Get Updates
Get notified of breaking news, exclusive insights, and must-see stories!

ಹರಿದ್ವಾರದಲ್ಲಿ ಹಾಲಿವುಡ್ ತಾರೆ ಸ್ಟಾಲೋನ್ ಮಗನ 'ಶ್ರಾದ್ಧ'

ಹರಿದ್ವಾರ,ಅ.14: ಹಾಲಿವುಡ್ ನ ದಿಗ್ಗಜ ಸಿಲ್ವೆಸ್ಟರ್ ಸ್ಟಾಲೋನ್ ಯಾರಿಗೆ ಗೊತ್ತಿಲ್ಲ. Rambo, ರಾಕಿ ಖ್ಯಾತಿಯ ಸ್ಟಾಲೋನ್ ಅವರು ಇತ್ತೀಚೆಗೆ ತಮ್ಮ ಪುತ್ರನ ಶ್ರಾದ್ಧವನ್ನು ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ನೆರವೇರಿಸಿದ ಸುದ್ದಿ ಬಂದಿದೆ. 69 ವರ್ಷ ವಯಸ್ಸಿನ ಸ್ಟಾಲೋನ್ ಅವರು ತಮ್ಮ ಅಗಲಿದ ಪುತ ಸೇಜ್ ಅವರ ಶ್ರಾದ್ಧ ಕಾರ್ಯವನ್ನು ಮಾಡಲು ಹರಿದ್ವಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

2012ರ ಜುಲೈ ತಿಂಗಳಿನಲ್ಲಿ 36 ವರ್ಷದ ಸೇಜ್ ಸ್ಟಾಲೋನ್ ಅವರು ಅಕಾಲಿಕ ಮರಣಕ್ಕೀಡಾಗಿದ್ದರು. ಪುತ್ರ ಶೋಕಂ ನಿರಂತರಂ ಎಂಬಂತೆ ಸ್ಟಾಲೋನ್ ಗೆ ಮಗನ ನೆನಪು, ಪ್ರೇತ ಕಾಡುತ್ತಲೇ ಇತ್ತಂತೆ. ಇದಕ್ಕೆ ಪರಿಹಾರ ಕಾಣದಿದ್ದಾಗ, ಹರಿದ್ವಾರದಲ್ಲಿ ಶ್ರಾದ್ಧ ಕಾರ್ಯ ಪೂರೈಸಿ, ಪಿಂಡ ಪ್ರಧಾನ, ದಾನ ಮುಂತಾದ ಕ್ರಿಯೆಗಳನ್ನು ನೆರವೇರಿಸಿದರೆ ನಿಮ್ಮ ಮಗನ ಆತ್ಮಕ್ಕೆ ತೃಪ್ತಿ ಸಿಗುತ್ತದೆ ಎಂದು ಖ್ಯಾತ ಜ್ಯೋತಿಷಿ ಪ್ರತೀಕ್ ಮಿಶ್ರಪುರಿ ಅವರು ಸಲಹೆ ನೀಡಿದ್ದರಂತೆ.[ಮಹಾಲಯದಲ್ಲಿ ಯಾವಾಗ ಶ್ರಾದ್ಧ ಮಾಡಬಾರದು? ಯಾವಾಗ ಮಾಡಬೇಕು]

Sylvester Stallone sends brother to Haridwar to perform dead son's 'shradh'

ಅದರಂತೆ, ಸ್ಟಾಲೋನ್ ಅವರು ತಮ್ಮ ಮಲ ಸೋದರ ಮೈಕಲ್ ಹಾಗೂ ಆತನ ಪತ್ನಿಯನ್ನು ಹರಿದ್ವಾರಕ್ಕೆ ಕಳಿಸಿದ್ದಾರೆ. ಹರಿದ್ವಾರದ ಕಂಖಾಲ್‌ ಎಂಬಲ್ಲಿಗೆ ಬಂದ ಮೈಕಲ್ ಅವರು ತಿಥಿ, ಶ್ರಾದ್ಧ ಪೂರೈಸಿದ್ದಾರೆ. ವೇದಿಕ್ ಇಂಡಿಯನ್ ಅಸ್ಟ್ರಾಲಜಿಯ ಚೇರ್ಮನ್ ಆಗಿರುವ ಪ್ರತೀಕ್ ಮಿಶ್ರಪುರಿ ಅವರ ನಿರ್ದೇಶನದಂತೆ ಅಪರ ಕಾರ್ಯಗಳು ಪೂರೈಸಲಾಗಿದೆ.

ಲಾಸ್‌ ಏಂಜಲಿಸ್‌ನ ಅಪಾರ್ಟ್‌ಮೆಂಟ್‌ ಮೂರು ವರ್ಷಗಳ ಹಿಂದೆ ಸ್ಟಾಲೋನ್‌ ಅವರ ಪುತ್ರ ನಟ, ನಿರ್ದೇಶಕ ಸೇಜ್‌ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಅದರೆ, ನಂತರ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಘೋಷಿಸಲಾಗಿತ್ತು.

ಜುಲೈ 21ಕ್ಕೆ ಲಾಸ್ ಏಂಜಲೀಸ್ ನ ಸೈಂಟ್ ಮಾರ್ಟಿನ್ ಆಫ್ ಟೂರ್ಸ್ ಕ್ಯಾಥೋಲಿಕ್ ಚರ್ಚ್ ನಲ್ಲಿ ಆವರ ಅಂತಿಮ ಸಂಸ್ಕಾರ ನೆರವೇರಿಸಲಾಗಿತ್ತು.ಅದರೆ, ಮಗನ ಪ್ರೇತ ಕಾಣುತ್ತಿದ್ದೇನೆ ಎಂದು ಸ್ಟಾಲೋನ್ ಹೇಳಿಕೊಂಡಿದ್ದರು. ಇದಕ್ಕೆ ಪರಿಹಾರವಾಗಿ ಪ್ರೇತ ತೃಪ್ತಿ, ಶ್ರಾದ್ಧ ಕಾರ್ಯಗಳನ್ನು ಹರಿದ್ವಾರದಲ್ಲಿ ನಡೆಸಲಾಗಿದೆ. ಮೈಕಲ್ ಅವರು ತಮ್ಮ ಸೋದರಿ ಟೋನ್ ಆನ್ ಅವರ ಶ್ರಾದ್ಧವನ್ನು ಪೂರೈಸಿಕೊಂಡು ಫಿಲಡೆಲ್ಫಿಯಾಗೆ ತೆರಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+