Sabarimala: ಶಬರಿಮಲೆ ಭಕ್ತರೇ ಗಮನಿಸಿ.. ಮಕರ ಜ್ಯೋತಿ ನೋಡಲು 5000 ಜನರಿಗೆ ಮಾತ್ರ ಅವಕಾಶ
ತಿರುವನಂತಪುರಂ ಜನವರಿ 8: ಮಕರ ಸಂಕ್ರಾಂತಿಯ ದಿನದಂದು ಮಕರ ಜ್ಯೋತಿಯನ್ನ ಕಣ್ತುಂಬಿಕೊಳ್ಳಲು ಶಬರಿಮಲೆಗೆ ಭಕ್ತ ಸಾಗರವೇ ಹರಿದು ಬರುತ್ತದೆ. ಪ್ರತೀ ವರ್ಷ ಭಕ್ತ ಸಾಗರ ಮಕರ ಜ್ಯೋತಿಯನ್ನು ಕಂಡು ಪುನೀತರಾಗುತ್ತಾರೆ. ಆದರೆ ಈ ಬಾರಿ ಮಕರ ಜ್ಯೋತಿ ವೀಕ್ಷಣೆಗೆ ಸ್ಪಾಟ್ ಬುಕಿಂಗ್ ಸೌಲಭ್ಯವನ್ನು ಕೇವಲ 5,000ಕ್ಕೆ ಮಿತಿಗೊಳಿಸಲಾಗಿದೆ. ಅಂದರೆ ಜನವರಿ 8ರಿಂದ ಜನವರಿ 15ರವರೆಗೆ ದಿನಕ್ಕೆ 5,000 ಯಾತ್ರಾರ್ಥಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಶಬರಿಮಲೆಗೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತರು ಕೂಡ ಈ ಬಗ್ಗೆ ಅರಿತಿರುವುದು ಉತ್ತಮ.
ಹೌದು... ಜನವರಿ 14ರಂದು ಮಕರವಿಳಕ್ಕು ಉತ್ಸವ (ಮಕರ ಜ್ಯೋತಿ) ನಡೆಯಲಿದೆ. ಕೇರಳ ಹೈಕೋರ್ಟ್‌ನ ನಿರ್ದೇಶನದ ಆಧಾರದ ಮೇಲೆ 5,000 ಯಾತ್ರಾರ್ಥಿಗಳಿಗೆ ಮಾತ್ರ ಮಕರ ಜ್ಯೋತಿ ದರ್ಶನಕ್ಕೆ ಅವಕಾಶ ಕಲ್ಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಜನದಟ್ಟಣೆಯನ್ನು ತಡೆಯುವ ಗುರಿಯನ್ನು ಹೊಂದಿದ್ದು ಮಕರ ಜ್ಯೋತಿ ವೀಕ್ಷಣೆಯ ಸಮಯದಲ್ಲಿ ಜನಸಂದಣಿ ನಿರ್ವಹಣೆಗಾಗಿ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕೇರಳ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇವಸ್ವಂ ಬೋರ್ಡ್ ವೆಬ್‌ಸೈಟ್‌ನಲ್ಲಿ ದೇವರ ದರ್ಶನಕ್ಕೆ ಜನವರಿ 12ರಂದು 60,000, ಜನವರಿ 13ರಂದು 50,000 ಮತ್ತು ಜನವರಿ 14ರಂದು 40,000ಕ್ಕೆ ವರ್ಚುವಲ್ ಕ್ಯೂ ಬುಕ್ಕಿಂಗ್‌ಗಳನ್ನು ನಿಗದಿಪಡಿಸಲಾಗಿದೆ. ಜೊತೆಗೆ ದಟ್ಟಣೆಯನ್ನು ತಪ್ಪಿಸಲು ಭಕ್ತರು ಬೆಟ್ಟದ ಮೇಲೆ ಕ್ಯಾಂಪ್ ಮಾಡದಂತೆ ಸೂಚಿಸಲಾಗಿದೆ.
