Tirupati: ತಿರುಪತಿಗೆ ಭೇಟಿ ನೀಡಿದ ದಕ್ಷಿಣ ನಟಿ ಸಂಯುಕ್ತ ಮೆನನ್, ಗಾಯಕಿ ಮಂಗ್ಲಿ

ವಿಷ್ಣುವಿನ ಅವತಾರ ವೆಂಕಟೇಶ್ವರನಿಗೆ ಸಮರ್ಪಿತವಾದ ತಿರುಪತಿ ದೇವಸ್ಥಾನ ದೇಶದ ಅತಿ ಹೆಚ್ಚು ಭೇಟಿ ನೀಡುವ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ವಾರ್ಷಿಕವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಆಂಧ್ರಪ್ರದೇಶದ ಈ ಪ್ರಶಿದ್ಧ ದೇವಸ್ಥಾನಕ್ಕೆ ಇಂದು ನಟಿ ಸಂಯುಕ್ತ ಮೆನನ್ ಹಾಗೂ ಗಾಯಕಿ ಮಂಗ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

'ವಾಥಿ' ನಟಿ ಸಂಯುಕ್ತಾ ವೆಂಕಟೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ, ದೇವಾಲಯದ ಅರ್ಚಕರು ರಂಗನಾಯಕಕುಲ ಮಂಟಪದಲ್ಲಿ ವೈದಿಕ ಆಶೀರ್ವಾದ ನೀಡಿದರು. ಜೊತೆಗೆ ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ಅವರ ಭೇಟಿಯ ಸಮಯದಲ್ಲಿ ದೇವಾಲಯದ ತೀರ್ಥ ಮತ್ತು ಪ್ರಸಾದವನ್ನು ನೀಡಿ ಗೌರಯುತವಾಗಿ ಬೀಳ್ಕೊಟ್ಟರು.

South actress samyuktha menon and singer mangli visit tirupati venkateswara temple

ದೇವಸ್ಥಾನ ಭೇಟಿ ವೇಳೆ ಸಂಯುಕ್ತಾ ಲೈಟ್‌ ಆಗಿ ಮೇಕಪ್ ಕಪ್ ಮಾಡಿಕೊಂಡಿದ್ದರು. ದೊಡ್ಡ ಕಿವಿಯೋಲೆಯೊಂದಿಗೆ ಸೀರೆಯನ್ನುಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಪೂಜೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಯುಕ್ತಾ ತಮ್ಮ ಮುಂದಿನ ಸಿನಿಮಾ ಯೋಜನೆಗಳ ಬಗ್ಗೆ ಹೇಳಿಕೊಂಡರು. ಈ ವರ್ಷ ಸತತವಾಗಿ ಹಲವಾರು ಸಿನಿಮಾಗಳು ಬಿಡುಗಡೆಯಾಗಲಿವೆ.

"ಈ ವರ್ಷ ನನಗೆ ಬಹಳ ಮುಖ್ಯವಾದ ಸಿನಿಮಾಗಳು ಬರುತ್ತಿವೆ. ನನಗೆ ಮಾತ್ರವಲ್ಲ, ನನ್ನ ಜೊತೆ ಕೆಲಸ ಮಾಡಿದ ಎಲ್ಲರೂ ಚೆನ್ನಾಗಿ ಮುಂದೆ ಬರಬೇಕೆಂದು ನಾನು ಬಯಸುತ್ತೇನೆ. ನಾನು ಐದು ಸಿನಿಮಾಗಳನ್ನು ಮಾಡುತ್ತಿದ್ದೇನೆ, ಅವುಗಳು ಸತತವಾಗಿ ಬಿಡುಗಡೆಯಾಗಲಿವೆ" ಎಂದು ಸಂಯುಕ್ತಾ ಹೇಳಿದರು. ಸಂಯುಕ್ತಾ ಮೆನನ್ 'ಪಾಪ್‌ಕಾರ್ನ್', 'ಲಿಲ್ಲಿ', 'ಗಾಳಿಪಟ 2', 'ವಾಥಿ' ಮತ್ತು 'ವಿರೂಪಾಕ್ಷ' ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ.

ಇದೇ ದಿನ ಗಾಯಕಿ ಮಂಗ್ಲಿ ಕೂಡ ಕುಟುಂಬ ಮತ್ತು ಆಪ್ತರೊಂದಿಗೆ ಸ್ವಾಮಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಗಾಯಕಿ ಮಂಗ್ಲಿ ದೇವಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಸುತ್ತುವರೆದಿದ್ದು ಕಂಡು ಬಂತು.

ತಿರುಪತಿಗೆ ಗಾಯಕ ಥಮನ್ ಮತ್ತು ನಟ ಅಶ್ವಿನ್ ಭೇಟಿ

ಅಲ್ಲದೆ ಸೋಮವಾರ, ಸಂಗೀತ ಸಂಯೋಜಕ ಮತ್ತು ಗಾಯಕ ಥಮನ್ ಮತ್ತು ನಟ ಅಶ್ವಿನ್ ಬಾಬು ಕೂಡ ಆಂಧ್ರಪ್ರದೇಶದ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಸಂಗೀತ ನಿರ್ದೇಶಕ ಥಮನ್ ಇತ್ತೀಚೆಗೆ ಬಾಬಿ ಅವರ ಇತ್ತೀಚಿನ ತೆಲುಗು ಚಿತ್ರ 'ಡಾಕು ಮಹಾರಾಜ್' ಗೆ ಸಂಗೀತ ಸಂಯೋಜಿಸಿದ್ದಾರೆ. ಇದರಲ್ಲಿ ನಂದಮೂರಿ ಬಾಲಕೃಷ್ಣ, ಬಾಬಿ ಡಿಯೋಲ್, ಶ್ರದ್ಧಾ ಶ್ರೀನಾಥ್ ಮತ್ತು ಪ್ರಜ್ಞಾ ಜೈಸ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟಿಟಿಡಿಗೆ ಕೋಟಿ ದೇಣಿಗೆ

ಚೆನ್ನೈ ಮೂಲದ ಲೋಕೋಪಕಾರಿ ವರ್ಧಮಾನ್ ಜೈನ್ ಭಾನುವಾರ ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) 6 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ವೆಂಕಯ್ಯ ಚೌಧರಿ ಅವರ ಸಮ್ಮುಖದಲ್ಲಿ ತಿರುಮಲ ದೇವಸ್ಥಾನದೊಳಗಿನ ರಂಗನಾಯಕಕುಲ ಮಂಟಪದಲ್ಲಿ ದೇಣಿಗೆಯನ್ನು ಹಸ್ತಾಂತರಿಸಲಾಯಿತು.

6 ಕೋಟಿ ರೂಪಾಯಿ ದೇಣಿಗೆಯಲ್ಲಿ ಭಕ್ತಿ ಕಾರ್ಯಕ್ರಮಗಳಲ್ಲಿ ಪ್ರಸಾರ ತಯಾರಿಸಲು ಮತ್ತು ಹಿಂದೂ ಧಾರ್ಮಿಕ ಚಟುವಟಿಕೆಗಳನ್ನು ಉತ್ತೇಜಿಸಲು ಮೀಸಲಾಗಿರಿಸಲಾಗುತ್ತದೆ. ವೇದಿಕೆಯಲ್ಲಿ ವೆಂಕಟೇಶ್ವರ ಭಕ್ತಿ ಚಾನೆಲ್ (ಎಸ್‌ವಿಬಿಸಿ)ಗೆ 5 ಕೋಟಿ ರೂ. ಹಂಚಿಕೆ ಮಾಡಲಾಯಿತು. ಉಳಿದ 1 ಕೋಟಿ ರೂ.ಗಳನ್ನು ಗೋ ರಕ್ಷಣೆಗಾಗಿ ಕೆಲಸ ಮಾಡುವ ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವವನ್ನು ಎತ್ತಿ ತೋರಿಸುವ ಶ್ರೀ ವೆಂಕಟೇಶ್ವರ ಗೋಸಂರಕ್ಷಣಾ ಟ್ರಸ್ಟ್‌ಗೆ ನೀಡಲಾಯಿತು.

ವರ್ಧಮಾನ್ ಜೈನ್ ಟಿಟಿಡಿಯನ್ನು ಬೆಂಬಲಿಸುತ್ತಿರುವುದು ಇದೇ ಮೊದಲಲ್ಲ. ದೇವಾಲಯದ ಪತ್ರಿಕಾ ಪ್ರಕಟಣೆಯ ಪ್ರಕಾರ, ಅವರು ಈ ಹಿಂದೆ ವಿವಿಧ ಟಿಟಿಡಿ ಟ್ರಸ್ಟ್‌ಗಳಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ, ಇದು ಧಾರ್ಮಿಕ ಮತ್ತು ಸಾಮಾಜಿಕ ಕಾರಣಗಳಿಗೆ ಅವರ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+