ಮೂರನೇ ಬಾರಿ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ಕೊಟ್ಟ ಶಾರುಖ್ ಖಾನ್
ನವದೆಹಲಿ, ಡಿಸೆಂಬರ್ 12: ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ತಮ್ಮ ಚಲನಚಿತ್ರ ಬಿಡುಗಡೆಯ ಮೊದಲು ವೈಷ್ಣೋದೇವಿಯನ್ನು ಭೇಟಿ ಮಾಡುವ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಇದು ಅವರ ಮೂರನೇ ಭೇಟಿಯಾಗಿದೆ.
ಹಿಂದಿ ಚಿತ್ರ ಡುಂಕಿ ಬಿಡುಗಡೆಯ ಮೊದಲು ತೀರ್ಥಯಾತ್ರೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು. ಮಂಗಳವಾರ ಶಾರುಖ್ ಖಾನ್ ತನ್ನ ಅಂಗರಕ್ಷಕರು ಮತ್ತು ವ್ಯವಸ್ಥಾಪಕರ ತಂಡದೊಂದಿಗೆ ತೀರ್ಥಯಾತ್ರೆ ಕೈಗೊಂಡು ಕಲ್ಲುಮಣ್ಣುಗಳ ಹಾದಿಯಲ್ಲಿ ನಡೆದುಕೊಂಡು ಜಮ್ಮುವಿನ ಪವಿತ್ರ ದೇಗುಲಕ್ಕೆ ಭೇಟಿ ನೀಡಿದರು.

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಶಾರುಖ್ ಖಾನ್ ಕಪ್ಪು ಪಫರ್ ಜಾಕೆಟ್ ಅನ್ನು ಹೂಡಿಯೊಂದಿಗೆ ಧರಿಸಿದ್ದರು. ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಅವರೊಂದಿಗೆ ನಡೆದುಕೊಂಡು ಹೋದರು. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡುಂಕಿ ಚಿತ್ರದಲ್ಲಿ ವಿಕ್ಕಿ ಕೌಶಲ್, ತಾಪ್ಸಿ ಪನ್ನು ಮತ್ತು ಬೊಮನ್ ಇರಾನಿ ಕೂಡ ನಟಿಸಿದ್ದಾರೆ. ಡುಂಕಿ ಡಿಸೆಂಬರ್ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
VIDEO | Bollywood actor @iamsrk visited Mata Vaishno Devi shrine earlier today. pic.twitter.com/HbjW0YczUC
— Press Trust of India (@PTI_News) December 12, 2023
ಶಾರುಖ್ ಖಾನ್ ಸರಿಯಾಗಿ ಒಂದು ವರ್ಷದ ಹಿಂದೆ ಡಿಸೆಂಬರ್ 12 ರಂದು ಪಠಾಣ್ ಬಿಡುಗಡೆಯ ಮೊದಲು ವೈಷ್ಣೋ ದೇವಿಗೆ ಭೇಟಿ ನೀಡಿದ್ದರು. ಇದು ನಾಲ್ಕು ವರ್ಷಗಳ ನಂತರ ದೊಡ್ಡ ಪರದೆಯ ಮೇಲೆ ಅವರ ಪುನರಾಗಮನವನ್ನು ಗುರುತಿಸಿತು. ವಿಶ್ವಾದ್ಯಂತ 1,000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತು. ನಂತರ ಆಗಸ್ಟ್ ನಲ್ಲಿ ಜವಾನ್ ಬಿಡುಗಡೆಗೂ ಮುನ್ನ ಮತ್ತೆ ಯಾತ್ರೆ ಕೈಗೊಂಡರು. ಈ ಚಲನಚಿತ್ರವು ವಿಶ್ವಾದ್ಯಂತ 1,100 ಕೋಟಿಗಳನ್ನು ಸಂಗ್ರಹಿಸಿದೆ. ಇದು ಈ ವರ್ಷದ ಅತಿದೊಡ್ಡ ಹಿಟ್ ಆಗಿ ಉಳಿದಿದೆ ಮತ್ತು ಇದುವರೆಗೆ ಮಾಡಿದ ಅತ್ಯಂತ ಯಶಸ್ವಿ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ.
ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡುಂಕಿ ಶಾರುಖ್ ಅವರ ಮುಂದಿನ ಬಿಡುಗಡೆಯಾಗಲಿದೆ. ಅವರು ಇನ್ನೂ 1,000 ಕೋಟಿ ಬಾಚಲು ಆಶಿಸುತ್ತಿರುವಂತೆ ತೋರುತ್ತಿದೆ. ಡುಂಕಿ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದ್ದು, ಪ್ರಭಾಸ್ ಅವರ ಸಲಾರ್ ಜೊತೆ ಪೈಪೋಟಿ ನಡೆಸಲಿದೆ. ಈ ವರ್ಷದ ಟ್ರೆಂಡ್‌ನಂತೆ ಶಾರುಖ್ ತಮ್ಮ ಚಿತ್ರಕ್ಕಾಗಿ ಯಾವುದೇ ಪ್ರಚಾರ ಸಂದರ್ಶನಗಳನ್ನು ಅಥವಾ ಭೇಟಿಗಳನ್ನು ಮಾಡುತ್ತಿಲ್ಲ.
ಡುಂಕಿಯು ಹಲವು ತಾರೆಯರನ್ನು ಹೊಂದಿದೆ. ಶಾರುಖ್ ಖಾನ್ ಜೊತೆಗೆ ಬೋಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್, ಅನಿಲ್ ಗ್ರೋವರ್ ಅವರು ವರ್ಣರಂಜಿತ ಪಾತ್ರಗಳನ್ನು ಮಾಡಿದ್ದಾರೆ. ಡುಂಕಿ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಪ್ರಸ್ತುತಿಯಾಗಿದ್ದು, ಇದನ್ನು ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ.












Click it and Unblock the Notifications