ಈಗಾಗಲೇ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಕ್ತರನ್ನು ಪಂಪಾಕ್ಕೆ ತೆರಳುವ ಮುನ್ನ ನಿಲಕ್ಕಲ್‌ನಲ್ಲಿ ತಪಾಸಣೆ ನಡೆಸಲಾಗುವುದು. ಮಕರವಿಳಕ್ಕು ಜ್ಯೋತಿಯನ್ನು ವೀಕ್ಷಿಸಲು ಸಾಂಪ್ರದಾಯಿಕವಾಗಿ ಜನವರಿ 10 ರಿಂದ ಯಾತ್ರಿಕರು ಕಾಯುವ ಪರ್ಣಶಾಲೆಗಳಲ್ಲಿ ಅಡುಗೆ ಮತ್ತು ಇತರ ಚಟುವಟಿಕೆಗಳ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು. ಜ್ಯೋತಿ ದರ್ಶನಕ್ಕಾಗಿ ಪ್ರಮುಖ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಿರುವಾಭರಣಂ ಮೆರವಣಿಗೆ
ತಿರುವಾಭರಣ ಮೆರವಣಿಗೆ ಜನವರಿ 12 ರಂದು ಮಧ್ಯಾಹ್ನ 1 ಗಂಟೆಗೆ ವಲಿಯ ಕೊಯಿಕ್ಕಲ್ ದೇವಸ್ಥಾನ ಪಂದಳಂನಿಂದ ಧಾರ್ಮಿಕ ವಿಧಿ ಮತ್ತು ದರ್ಶನದ ನಂತರ ಪ್ರಾರಂಭವಾಗುತ್ತದೆ. ಈ ಮೆರವಣಿಗೆಯ ನಂತರ ಈ ದೇವರು ರಾತ್ರಿ 9:30ಕ್ಕೆ ಅಯಿರೂರು ಪುತಿಯಕಾವು ದೇವಸ್ಥಾನದಲ್ಲಿ ಇರಲಿದೆ. ನಂತರ ಜನವರಿ 13 ರಂದು ಮುಂಜಾನೆ 3 ಗಂಟೆಗೆ ಪುನರಾರಂಭಗೊಳ್ಳಲಿದೆ.
ರಾತ್ರಿ 9 ಗಂಟೆಗೆ ಲಾಹಾದಲ್ಲಿ ಮತ್ತೊಂದು ನಿಲುಗಡೆ ನಂತರ, ಜನವರಿ 14 ರಂದು ಶಬರಿಮಲೆಗೆ ತೆರಳುತ್ತದೆ. ಸಂಜೆ 5:30 ಕ್ಕೆ ಸನ್ನಿಧಾನಕ್ಕೆ ಆಗಮಿಸುತ್ತದೆ. ಈ ಮಾರ್ಗ ಪಂಡಿತಾವಲಂ, ಚೆರಿಯಾನವಟ್ಟಂ, ನೀಲಿಮಲ ಮತ್ತು ಅಪಾಚಿಮೇಡುವನ್ನು ಒಳಗೊಂಡಿರುತ್ತದೆ. ಯಾತ್ರಾರ್ಥಿಗಳ ಸುರಕ್ಷತೆಗಾಗಿ ಪೊಲೀಸರು ಮೆರವಣಿಗೆಯ ಹಾದಿಯಲ್ಲಿ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸುತ್ತಾರೆ.
ದಾಖಲೆ ಯಾತ್ರಿಕರು ಆಗಮನ
ನವೆಂಬರ್ 15ರಂದು ಪ್ರಾರಂಭವಾದ ತೀರ್ಥಯಾತ್ರೆಯ ಋತು ಜನವರಿ 5ರ ವೇಳೆಗೆ 39,02,610 ಭಕ್ತರ ದಾಖಲೆಯನ್ನು ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 35,12,691 ಪ್ರವಾಸಿಗರು ಆಗಮಿಸಿದ್ದರು. ಡಿಸೆಂಬರ್ 30 ರಂದು ಮಕರವಿಳಕ್ಕು ಸೀಸನ್ ಆರಂಭವಾದಾಗಿನಿಂದ 6,22,849 ಯಾತ್ರಿಕರು ದೇಗುಲಕ್ಕೆ ಭೇಟಿ ನೀಡಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications