Telangana Election: ತೆಲಂಗಾಣದಲ್ಲಿ ಬಿರುಸಿನ ಮತದಾನ! ಕೆಸಿಆರ್ ಹ್ಯಾಟ್ರಿಕ್ ಜಯಕ್ಕೆ ಅಡ್ಡಿಯಾಗುತ್ತಾ ಕಾಂಗ್ರೆಸ್?
ಪಂಚ ರಾಜ್ಯಗಳ ಚುನಾವಣೆಗೆ ಇಂದು ತೆರೆ ಬೀಳಲಿದೆ, ಐದು ರಾಜ್ಯಗಳಲ್ಲಿ ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ಮತದಾನ ಮುಕ್ತಾಯವಾಗಿದ್ದು, ತೆಲಂಗಾಣದಲ್ಲಿ ಇಂದು (ಗುರುವಾರ) ಮತದಾನ ನಡೆಯುತ್ತಿದೆ. 119 ಸ್ಥಾನಗಳಿಗೆ ಇಂದು ಬೆಳಗ್ಗೆ ಮತದಾನ ಆರಂಭವಾಗಿದೆ.
ಸತತ ಎರಡು ಬಾರಿ ಅಧಿಕಾರ ಹಿಡಿದಿರುವ ಆಡಳಿತಾರೂಢ ಬಿಆರ್‌ಎಸ್ ಪಕ್ಷಕ್ಕೆ ಈ ಬಾರಿ ಕಾಂಗ್ರೆಸ್ ಸವಾಲಾಗಿದೆ. ಬಿಜೆಪಿ ಕೂಡ ತೆಲಂಗಾಣದಲ್ಲಿ ಭರ್ಜರಿ ಪ್ರಚಾರ ಮಾಡಿದ್ದು, ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ.

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಸತತ ಮೂರನೇ ಬಾರಿಗೆ ಗೆಲ್ಲಲು ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳು, ರೈತರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ.
ಪ್ರಮುಖರಿಂದ ಮತದಾನ
ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಬಿಜೆಪಿಯ ರಾಜ್ಯ ಮುಖ್ಯಸ್ಥರೂ ಆಗಿರುವ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ, ಬಿಆರ್‌ಎಸ್ ಶಾಸಕಿ ಕೆ.ಕವಿತಾ, ಸಚಿವ ಕೆ.ಟಿ.ರಾಮರಾವ್, ಜನಪ್ರಿಯ ನಟರಾದ ಚಿರಂಜೀವಿ, ಅಲ್ಲು ಅರ್ಜುನ್ ಸೇರಿದಂತೆ ಪ್ರಮುಖರು ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ ಬೆಳಗ್ಗೆ 11 ಗಂಟೆಗೆ ಶೇ.20.64ರಷ್ಟು ಮತದಾನವಾಗಿತ್ತು. ಇವಿಎಂ ಅಸಮರ್ಪಕವಾದ ಕಾರಣ ಕಾಮರೆಡ್ಡಿ ಬೂತ್‌ನಲ್ಲಿ 30 ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತ್ತು.
ತೆಲಂಗಾಣದ ಸ್ಥಾಪಕ ಪಿತಾಮಹ ಎಂದೇ ಬಿಂಬಿಸಲಾಗಿದ್ದು, 2014 ರಿಂದ ಹೊಸ ರಾಜ್ಯ ಸ್ಥಾಪನೆಯಾದ ಬಳಿಕ ಎರಡೂ ಚುನಾವಣೆಗಳಲ್ಲಿ ಗೆದ್ದಿದ್ದಾರೆ.
ಕೆಸಿಆರ್ ಈ ಬಾರಿ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಚುನಾವಣೆಗೆ ನಿಂತಿದ್ದಾರೆ, ಕಾಮರೆಡ್ಡಿಯಲ್ಲಿ ಕಾಂಗ್ರೆಸ್‌ನ ರೇವಂತ್ ರೆಡ್ಡಿ ಮತ್ತು ಅವರ ಭದ್ರಕೋಟೆಯಾದ ಗಜ್ವೇಲ್‌ನಲ್ಲಿ ಬಿಜೆಪಿಯ ಈಟಾಲ ರಾಜೇಂದ್ರ ವಿರುದ್ಧ ಸ್ಪರ್ಧಿಸಿದ್ದಾರೆ.
ಕರ್ನಾಟಕದ ದಟ್ಟ ಪ್ರಭಾವ!
2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಗೆಲುವು ಸಿಕ್ಕ ನಂತರ, ಪಕ್ಷದ ಆತ್ಮವಿಶ್ವಾಸ ಹೆಚ್ಚಾಗಿದೆ. ಆಡಳಿತಾರೂಢ ಬಿಜೆಪಿ ಕರ್ನಾಟಕದಲ್ಲಿ ಧೂಳಿಪಟವಾಗಿತ್ತು, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ತೆಲಂಗಾಣದ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ನೇತೃತ್ವದಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ.
ಬಿಜೆಪಿಗೆ ಈಗ ದಕ್ಷಿಣ ಭಾರತದಲ್ಲಿ ನೆಲೆ ಇಲ್ಲದಂತಾಗಿದೆ. ಇದ್ದ ಏಕೈಕ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ದಕ್ಷಿಣದಲ್ಲಿ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸಲು ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಬಂಡಿ ಸಂಜಯ್ ಅವರನ್ನು ಅದರ ರಾಜ್ಯ ಮುಖ್ಯಸ್ಥರನ್ನಾಗಿ ಕೈಬಿಟ್ಟು ಅವರ ಸ್ಥಾನಕ್ಕೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರನ್ನು ನೇಮಿಸುವ ಕ್ರಮಕ್ಕೆ ಪಕ್ಷದಲ್ಲೇ ಅಸಮಾಧಾನ ಇದೆ. ಹಾಗೆಯೇ ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರ ಜನಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.
ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ತೆಲಂಗಾಣದಲ್ಲಿ ಐದು ರಾಜ್ಯಗಳಲ್ಲಿ ಕೊನೆಯದಾಗಿ ಮತದಾನ ನಡೆಯುತ್ತಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಿಜೋರಾಂನಲ್ಲಿ ಮತದಾನ ಮುಕ್ತಾಯವಾಗಿದೆ. ಈ ಐದು ರಾಜ್ಯಗಳ ಚುನಾವಣೆಯನ್ನು 2024 ರ ಲೋಕಸಭೆ ಚುನಾವಣೆಗೆ ಮೊದಲು ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ಐದೂ ರಾಜ್ಯಗಳ ಮತ ಎಣಿಕೆ ಡಿಸೆಂಬರ್ 3ರಂದು












Click it and Unblock the Notifications