Breaking: ಮೋದಿ, ಯೋಗಿ ವಿರುದ್ಧ ಭಾಷಣ: ಎಸ್‌ಪಿ ನಾಯಕ ಅಜಂ ಖಾನ್‌ಗೆ 3 ವರ್ಷ ಜೈಲು ಶಿಕ್ಷೆ
ಲಕ್ನೋ, ಅಕ್ಟೋಬರ್ 27: 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷ ಪೂರಿತ ಭಾಷಣ ಮಾಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರಿಗೆ ಮೂರು ವರ್ಷಗಳ ಜೈಲು ವಿಧಿಸಲಾಗಿದೆ.
2019ರಲ್ಲಿ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಅಜಂ ಖಾನ್ ದ್ವೇಷ ಪೂರಿತ ಭಾಷಣ ಮಾಡಿದ್ದಾರೆ ಎಂಬ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಉತ್ತರ ಪ್ರದೇಶದ ರಾಂಪುರ ನ್ಯಾಯಾಲಯವು ಅಜಂ ಖಾನ್ ಸೇರಿದಂತೆ ಇನ್ನಿಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. 3 ವರ್ಷ ಜೈಲು ಶಿಕ್ಷೆ ಹಾಗೂ ₹6000 ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ದೇಶದಲ್ಲಿ ಮುಸ್ಲಿಮರು ಬದುಕಲು ಕಷ್ಟಪಡುವ ವಾತಾವರಣವನ್ನು ಪ್ರಧಾನಿ ನಿರ್ಮಿಸುತ್ತಿದ್ದಾರೆ ಎಂದು ಅಜಂ ಖಾನ್ ಆರೋಪಿಸಿದ್ದರು.

ಅಖಿಲೇಶ್ ಯಾದವ್ ನೇತೃತ್ವ ಸಮಾಜವಾದಿ ಪಕ್ಷದಲ್ಲಿ ಅಜಂ ಖಾನ್ ಅವರು ಪ್ರಭಾವಿ ನಾಯಕರರು. ಅವರು ರಾಂಪುರ ಹಾಗೂ ಪಶ್ಚಿಮ ಉತ್ತರ ಪ್ರದೇಶದ ಇತರ ಭಾಗಗಳಲ್ಲಿ ಪ್ರಭಾವ ಹೊಂದಿದ್ದಾರೆ.
ಯೋಗಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ನನ್ನ ವಿರುದ್ಧ ಸಂಚು ರೂಪಿಸಿದೆ. ಪಟ್ಟುಬಿಡದೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಅಜಂ ಖಾನ್ ಆರೋಪಿಸಿದ್ದರು. ಈ ವಾದವನ್ನು ಸುಪ್ರೀಂ ಕೋರ್ಟ್‌ನಲ್ಲೂ ಇಟ್ಟಿದ್ದರು.

ವಂಚನೆ ಪ್ರಕರಣಕ್ಕೆ ಸಂಬಂಧಿಸಿಂತೆ ಎರಡು ವರ್ಷ ಜೈಲಿನಲ್ಲಿದ್ದ ಅಜಂ ಖಾನ್ ಅವರಿಗೆ ಈ ವರ್ಷದ ಮೇನಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
2017 ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಜಂ ಖಾನ್ ವಿರುದ್ಧ ಭ್ರಷ್ಟಾಚಾರ, ಭೂಕಬಳಿಕೆ, ವಂಚನೆ ಸೇರಿದಂತೆ ಒಟ್ಟು 87 ಪ್ರಕರಣಗಳನ್ನು ದಾಖಲಿಸಲಾಗಿದೆ.












Click it and Unblock the Notifications