಯಲ್ಲಿ ಸದ್ಯ ಎಎಪಿ-ಟಿಎಂಸಿ ಒಟ್ಟಿಗೆ ಇರುವ ಕಾರಣ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಎಎಪಿ ಎಂಬ ತ್ರಿಕೋನ ಸ್ಫರ್ಧೆ ಏರ್ಪಡುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ ವಿರುದ್ಧ INDIA ಮೈತ್ರಿಕೂಟ ರಚನೆ ಆಗಿತ್ತು. ಟಿಎಂಸಿ ಮತ್ತು ಎಎಪಿ ಆ ಮೈತ್ರಿ ಭಾಗವಾಗಿವೆ. ಇತ್ತ ಕಾಂಗ್ರೆಸ್ ಸಹ ಅದೇ ಒಕ್ಕೂಟದ ದೊಡ್ಡ ಸದಸ್ಯನಾಗಿದ್ದರು ದೆಹಲಿಯಲ್ಲಿ ಎಎಪಿ ವಿರುದ್ಧ ಪೈಪೋಟಿಗೆ ನಿಂತಿದೆ. ಮತ್ತೊಂದೆಡೆ ಬಿಜೆಪಿ ಸಹ ಮೈತ್ರಿ ಪಕ್ಷಗಳ ವಿರುದ್ಧ ಸೆಣಸಿ ದೆಹಲಿಯಲ್ಲಿ ಭಾವುಟ ನೆಡಲು ಕಾತರವಾಗಿದೆ. ಹೀಗಾಗಿ ಇಲ್ಲಿ ತ್ರಿಕೋನ ಪೈಪೋಟಿ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
ಎಲ್ಲ ರಾಜ್ಯಗಳಲ್ಲೂ ಬಲಿಷ್ಠ ಪಕ್ಷ ಮುನ್ನಡೆ ಸಾಧಿಸಲಿ ಎಂದು ಅಭಿಪ್ರಾಯ ಹೊರ ಹಾಕಿರುವ ಟಿಎಂಸಿ ನಾಯಕಿಯೊಬ್ಬರು, ದೆಹಲಿಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿ ರಚನೆ ಆಗಿಲ್ಲ. ಹಿಂದಿನ ಲೋಕಸಭಾ ಚುಣಾವಣೆ ವೇಳೆ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಘೋಷಿಸಿದ್ದವು, ಸದ್ಯ ಅವರು ಪ್ರತ್ಯೇಕವಾಗಿ ದೆಹಲಿ ಚುನಾವಣೆ ಎದುರಿಸುತ್ತಿವೆ ಎಂದು ತಿಳಿಸಿದ್ದಾರೆ.












Click it and Unblock the Notifications