ಅಂಬುಲೆನ್ಸ್‌ನಲ್ಲೇ ಬಿದ್ದು ಗಳಗಳನೇ ಅತ್ತ ತಮಿಳುನಾಡು ಡಿಎಂಕೆ ಸಚಿವ
ಚೆನ್ನೈ, ಜೂನ್ 14: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮಿಳುನಾಡು ಅಬಕಾರಿ ಸಚಿವ ಮತ್ತು ಡಿಎಂಕೆ ನಾಯಕ ವಿ ಸೆಂಥಿಲ್ ಬಾಲಾಜಿ ಅವರನ್ನು ಬುಧವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದು, ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅವರು ಅಂಬ್ಯಲೆನ್ಸ್‌ನಲ್ಲೇ ಗಳಗಳನೇ ಅತ್ತ ಘಟನೆ ನಡೆದಿದೆ.
ವಿಚಾರಣೆಗಾಗಿ ಕರೆದೊಯ್ಯುವ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಸೆಂಥಿಲ್ ಬಾಲಾಜಿ ಅವರ ಮನೆಯ ಮೇಲೆ ದಾಳಿ ನಡೆಸಿದ್ದರು. ಹಲವು ಗಂಟೆಗಳ ವಿಚಾರಣೆ ಬಳಿಕ ಬುಧವಾರ ಬೆಳಗ್ಗೆ ಸಚಿವರನ್ನು ಬಂಧಿಸಲಾಯಿತು.

ಇಡಿ ಬಂಧನದ ನಂತರ ಅಧಿಕಾರಿಗಳು ಸೆಂಥಿಲ್ ಬಾಲಾಜಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಂತೆ ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ನಾಟಕೀಯ ದೃಶ್ಯಗಳು ಕಂಡುಬಂದವು. ಹೊರಗೆ ಅವರ ಬೆಂಬಲಿಗರು ಜಾರಿ ನಿರ್ದೇಶನಾಲಯದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾಗ ಡಿಎಂಕೆ ನಾಯಕ ಆಂಬ್ಯುಲೆನ್ಸ್‌ನಲ್ಲಿ ಬಿದ್ದು ಹೊದ್ದಾಡಿ ಅಳುತ್ತಿರುವುದು ಕಂಡುಬಂದಿದೆ.
ಅಳುತ್ತಲೇ ಇದ್ದ ಸಚಿವರನ್ನು ಆಂಬ್ಯುಲೆನ್ಸ್‌ನಿಂದ ಹೊರಕರೆದುಕೊಂಡು ಬರಲಾಯಿತು. ಬಾಲಾಜಿ ಅವರನ್ನು ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಗಿದೆ. ಇಡಿ ಅವರನ್ನು ಬಂಧಿಸಿದ್ದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ, ಬಂಧನ ಮಾಡುವಾಗ ಯಾವುದೇ ಮಾರ್ಗಸೂಚಿಗಳನ್ನು ಅವರು ಅನುಸರಿಸಿಲ್ಲ ಎಂದು ಡಿಎಂಕೆ ಸಂಸದ ಮತ್ತು ವಕೀಲ ಎನ್‌ಆರ್ ಎಲಾಂಗೋ ಹೇಳಿದ್ದಾರೆ.
ನಾನು ಸೆಂಥಿಲ್ ಬಾಲಾಜಿ ಐಸಿಯುಗೆ ಸ್ಥಳಾಂತರಿಸಿದಾಗ ನೋಡಿದೆ. ವೈದ್ಯರು ಅವರ ಆರೋಗ್ಯ ಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದಾಗ ಇದು ಒಂದು ವಿಧಾನವಾಗಿದೆ, ವೈದ್ಯರು ಎಲ್ಲಾ ಗಾಯಗಳನ್ನು ಗಮನಿಸಬೇಕು ಮತ್ತು ವರದಿಯನ್ನು ನೋಡಿದ ನಂತರ ತಿಳಿಯುತ್ತದೆ. ಅವರನ್ನು ಬಂಧಿಸಲಾಗಿದೆ ಎಂದು ಅಧಿಕೃತವಾಗಿ ನಮಗೆ (ಇಡಿಯಿಂದ) ತಿಳಿಸಲಾಗಿಲ್ಲ ವಕೀಲ ಎಲಾಂಗೋ ಹೇಳಿದರು.
#WATCH | Tamil Nadu Electricity Minister V Senthil Balaji breaks down as ED officials took him into custody in connection with a money laundering case and brought him to Omandurar Government in Chennai for medical examination pic.twitter.com/aATSM9DQpu
— ANI (@ANI) June 13, 2023
ಇನ್ನು ಸೆಂಥಿಲ್ ಬಾಲಾಜಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ನಾವು ಕಾನೂನಾತ್ಮಕವಾಗಿ ಎದುರಿಸುತ್ತೇವೆ, ಬಿಜೆಪಿಯ ಬೆದರಿಕೆಗೆ ಡಿಎಂಕೆ ಹೆದರುವುದಿಲ್ಲ ಎಂದು ತಮಿಳುನಾಡು ಕ್ರೀಡಾ ಸಚಿವ ಹಾಗೂ ಡಿಎಂಕೆ ಯುವ ವಿಭಾಗದ ಮುಖ್ಯಸ್ಥ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಇತ್ತೀಚೆಗೆ, ಆದಾಯ ತೆರಿಗೆ (ಐಟಿ) ಅಧಿಕಾರಿಗಳು ರಾಜ್ಯಾದ್ಯಂತ ಸೆಂಥಿಲ್ ಬಾಲಾಜಿ ಅವರ ಸಹಚರರ ಆಸ್ತಿಗಳನ್ನು ಶೋಧಿಸಿದ್ದಾರೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಆಡಳಿತದಲ್ಲಿ ಸಚಿವರಾಗಿದ್ದಾಗ ಸೆಂಥಿಲ್ ಬಾಲಾಜಿ ವಿರುದ್ಧದ ಉದ್ಯೋಗಕ್ಕಾಗಿ ನಗದು ಆರೋಪಗಳ ತನಿಖೆಯನ್ನು ಮುಂದುವರಿಸಲು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ ಈ ಘಟನೆ ನಡೆದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಸಂಸ್ಥೆಗೆ ಅನುಮತಿ ನೀಡಿತ್ತು.












Click it and Unblock the Notifications