Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ; ಸಿಕ್ಕಿಂನಲ್ಲಿ ಎಸ್‌ಕೆಎಂಗೆ ಬಹುಮತ
ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದಿವೆ. ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಇದಕ್ಕೂ ಮುನ್ನ ಎರಡು ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಹಾಗೂ ಸಿಕ್ಕಿ ವಿಧಾಸಭಾ ಕ್ಷೇತ್ರಗಳ ಮತಗಳ ಏಣಿಕೆ ಇಂದು (ಜೂನ್ 2) ನಡೆಯಲಿದೆ.
ಉಭಯ ರಾಜ್ಯಗಳ ಒಟ್ಟು 82 ಸ್ಥಾನಗಳ ಮತ ಎಣಿಕೆ ಸದ್ಯದಲ್ಲೇ ಆರಂಭವಾಲಿದೆ. 60 ಸದಸ್ಯ ಬಲದ ಅರುಣಾಚಲದಲ್ಲಿ ಈಗಾಗಲೇ ಬಿಜೆಪಿ 10 ಶಾಸಕರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಇನ್ನು ಉಳಿದ 50 ಸ್ಥಾನಗಳ ಫಲಿತಾಂಶ ಇಂದು ಹೊರ ಬೀಳಲಿದೆ. ಸಿಕ್ಕಿಂನ ಎಲ್ಲಾ 32 ಸ್ಥಾನ ಮತ ಏಣಿಕೆ ಆರಂಭವಾಗಲಿದೆ.

ಈಶಾನ್ಯ ಎರಡೂ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರ ವಹಿಸಿಕೊಳ್ಳಲಿದೆ ಎಂಬುದು ಬಹಳ ಕುತೂಹಲ ಮೂಡಿಸಿದೆ.
ಸಿಕ್ಕಿಂನಲ್ಲಿ, ಹಾಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮತ್ತೆ ಅಧಿಕಾರಕ್ಕೆ ಬಂದಿದೆ. 32ರಲ್ಲಿ 31 ಸ್ಥಾನಗಳನ್ನು ಗೆದ್ದಿದೆ. ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಕೇವಲ ಒಂದು ಸ್ಥಾನವನ್ನು ಗೆದ್ದಿದೆ.
ಏಪ್ರಿಲ್ 19 ರಂದು ನಡೆದ ಅರುಣಾಚಲ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. 60 ಕ್ಷೇತ್ರಗಳಲ್ಲಿ ಬಿಜೆಪಿ 46 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಸಿಕ್ಕಿಂ ಮುಖ್ಯಮಂತ್ರಿ ಮತ್ತು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‌ನ ಸೋಮ್ ನಾಥ್ ಪೌಡ್ಯಾಲ್ ಅವರನ್ನು 7,044 ಮತಗಳಿಂದ ಸೋಲಿಸಿದ್ದಾರೆ. ಈ ಮೂಲಕ ರೆನಾಕ್ ವಿಧಾನಸಭಾ ಸ್ಥಾನವನ್ನು ಗೆದ್ದಿದ್ದಾರೆ. ಪ್ರೇಮ್ ಸಿಂಗ್ ತಮಾಂಗ್ 10,094 ಮತಗಳನ್ನು ಗಳಿಸಿದರೆ, ಎಸ್‌ಡಿಎಫ್‌ನ ಅವರ ಪ್ರತಿಸ್ಪರ್ಧಿ ಸೋಮ್ ನಾಥ್ ಪೌಡ್ಯಾ 3,050 ಮತಗಳನ್ನು ಪಡೆದಿದ್ದಾರೆ.
ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಜಯಗಳಿಸಿದೆ. 28 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಕಂಡಿದ್ದು, ಎನ್‌ಪಿಪಿ 6, ಎನ್‌ಸಿಪಿ 3 ಸೀಟುಗಳಲ್ಲಿ ಮುನ್ನಡೆಯಲ್ಲಿದೆ.
ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 45, ಎನ್‌ಪಿಪಿ 6, ಎನ್‌ಸಿಪಿ 3, ಪಿಪಿಎ 3 ಮತ್ತು ಪಕ್ಷೇತರ ಅಭ್ಯರ್ಥಿಗಳು 1 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 60 ಸದಸ್ಯ ಬಲದ ವಿಧಾನಸಭೆ ಚುನಾವಣೆ ಮತ ಎಣಿಕೆ ಭಾನುವಾರ ನಡೆಯುತ್ತಿದೆ.
ಅರುಣಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಪೆಮಾ ಖಂಡು 3ನೇ ಬಾರಿ ಸರ್ಕಾರ ರಚನೆ ಮಾಡುವತ್ತ ಹೆಜ್ಜೆ ಹಾಕಿದ್ದಾರೆ. 60 ಸದಸ್ಯ ಬದಲ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ 45 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸಿಕ್ಕಿಂನಲ್ಲಿ ಆಡಳಿತಾರೂಡ ಎಸ್‌ಕೆಎಂ ಪಕ್ಷ 29 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಅಧಿಕಾರಕ್ಕೆ ಏರುವ ಕನಸು ಕಾಣುತ್ತಿದೆ.
ಲೋಕಸಭೆ ಜೊತೆಗೆ ಅರುಣಾಚಲ ಪ್ರದೇಶ & ಸಿಕ್ಕಿಂ ವಿಧಾನಸಭೆ ಚುನಾವಣೆ ಕೂಡ ಗಮನ ಸೆಳೆದಿತ್ತು. ಇದೀಗ, ಈ ಎರಡು ರಾಜ್ಯಗಳ ಪೈಕಿ ಒಂದರಲ್ಲಿ ಬಿಜೆಪಿ ಭರ್ಜರಿಯಾಗಿ ಹವಾ ಎಬ್ಬಿಸಿದೆ.
ಬಿಜೆಪಿಗೆ ಮುನ್ನಡೆ
ಅರುಣಾಚಲ ಪ್ರದೇಶ & ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರ ಬೀಳುತ್ತಿದೆ. ಅದರಲ್ಲೂ ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಈಗ ಹೊಸ ಇತಿಹಾಸ ನಿರ್ಮಿಸುತ್ತಿದೆ. ಬರೋಬ್ಬರಿ 36 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಅರುಣಾಚಲ ಪ್ರದೇಶದಲ್ಲಿ 14 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ, ಎನ್‌ಪಿಇಪಿ 14 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸಿಕ್ಕಿಂ ಸಿಎಂ ಮುನ್ನಡೆ
ಸಿಕ್ಕಿಂನ ಆರು ರಾಜ್ಯಗಳಲ್ಲಿ ಮತ ಏಣಿಕೆ ನಡೆದಿದೆ. ಸಿಕ್ಕಿಂ ಮುಖ್ಯ ಮಂತ್ರಿ ಎಸ್‌ಕೆಎಂ ಅಭ್ಯರ್ಥಿ ಪ್ರೇಮ್ ಸಿಂಗ್ ತಮಾಂಗ್ ಸುಮಾರು 1,400 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಎಸ್‌ಕೆಎಂ 32ರಲ್ಲಿ ಮುನ್ನಡೆ
