Tirumala Tickets: ತಿರುಪತಿ ಡಿಸೆಂಬರ್ ದರ್ಶನ ಟಿಕೆಟ್ ಇಂದಿನಿಂದ ಲಭ್ಯ- ಟಿಕೆಟ್ ಬುಕ್ ಮಾಡುವುದು ಹೇಗೆ?
ತಿರುಪತಿ ತಿರುಮಲಕ್ಕೆ ಭೇಟಿ ನೀಡುವ ಭಕ್ತರಿಗೆ ಟಿಟಿಡಿ ಸಿಹಿ ಸುದ್ದಿಯನ್ನು ನೀಡಿದೆ. ಡಿಸೆಂಬರ್ ತಿಂಗಳಿನಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ವಿಶೇಷ ದರ್ಶನ ಟಿಕೆಟ್‌ಗಳು ಇಂದಿನಿಂದ ಲಭ್ಯವಾಗಲಿದೆ. ಡಿಸೆಂಬರ್ ತಿಂಗಳು ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಇಂದು ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು. ಹಾಗಾದರೆ ಟಿಕೆಟ್ ಬುಕ್ ಮಾಡುವ ಸಮಯ, ಹಂತಗಳನ್ನು ಇಲ್ಲಿ ತಿಳಿಯಿರಿ.
ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಡಿಸೆಂಬರ್‌ನ ವಿಶೇಷ ದರ್ಶನ ಟಿಕೆಟ್‌ಗಳನ್ನು ಇಂದು (ಸೆಪ್ಟೆಂಬರ್ 24) ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಿಸಿದೆ. ಈ ಬಾರಿ ಟಿಟಿಡಿ ವೆಂಕಟೇಶ್ವರನ ಆಶೀರ್ವಾದವನ್ನು ಪಡೆಯಲು ಉತ್ಸುಕರಾಗಿರುವ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದೆ. ದರ್ಶನ ಟಿಕೆಟ್‌ಗಳ ಜೊತೆಗೆ, ಟಿಟಿಡಿ ಇಂದು ಮಧ್ಯಾಹ್ನ 3 ಗಂಟೆಗೆ ತಿರುಮಲ ಮತ್ತು ತಿರುಪತಿ ಎರಡಕ್ಕೂ ಡಿಸೆಂಬರ್ ರೂಮ್ ಕೋಟಾವನ್ನು ಬಿಡುಗಡೆ ಮಾಡಲಿದ್ದು, ಭಕ್ತರು ಆನ್‌ಲೈನ್‌ನಲ್ಲಿ ರೂಮ್‌ಗಳನ್ನು ಬುಕ್ ಮಾಡಿಕೊಳ್ಳಬಹುದು.

ಹೆಚ್ಚುವರಿಯಾಗಿ ನವೆಂಬರ್ 27 ರಂದು ಬೆಳಿಗ್ಗೆ 11 ಗಂಟೆಗೆ, ಶ್ರೀವಾರಿ ಸೇವಾ ಕೋಟಾ, ನವನೀತ ಸೇವೆ ಮತ್ತು ಪರಕಾಮಣಿ ಸೇವಾ ಟಿಕೆಟ್‌ಗಳನ್ನು ಸಹ ಟಿಟಿಡಿ ವೆಬ್‌ಸೈಟ್‌ನಲ್ಲಿ ಲಭ್ಯಗೊಳಿಸಲಾಗುವುದು. ಭಕ್ತರು ತಮ್ಮ ದರ್ಶನ ಟಿಕೆಟ್‌ಗಳು, ಆರ್ಜಿತಸೇವೆಗಳು ಮತ್ತು ವಸತಿಗಳನ್ನು ಕಾಯ್ದಿರಿಸಲು ಅಧಿಕೃತ ವೆಬ್‌ಸೈಟ್ ttdevasthanams.ap.gov.in ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
ತಿರುಮಲ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಹೇಗೆ?
- ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ವೆಬ್‌ಸೈಟ್‌ನಲ್ಲಿ ಖಾತೆಯನ್ನು ರಚಿಸಿ
- ನಿಮ್ಮ ವೈಯಕ್ತಿಕ ವಿವರಗಳು, ಫೋಟೋ ಮತ್ತು ಗುರುತಿನ ಪುರಾವೆಗಳನ್ನು ಅಪ್‌ಲೋಡ್ ಮಾಡಿ
- ಪಾವತಿ ಗೇಟ್‌ವೇ ಆಯ್ಕೆಮಾಡಿ
- ದರ್ಶನದ ಪ್ರಕಾರ, ಸಮಯದ ಸ್ಲಾಟ್ ಮತ್ತು ಜನರ ಸಂಖ್ಯೆಯನ್ನು ಆರಿಸಿ
- ನಿಮ್ಮ ಜೊತೆಗಿರುವ ಜನರ ವಿವರಗಳನ್ನು ನಮೂದಿಸಿ
- ಪಾವತಿಯನ್ನು ಪೂರ್ಣಗೊಳಿಸಿ
- ಟಿಟಿಡಿ ವೆಬ್‌ಸೈಟ್‌ನಿಂದ ದರ್ಶನ ಟಿಕೆಟ್ ಡೌನ್‌ಲೋಡ್ ಮಾಡಿ
ತಿರುಪತಿ ಲಡ್ಡು ಬಗ್ಗೆ ಆರೋಪ
ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಆದರೆ ಸದ್ಯ ತಿರುಪತಿಯಲ್ಲಿ ಭಕ್ತರ ಸಂಖ್ಯೆ ತೀರಾ ಕಡಿಮೆಯಾಗಿದೆ. ಪಿತೃಪಕ್ಷ ಇರುವುದರಿಂದ ಭಕ್ತರ ಸಂಖ್ಯೆ ಈ ದಿನಗಳಲ್ಲಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಿರುಪತಿಯ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬನ್ನು ಬಳಕೆ ಮಾಡಲಾಗುತ್ತಿತ್ತು ಎನ್ನುವ ಆರೋಪದ ಹಿನ್ನೆಲೆಯಿಂದಲೂ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ.

ಈ ಆರೋಪ ಕೇಳಿ ಬಂದ ಬಳಿಕ ತಿರುಪತಿ ದೇವಸ್ಥಾನವನ್ನು ಹೋಮ ಹವನ ಮಾಡುವ ಮೂಲಕ ಶುದ್ಧಗೊಳಿಸಲಾಯಿತು. ಪ್ರಧಾನ ಅರ್ಚಕರು ಲಡ್ಡು ತಯಾರಿಕೆ ಸ್ಥಳ ಹಾಗೂ ಅನ್ನಪ್ರಸಾದ ತಯಾರಿಸುವ ಸ್ಥಳ ಸೇರಿದಂತೆ ದೇವಸ್ಥಾನವನ್ನೆಲ್ಲಾ ಶುಚಿಗೊಳಿಸಿ, ಶಾಂತಿ ಹೋಮ ಮಾಡಿದರು.
ಇನ್ನೂ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿ ಕೊಬ್ಬು ತಯಾರಿಕೆ ಆರೋಪ ಪ್ರಬಲ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಕ್ಕೂ ಗುರಿ ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒತ್ತಾಯಿಸಲಾಗುತ್ತಿದೆ.












Click it and Unblock the Notifications