ಸಿಕ್ಕಿ ಕ್ರಾಂತಿ ಕಾರಿ ಮೋರ್ಚಾ (SKM) 32 ರಲ್ಲಿ 28 ಸ್ಥಾನಗಳಲ್ಲಿ ಮುನ್ನಡೆ. ಎಸ್‌ಡಿಎಫ್ ಪಕ್ಷ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಬಿಜೆಪಿಗೆ ಮುನ್ನಡೆ
ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 21 ಸ್ಥಾನಗಳಲ್ಲಿ ಮುನ್ನಡೆ, ನ್ಯಾಷನಲ್ ಪೀಪಲ್ ಪಾರ್ಟಿ 2, ಕಾಂಗ್ರೆಸ್ ಹಾಗೂ ಎನ್‌ಸಿಪಿ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸಿಕ್ಕಿಂನಲ್ಲಿ ಎಸ್‌ಕೆಎಂ ಮುನ್ನಡೆ
ಸಿಕ್ಕಿಂನಲ್ಲಿ ಸಿಕ್ಕಿ ಕ್ರಾಂತಿ ಕಾರಿ ಮೋರ್ಚಾ (SKM) 32 ರಲ್ಲಿ 17 ಸ್ಥಾನಗಳಲ್ಲಿ ಮುನ್ನಡೆ. ಬಿಜೆಪಿ ಹಾಗೂ ಎಸ್‌ಡಿಎಫ್ ಪಕ್ಷಗಳಿಗೆ ಒಂದು ಸ್ಥಾನದಲ್ಲಿ ಮುನ್ನಡೆ
ಸಿಕ್ಕಿಂನಲ್ಲಿ ಎಸ್‌ಕೆಎಂ ಮುನ್ನಡೆ
ಸಿಕ್ಕಿಂನಲ್ಲಿ ಸಿಕ್ಕಿ ಕ್ರಾಂತಿ ಕಾರಿ ಮೋರ್ಚಾ (SKM) 32 ರಲ್ಲಿ 17 ಸ್ಥಾನಗಳಲ್ಲಿ ಮುನ್ನಡೆ. ಬಿಜೆಪಿ ಹಾಗೂ ಎಸ್‌ಡಿಎಫ್ ಪಕ್ಷಗಳಿಗೆ ಒಂದು ಸ್ಥಾನದಲ್ಲಿ ಮುನ್ನಡೆ
ಅರುಣಾಚಾಲದಲ್ಲಿ ಬಿಜೆಪಿ 10, ಎನ್‌ಪಿಇಪಿ 1 ಸ್ಥಾನದಲ್ಲಿ ಮುನ್ನಡೆ
ಅರುಣಾಚಾಲ ಪ್ರದೇಶದಲ್ಲಿ ಬಿಜೆಪಿ 10 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ನ್ಯಾಷನಲ್ ಪೀಪಲ್ ಪಾರ್ಟಿ ಒಂದು ಸ್ಥಾನದಲ್ಲಿ ಮುಂದಿದೆ.
ಅವಿರೋಧ ಆಯ್ಕೆ ಆದ ಬಿಜೆಪಿ ಶಾಸಕರು
ಮುಕ್ತೋ – ಪೇಮಾ ಖಂಡು ಬೊಮ್ಡಿಲಾ- ಡೊಂಗ್ರು ಸಿಯೊಂಗ್ಜು ಚೌಕಂ- ಚೌನಾ ಮೇ ಹಯುಲಿಯಾಂಗ್ - ದಸಾಂಗ್ಲು ಪುಲ್ ಇಟಾನಗರ - ಟೆಚಿ ಕಾಸೊ ರೋಯಿಂಗ್ – ಮುಚ್ಚು ಮಿಥಿ ಸಾಗಲೀ – ರತು ಟೆಚಿ ತಾಲಿ – ಜಿಕ್ಕೆ ಟಾಕೊ ತಾಲಿಹಾ – ನ್ಯಾತೋ ದುಕಮ್ ಜಿರೋ-ಹಾಪೋಲಿ - ಹಗೆ ಅಪ್ಪಾ
ಅರುಣಾಚಾಲದ 50 ವಿಧಾನಸಭಾ ಕ್ಷೇತ್ರಗಳ ಮತ ಏಣಿಕೆ ಇಂದು ಬೆಳಗ್ಗೆ 6 ರಿಂದ ಆರಂಭವಾಗಿದೆ. 24 ಜಿಲ್ಲೆಗಳಲ್ಲಿ ಮತ ಏಣಿಕೆ ನಡೆದಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications